Cinisuddi Fresh Cini News 

ಡಿ.10ಕ್ಕೆ ತೆರೆಗೆ ಬರುತ್ತಿದೆ ಶರಣ್ ಅಭಿನಯದ “ಅವತಾರ ಪುರುಷ” ಚಿತ್ರ

ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ “ಅವತಾರ ಪುರುಷ” ಚಿತ್ರ ಇದೇ ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ.. ನನ್ನ ಈವರೆಗಿನ ಸಿನಿಪಯಣದಲ್ಲೇ ದೊಡ್ಡ ಬಜೆಟ್ ನ‌ ಚಿತ್ರವಿದು. ಇಂತಹ ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ‌ ಸಿಂಪಲ್ ಸುನಿ‌, ಅವರ ಹೆಸರಿನಲ್ಲ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಇನ್ನೂ ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ… Read More
Cinisuddi Fresh Cini News 

ಈ ವಾರ ತೆರೆಯ ಮೇಲೆ “ಬೈ ಒನ್ ಗೆಟ್ ಒನ್ ಫ್ರೀ”

ಬೆಳ್ಳಿ ಪರದೆ ಮೇಲೆ ವಿಭಿನ್ನ ಕಥಾಹಂದರವನ್ನು ಹೊಂದಿರುವಂಥ “ಬೈ ಒನ್ ಗೆಟ್ ಒನ್ ಫ್ರೀ” ಚಿತ್ರ ಈ ವಾರ ತೆರೆದು ಮೇಲೆ ಬಿಡುಗಡೆಯಾಗುತ್ತಿದೆ. ವಿಭಿನ್ನ ಶೈಲಿಯ ಈ ಚಿತ್ರದ ಶೀರ್ಷಿಕೆ ಹೇಗೆ ಆಕರ್ಷಣೆಯೋ ಹಾಗೆ ಈ ಚಿತ್ರದ ಮತ್ತೊಂದು ಆಕರ್ಷಣೆ ಅವಳಿ ಸಹೋದರರು. ಮೈಸೂರಿನವರಾದ ಮಧು ಮಿಲನ್ ಹಾಗೂ ಮನು ಮಿಥುನ್ ಎಂಬ ಅವಳಿ ಸಹೋದರರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರವನ್ನು ಅವರೇ ನಿರ್ಮಿಸಿದ್ದಾರೆ. ಬಹುಭಾಷಾ ನಟ ಕಿಶೋರ್ ಇಲ್ಲಿ ಮನ್ಮಥ ಎಂಬ ಪೋಸ್ಟ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಹರೀಶ್… Read More
Cinisuddi Fresh Cini News 

“ಸೇನಾಪುರ” ಚಿತ್ರದ ಟೀಸರ್ ಬಿಡುಗಡೆ

ಅಕ್ರಮ ಗಣಿ ಧಣಿಗಳ ಸತ್ಯ ಘಟನೆಗಳು ಒಂದು ಕಾಲಘಟ್ಟದಲ್ಲಿ ಅಕ್ರಮ ಗಣಿ ದಂಧೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಬಿಸಿಲು ನಾಡಿನ ಒಡಲಲ್ಲಿ ನಡೆದಿದ್ದ, ದಂಧೆಯ ಕಬಂಧ ಬಾಹುಗಳು ಕರಾವಳಿಯ ಕಿನಾರೆಗಳವರೆಗೂ ಮೈಚಾಚಿಕೊಂಡಿತ್ತು. ಇಂತಹ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು ’ಸೇನಾಪುರ’ ಚಿತ್ರದಲ್ಲಿ ಬಳಸಲಾಗಿದೆ. ಕತೆ ಬರೆದು ನಿರ್ದೇಶನ ಮಾಡಿರುವುದು ಕುಂದಾಪುರದ ನವ ಪ್ರತಿಭೆ ಗುರುಸಾವನ್. ಇವರು ಹೇಳುವಂತೆ ಮೊದಲು ವೆಬ್ಸೀರೀಸ್ಗೆ ಅಂತಲೇ ಮಾಡಲು ಚಿಂತನೆ ನಡೆಸಲಾಗಿತ್ತು. ಮುಂದೆ ಅದು ಚಿತ್ರವಾಗಿ ರೂಪಾಂತರಗೊಂಡಿತು. ಸಮಾಜ ಮತ್ತು ಪ್ರಕೃತಿ ಎಲ್ಲರಿಗೂ ಎಲ್ಲವನ್ನು ಸಮನಾಗಿ… Read More
Cinisuddi Fresh Cini News 

ಫ್ಯಾಮಿಲಿ ಲವ್ ಎಂಟರ್ಟೈನರ್ “ಸುಕನ್ಯ ದ್ವೀಪ” ಚಿತ್ರ

ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರವಿರಬಹುದು ಎಂದುಕೊಳ್ಳುತ್ತಾರೆ. ಆದರೆ ಅಂಥಾ ಯಾವುದೇ ಸಸ್ಪೆನ್ಸ್ , ಥ್ರಿಲ್ಲರ್ ಇರದೆ ಪಕ್ಕಾ ಫ್ಯಾಮಿಲಿ ಲವ್ ಎಂಟರ್ಟೈನರ್ ಕಥಾಹಂದರಕ್ಕೆ ಹಾಸ್ಯದ ಟಚ್ ಕೊಟ್ಟು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಎಂ.ಡಿ. ಅಫ್ಜಲ್ ಮಾಡಿದ್ದಾರೆ. ಸೂಪರ್ ಸ್ಟಾರ್ ಪತ್ರಿಕೆಯ ಸಂಪಾದಕರೂ ಆದ ಇವರು ಈಗಾಗಲೇ ಮೊಬೈಲ್ ರಾಜ ಎನ್ನುವ ಚಿತ್ರ ನಿರ್ದೇಶಿಸಿದ್ದು, ಅದಿನ್ನೂ ಬಿಡುಗಡೆಯಾಗಿಲ್ಲ, ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಎರಡನೇ ಹಂತಕ್ಕೆ ಅಣಿಯಾಗಿದ್ದು, ಅದಕ್ಕೂ ಮುನ್ನ ಮಾಧ್ಯಮಗಳ ಮುಂದೆ ಹಾಜರಾಗಿ ಚಿತ್ರೀಕರಣದ ಅನುಭವಗಳನ್ನು… Read More
Cinisuddi Fresh Cini News 

ವಿಶೇಷತೆಗಳ ಗುಚ್ಚ “ತ್ರಿವೇದಂ’

ಹೊಸಬರ ‘ತ್ರಿವೇದಂ’ ಚಿತ್ರದಲ್ಲಿ ಹಲವು ವಿನೂತನಗಳು ಇರುವುದು ವಿಶೇಷ. ಸಾಮಾನ್ಯವಾಗಿ ನೈಜ ಕತೆಯನ್ನು ಆದರಿಸಿದ ಚಿತ್ರಗಳು ಬಂದಿವೆ, ಬರುತ್ತಲೆ ಇದೆ. ಆದರೆ ಇದರಲ್ಲಿ ಮೂರು ಸತ್ಯ ಘಟನೆಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆದಿದೆ. 2012ರಲ್ಲಿ ಬೆಂಗಳೂರಿನ ಕುರುಬರಹಳ್ಳಿ, ಆರು ವರ್ಷದ ಕೆಳಗೆ ಮಂಡ್ಯಾ ಮತ್ತು ಹನ್ನರೆಡು ವರ್ಷದ ಹಿಂದೆ ಮೈಸೂರು ಆಸುಪಾಸುದಲ್ಲಿ ಜರುಗಿದೆ. ಅಂದರೆ ತ್ರಿವಳಿ ಕತೆಗಳನ್ನು ಒಗ್ಗೂಡಿಸಿ ಒಂದು ಸಿನಿಮಾ ಮಾಡಲು ಹೊರಟಿದ್ದಾರೆ. ಹಾಗಂತ ಒಂದಕ್ಕೊಂದು ಸಂಬಂದವಿರುವುದಿಲ್ಲ ಹಾಗೂ ಸಮಾನಾಂತರವಾಗಿ ಸಾಗುತ್ತದೆ. ಎಲ್ಲವು ಪ್ರೀತಿ ಕುರಿತಾಗಿದ್ದು ಇರುತ್ತದೆ. ಅದಕ್ಕಾಗಿ ಕತೆಗೆ ಪೂರಕವಾಗುವಂತೆ ಶೀರ್ಷಿಕೆಯನ್ನು… Read More
Cinisuddi Fresh Cini News 

ಲವ್ ಮಿ or ಹೇಟ್ ಮಿ” ಚಿತ್ರ ಶುಭಾರಂಭ

ಗೌರಿ ಗಣೇಶ ಹಬ್ಬದ ಈ ಸಂದರ್ಭದಲ್ಲಿ ಹಲವಾರು ಚಿತ್ರಗಳ ಸದ್ದಿಲ್ಲದೆ ಚಿತ್ರಗಳು ಸೆಟ್ಟೇರುತ್ತಿದೆ. ಆ ಸಾಲಿನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ರಚಿತಾ ರಾಮ್ ಅಭಿನಯದ “ಲವ್ ಮಿ or ಹೇಟ್ ಮಿ” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಿಲನ ನಾಗರಾಜ್ ಆರಂಭ ಫಲಕ ತೋರಿದರು.‌ ದಿನಕರ್ ತೂಗುದೀಪ ಕ್ಯಾಮೆರಾ ಚಾಲನೆ ಮಾಡಿದರು. ಪ್ರಥಮ ಬಾರಿಗೆ ದೀಪಕ್ ಗಂಗಾಧರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ… Read More
Cinisuddi Fresh Cini News 

ಈ ವಾರ ತೆರೆ ಮೇಲೆ ಬರಲಿದೆ ‘ಅಂದವಾದ’ ಲವ್ ಸ್ಟೋರಿ

ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ಡಿ.ಆರ್. ಮಧು ಜಿ ರಾಜ್ ನಿರ್ಮಿಸಿರುವ ಅಂದವಾದ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಳೆಗಾಲದಲ್ಲಿ ನಡೆಯುವ ಕ್ಯೂಟ್ ಲವ್ ಸ್ಟೋರಿ ಜೊತೆ ಒಂದೊಳ್ಳೆ ಮೆಸೇಜ್ ಕೊಡುವ, ಕಾಡುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ಪೂರ್ತಿ ನಗಿಸುತ್ತಲೇ, ಕೊನೆಗೆ ನೋಡುಗರ ಕಣ್ಣು ತೇವಗೊಳಿಸಬಲ್ಲ ಗಂಭೀರ ಕಥಾ ವಸ್ತು ಕೂಡಾ ಇದರಲ್ಲಿದೆ. ಈ ಚಿತ್ರಕ್ಕೆ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ, ಗುರುಕಿರಣ್ ಹಿನ್ನೆಲೆ ಸಂಗೀತ, ಹರೀಶ್ ಎನ್. ಸೊಂಡೇಕೊಪ್ಪ ಛಾಯಾಗ್ರಹಣ,… Read More
Cinisuddi Fresh Cini News 

‘ಅಂದವಾದ’ ಸಿನಿಮಾ

ಮೊನ್ನೆ ನಡೆದ ಸಮಾರಂಭದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಿಷಭ್‍ಶೆಟ್ಟಿಯವರು `ಅಂದವಾದ’ ಎಂಬ ಚಿತ್ರದ ಹಾಡುಗಳ ಸಿ.ಡಿ.ಯನ್ನು ಬಿಡುಗಡೆ ಮಾಡಿದರು. ಯೋಗಿ ದ್ವಾರಕೀಶ್ ಮುಖ್ಯ ಅತಿಥಿಯಾಗಿದ್ದರು. ಈ ಚಿತ್ರದ ನಾಯಕಿ ಅಂದವಾಗಿದ್ದಾರೆ. ಅದಕ್ಕೇ ನಾನು ಈ ಸಮಾರಂಭಕ್ಕೆ ಬಂದೆ' ಎಂದು ಹಾಸ್ಯಮಯ ಧಾಟಿಯಲ್ಲಿ ಹೇಳಿದ ಯೋಗಿ,ಉತ್ತಮ ಕಥಾವಸ್ತುವಿನಿಂದ ಕೂಡಿದ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‍ನಲ್ಲಿ ಗೆಲ್ಲಲು ಸಾಧ್ಯ, ಚಿತ್ರ ತಯಾರಿಕೆಯಲ್ಲಿ ಹಣಕ್ಕಿಂತ ಬುದ್ಧಿವಂತಿಕೆ ಮುಖ್ಯ. ಗುರುಕಿರಣ್ ಅವರು ನಾವು ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲೊಬ್ಬರು ಅವರು ಕನ್ನಡದ ಎ.ಆರ್.ರಹಮಾನ್. ರೀರಿಕಾರ್ಡಿಂಗ್‍ನಲ್ಲಂತೂ ಮಾಸ್ಟರ್’ ಎಂದು ಹೇಳಿದರು. ನಾನು… Read More
Cinisuddi Fresh Cini News 

ತೆರೆ ಮೇಲೆ ಬರುತ್ತಿದೆ ಹಳ್ಳಿ ‘ಮದ್ವೆ’ ಸಂಭ್ರಮ

ಮದುವೆ ಎಂಬ ಹೆಸರಿನಲ್ಲೇ ಈಗಾಗಲೇ ಸಾಕಷ್ಟು ಚಿತ್ರಗಳು ಸ್ಯಾಂಡಲ್‍ವುಡ್‍ನಲ್ಲಿ ಬಂದಿದೆ. ಈಗ ಮೈಸೂರು, ಮಂಡ್ಯದ ಮೂಲದ ಪ್ರತಿಭೆಗಳು ಸೇರಿಕೊಂಡು ಮದ್ವೆ ಎಂಬ ಚಿತ್ರವನ್ನು ನಿರ್ಮಿಸಿದ್ದು ಇದರ ಮೊದಲ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. 70-80ರ ದಶಕದಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮವನ್ನೇ ಎಳೆಯನ್ನಾಗಿಟ್ಟುಕೊಂಡಿರುವ ಈ ಚಿತ್ರಕ್ಕೆ ಶ್ರೀರಂಗಪಟ್ಟಣ ತಾಲ್ಲೂಕಿನ ಅಂಕನಹಳ್ಳಿಯ ಪರಮೇಶ್ ಈ ಚಿತ್ರದ ಕಥಾ ಹಂದರ ಹೆಣೆದು ಚಿತ್ರಕ್ಕೆ ಬಂಡವಾಳ ಕೂಡ ಹಾಕಿದ್ದಾರೆ. ಹಿಂದುಕೃಷ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ವಧು-ವರರಾಗಿ ಆರ್ಯ, ಆರೋಹಿಗೌಡ ಕಾಣಿಸಿಕೊಂಡಿದ್ದರೆ, ವಧುವಿನ ಅಣ್ಣನ ಪಾತ್ರದಲ್ಲಿ ಮಂಜು ಮಾಧವ ಇದ್ದರೆ,ಪುಟ್ಟತಾಯಮ್ಮ ಅಜ್ಜಿಯಾಗಿ ಅಭಿನಯಿಸಿದ್ದಾರೆ.… Read More
Cinisuddi Fresh Cini News 

ಬಹುನಿರೀಕ್ಷಿತ ‘8ಎಂಎಂ’ ಚಿತ್ರ ನಾಳೆ ತೆರೆಗೆ, ಹೊಸ ಅವತಾರದಲ್ಲಿ ನವರಸ ನಾಯಕ

ಕಲಾವಿದರ ನಿಜವಾದ ವಯಸ್ಸಿಗೂ ತೆರೆ ಮೇಲೆ ನಟಿಸುವ ಪಾತ್ರದ ವಯಸ್ಸಿಗೂ ಹೊಂದಾಣಿಕೆಯೇ ಇರುವುದಿಲ್ಲ, ಆದರೆ ನವರಸ ನಾಯಕ ಜಗ್ಗೇಶ್ ಅವರು 8 ಎಂಎಂ ಚಿತ್ರದಲ್ಲಿ ತಮ್ಮ ಈಗಿನ ವಯಸ್ಸಿನ ಪಾತ್ರದಲ್ಲೇ ಅಂದರೆ 55 ವರ್ಷದ ವಯಸ್ಕನಾಗಿ ಕಾಣಿಸಿಕೊಂಡಿದ್ದು, ತೆರೆಯ ಮೇಲೆ ವಿಶಿಷ್ಟ ರೀತಿಯಲ್ಲಿ ಬರಲು ಸಜ್ಜಾಗುತ್ತಿದ್ದಾರೆ. ಮೊನ್ನೆಯಷ್ಟೇ ಸೆನ್ಸಾರ್ ಮಂಡಳಿಯು ಈ ಚಿತ್ರವನ್ನು ವೀಕ್ಷಿಸಿ ಯು/ಎ ಸರ್ಟಿಫಿಕೇಟ್ ನೀಡಿದೆ. 8 ಎಂಎಂ ಚಿತ್ರವು ಒಂದು ಫುಲ್ ಮೀಲ್ಸ್ ನಂತಿದ್ದೂ ಕಮರ್ಷಿಯಲ್ ಚಿತ್ರದಲ್ಲಿರಬೇಕಾದ ಆ್ಯಕ್ಷನ್, ಎಮೋಷನ್, ಸಸ್ಪೆನ್ಸ್ ಎಲ್ಲ ಅಂಶಗಳಿದ್ದು ಪ್ರೇಕ್ಷಕರನ್ನು ಸೆಳೆಯುವ ಲಕ್ಷಣಗಳಿವೆ. ಇತ್ತೀಚೆಗೆ… Read More