ಕರಣ್ ಜೋಹರ್‌ಗೆ ಕೊರೊನಾ ಕಾಟ..!

ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಬಳಿ ಕೆಲಸ ಮಾಡುವ ಇಬ್ಬರು ನೌಕರರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ಕರಣ್ ಜೋಹರ್ ಸ್ವಯಂ ಪರೀಕ್ಷೆಗೊಳಗಾಗಿದ್ದಾರೆ. ಕರಣ್ ಮನೆಯಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೊಳಗಾಗಿರುವ ಕರಣ್ ತಮಗೆ ಕೊರೋನಾ ನೆಗೆಟಿವ್ ಬಂದಿರುವುದಾಗಿ ತಿಳಿಸಿದ್ದಾರೆ. ಹಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಕರಣ್ ಕುಟುಂಬಸ್ಥರೆಲ್ಲರೂ ಸ್ವಯಂ ಪರೀಕ್ಷೆ ಮಾಡಿಸಿಕೊಂಡಿದ್ದಲ್ಲದೆ, ಮುಂದಿನ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಕಳೆಯಲಿದ್ದಾರೆ. Read More