‘ಕಾಸಿನ ಸರ’ ಚಿತ್ರಕ್ಕೆ ಚಾಲನೆ

ನೇಟಿವ್ ಕ್ರಿಯೇಷನ್ಸ್ ಅರ್ಪಿಸುವ ಗ್ರಾಮೀಣ ಸೊಗಡಿನ ಕೌಟುಂಬಿಕ ಕತೆಯನ್ನು ಒಳಗೊಂಡ “ಕಾಸಿನ ಸರ” ಚಿತ್ರದ ಚಿತ್ರೀಕರಣಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕ್ಲ್ಯಾಪ್ ಮಾಡಿ ಚಾಲನೆ ನೀಡಿದರು. ನಗರದ ಮಲೇಶ್ವರಂನ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಸಚಿವರು, ‘ಉತ್ತಮ ಕಥೆಯನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು ಕುಟುಂಬ ಪ್ರಧಾನ ಚಿತ್ರ. ಸ್ನೇಹಿತರಾಗಿರುವ ದೊಡ್ಡನಾಗಯ್ಯ ಅವರಿಗೆ ಕೃಷಿ ಎಂದರೆ ತುಂಬಾ ಅಚ್ಚುಮೆಚ್ಚು. ಗ್ರಾಮೀಣ ಭಾಗದಿಂದ ಬಂದವರಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಚಿತ್ರ ಉತ್ತಮವಾಗಿ ಮೂಡಿಬರಲಿ.… Read More