ತೆರೆಗೆ ಬರಲು‌ ‘ಕಲಾವಿದ’ ಸಿದ್ದ

ಪದ್ಮರಾಜ್ ಫಿಲಂಸ್ ನಿರ್ಮಿಸಿರುವ ‘ಕಲಾವಿದ’ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶಿವಾನಂದ್ ಹೆಚ್.ಡಿ ನಿರ್ದೇಶಿಸಿದ್ದಾರೆ.‌ ಹನ್ನೆರಡು ವರ್ಷಗಳಿಂದ ಹಲವು ಕನ್ನಡ ಚಿತ್ರಗಳಿಗೆ ಸಹಾಯಕ ಹಾಗೂ ಸಹ ನಿರ್ದೇಶನ ಮಾಡಿರುವ ಅನುಭವ ಇವರಿಗಿದೆ. ‘ಕಲಾವಿದ’ ಶಿವಾನಂದ್ ನಿರ್ದೇಶನದ ಮೊದಲ ಚಿತ್ರ. ‘ಕಲಾವಿದ’ ಚಿತ್ರದ ನಾಯಕನಾಗಿ ಪ್ರದೀಪ್ ಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಆಗಿರುವ ಪ್ರದೀಪ್ ಕುಮಾರ್ ಮೂಲತಃ ಹಾಸನ‌ ಜಿಲ್ಲೆಯವರು. ಬಾಲ್ಯದಿಂದಲೇ ಸಿನಿಮಾ ದಲ್ಲಿ ನಟಿಸಬೇಕೆಂಬ ಆಸೆ… Read More