ಯುವಪಡೆಗಳ ಜೊತೆ ಮೊಗ್ಗಿನ ಮನಸ್ಸು ನಿರ್ದೇಶನ ಶಶಾಂಕ್

“ಮೊಗ್ಗಿನ ಮನಸ್ಸು” ಚಿತ್ರದ ನಂತರ ನಿರ್ದೇಶಕ ಶಶಾಂಕ್, ಮತ್ತೊಮ್ಮೆ ಹೊಸ ಪ್ರತಿಭೆಗಳೊಂದಿಗೆ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. “ಶಶಾಂಕ್ ಸಿನೆಮಾಸ್” ಸಂಸ್ಥೆಯಡಿ, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರದ ಮುಖಾಂತರ, “ಪ್ರವೀಣ್” ಎಂಬ ಹೊಸ ನಾಯಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವೈದ್ಯಕೀಯ ಪದವೀಧರರಾದ ಪ್ರವೀಣ್, ಹೊಸಪೇಟೆ ಮೂಲದವರಾಗಿದ್ದು, ನಟನಾಗುವ ಆಸಕ್ತಿಯಿಂದ ಅದಕ್ಕೆ ಬೇಕಾಗುವ ಎಲ್ಲಾ ತರಬೇತಿಗಳನ್ನು ಪಡೆದು ಬೆಳ್ಳಿತೆರೆ ಏರಲು ಸಜ್ಜಾಗಿದ್ದಾರೆ. ಇನ್ನೂ ಶೀರ್ಷಿಕೆ ನಿಗದಿಯಾಗದ, ಭಾವುಕ ಪ್ರೇಮಕಥೆಯ ಈ ಚಿತ್ರಕ್ಕೆ ಶಶಾಂಕ್ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ. ಲಾಕ್ಡೌನ್ ಗೂ ಮುನ್ನ… Read More