ನವೆಂಬರ್ 12ಕ್ಕೆ ಪರಿಶುದ್ಧ ಪ್ರೇಮ… “ಪ್ರೇಮಂ ಪೂಜ್ಯಂ”

ಚಂದನವನದಲ್ಲಿ ಬಹಳ ವರ್ಷಗಳ ನಂತರ ಮತ್ತೊಮ್ಮೆ ನವಿರಾದ ಪರಿಶುದ್ಧ ಪ್ರೇಮ ಕಾವ್ಯ ತೆರೆಮೇಲೆ ರಾರಾಜಿಸಲಿದೆಯoತೆ. ಹೌದು ಅದುವೇ “ಪ್ರೇಮಂ ಪೂಜ್ಯಂ” ಇಂತಹ ಚಿತ್ರವನ್ನ ನಿರ್ದೇಶನ ಮಾಡಿರುವುದು ವೈದ್ಯರಾದ ಡಾ.ಬಿ.ಎಸ್. ರಾಘವೇಂದ್ರ.ಬಹುತೇಕ ಡಾಕ್ಟರ್‌ಗಳೇ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಲವ್ಲಿಸ್ಟಾರ್ ಪ್ರೇಮ್ ಅಭಿನಯದವಿದೆ. ಇದು ನಟ ಪ್ರೇಮ್ 25ನೇ ಚಿತ್ರ. ಅಂದುಕೊಂಡಂತೇ ಆಗಿದ್ದರೆ ಇದೇ ೨೯ಕ್ಕೆ ಬಿಡುಗಡೆಯಾಗ ಬೇಕಿತ್ತು. ಈಗ ಸಲಗ, ಕೋಟಿಗೊಬ್ಬ ೩ ಚಿತ್ರಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ, ಅಲ್ಲದೆ 29ಕ್ಕೆ ಭಜರಂಗಿ-2 ಕೂಡ ರಿಲೀಸಾಗುತ್ತಿದೆ. ಈ ಮೂರೂ ಚಿತ್ರಗಳೇ ಬಹುತೇಕ ಥೇಟರ್‌ಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಕಾರಣ… Read More