“ದೃಶ್ಯ-2” ಚಿತ್ರದ ಟ್ರೇಲರ್ ಲಾಂಚ್ ಮಾಡಿದ ಕಿಚ್ಚ

ಬೆಳ್ಳಿ ಪರದೆ ಮೇಲೆ ಈಗ ಸಾಲು ಸಾಲಾಗಿ ಚಿತ್ರಗಳ ಹಬ್ಬ ಶುರುವಾದಂತಿದೆ. ವಾರಕ್ಕೆ 5 ರಿಂದ 6 ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಮುಗಿಬಿದ್ದಿದೆ. ಇದರ ನಡುವೆ ಸ್ಟಾರ್ ಚಿತ್ರಗಳ ಅಬ್ಬರ ಜೋರಾಗಿದೆ. ಆ ನಿಟ್ಟಿನಲ್ಲಿ 2014 ರಲ್ಲಿ ತೆರೆಕಂಡಿದ್ದ “ದೃಶ್ಯ” ಚಿತ್ರದ ಮುಂದುವರಿದ ಭಾಗ “ದೃಶ್ಯ 2” ಬಿಡುಗಡೆ ಹಂತವನ್ನು ತಲುಪಿದೆ. ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಅಚ್ಚುಕಟ್ಟಾಗಿ ಆಯೋಜಿಸಿದ್ದರು. ಕಿಚ್ಚ ಸುದೀಪ ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡುತ್ತಾ ಈ ಸಮಾರಂಭಕ್ಕೆ ಬಂದಿದ್ದು , ನನಗೆ ಖುಷಿಯಾಗಿದೆ. ರವಿ ಅಣ್ಣ… Read More