“ಡೆಕ್ಕನ್ ಕಿಂಗ್” ಸಂಸ್ಥೆಯಿಂದ 6 ಸಿನಿಮಾಗಳ ನಿರ್ಮಾಣ

ಒಂದು ಸಿನಿಮಾ ನಿರ್ಮಾಣ ಮಾಡಿ ಸೈ ಎನಿಸಿಕೊಳ್ಳುವುದೇ ಕಷ್ಟದ ಮಾತು. ಹೀಗಿರುವಾಗ ಏಕಕಾಲಕ್ಕೆ 6 ಸಿನಿಮಾಗಳನ್ನು ನಿರ್ಮಾಣ ಮಾಡುವುದು ನಿಜಕ್ಕೂ ಒಂದು ಸಾಹಸ. ಅಂತಹ ಸಾಹಸಕ್ಕೆ ಕೈ ಹಾಕಿರುವುದು ‘ಡೆಕ್ಕನ್ ಕಿಂಗ್’ ಸಂಸ್ಥೆ. ಈ ಸಂಸ್ಥೆಯ ಬಿಜು ಶಿವಾನಂದ್ ಅವರು ಈ ಎಲ್ಲ ಸಿನಿಮಾಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಈ ಸಿನಿಮಾಗಳು ಮೂಡಿಬರಲಿವೆ. ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ‘ಡೆಕ್ಕನ್ ಕಿಂಗ್’ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ‘ಸ್ಥಂಭಂ’, ‘ಸಮರ್ಥ್’, ‘ಮಂಗಳೂರು’ ಮತ್ತು ‘ಫೆಬ್ರವರಿ… Read More