ಡಿ. 4ಕ್ಕೆ ತೆರೆಗೆ ಬರುತ್ತಿದೆ ಮೂಕಿ ಚಿತ್ರ ‘ಪುಷ್ಪಕ್’

ಬಹಳ ದಿನಗಳ ನಂತರ ಮೂಕಿ ಚಿತ್ರವೊಂದು ತೆರೆಗೆ ಬರುತ್ತಿದೆ. ಪುಷ್ಪಕ್ ಎಂಬ ಹೆಸರಿನ ಈ ಚಿತ್ರದಲ್ಲಿ ಮಾತಿನ ಸಹಾಯವೇ ಇಲ್ಲದೆ ಕಥೆ ಅರ್ಥವಾಗುವ ಹಾಗೆ ನಿರ್ದೇಶಕ ಓಂಪ್ರಕಾಶ್ನಾಯಕ್ ನಿರೂಪಣೆ ಮಾಡಿದ್ದಾರೆ, ನಾಯಕ ಒಬ್ಬ ಫೋಟೋಗ್ರಾಫರ್, ಊರಿನಿಂದ ಬಂದಿದ್ದ ಶ್ರೀಮಂತ ಯುವತಿಯನ್ನು ಆತ ಮನದಲ್ಲೇ ಪ್ರೀತಿಸುತ್ತಾನೆ. ಆದರೆ ತನ್ನ ಪ್ರೀತಿಯನ್ನು ಅವಳಿಗೆ ಹೇಳಿಕೊಳ್ಳಲು ಹಿಂಜರಿದು, ತನಗೆ ಚಹಾ ಕೊಡಲು ಬರುವ ಹೋಟೆಲ್ ಹುಡುಗನ ಕೈಲಿ ಲವ್ಲೆಟರ್ ಬರೆದು ಕೊಟ್ಟು ಕಳುಹಿಸುತ್ತಾನೆ. ಹೋಟೆಲ್ ಹುಡುಗ ಅವರ ಪ್ರೀತಿಗೆ ರಾಯಭಾರಿಯಾಗುತ್ತಾನೆ. ಹಾಗೆಯೇ ಅವನೂ ಸಹ ನಾಯಕಿಯನ್ನು ಪ್ರೀತಿಸಲು ತೊಡಗುತ್ತಾನೆ.… Read More