Cinisuddi Fresh Cini News 

ಅಧೀರನಿಂದ ಕೊರೋನಾ ಜಾಗೃತಿ.. !

ಮಾಸ್ಕ್ ಹಾಕಿಕೊಂಡು ಕೊರೊನಾ ವೈರಸ್ನಿಂದ ದೂರ ಇರಿ ಎಂದು ಕೆಜಿಎಫ್ ಚಿತ್ರದಲ್ಲಿ ಬರುವ ಖಳನಾಯಕ ಅಧೀರ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾನೆ. ಅಧೀರನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಜಯ್‍ದತ್ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಕನ್ಫೂಸ್ ಆಗಬೇಡಿ. ಬೊಮ್ಮನಹಳ್ಳಿಯ ಬಿಬಿಎಂಪಿಯವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಆಧೀರನನ್ನು ಬಳಸಿದ್ದಾರೆ. ಕೆಜಿಎಫ್ ಚಿತ್ರದ ಅಧೀರ ರುಮಾಲಿನ ಬಟ್ಟೆಯಿಂದ ಬಾಯಿ ಮುಚ್ಚಿಕೊಂಡಿರುವ ಫೋಟೋ ಹಾಕಿ, ಮಾಸ್ಕ್ ಹಾಕಿಕೊಳ್ಳಿ, ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ನೋಡಿ ಅಧೀರನು ಕೂಡ ಮಾಸ್ಕï ಹಾಕಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕಂಡು ಖುಷಿಯಾದ ಕೆಜಿಎಫ್… Read More
Cinisuddi Fresh Cini News 

ಕೊರೋನ ಚ್ಯಾರಿಟಿಗಾಗಿ  400km ಓಡುತ್ತಿರುವ ಸುಮನ್ ನಗರ್ ಕರ್

ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸ್ಯಾಂಡಲ್ ವುಡ್ ತಾರೆಯರೂ ಸಹ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್ ಕೂಡ ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ. ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ… Read More
Bollywood Cini Gossips Cinisuddi Fresh Cini News 

ಹೋಂ ಕ್ವಾರಂಟೈನ್ ನಲ್ಲಿ ಬಾಲಿವುಡ್ ನಟ ಆಮಿರ್ ಖಾನ್

ಬಾಲಿವುಡ್ ನಟ ಕಂ ನಿರ್ದೇಶಕ ಅಮೀರ್ ಖಾನ್ ಅವರ ಮನೆಗೂ ಈಗ ಕೊರೋನಾ ವೈರಸ್ ದಾಳಿ ಇಟ್ಟಿದೆ. ಅಮೀರ್ ಖಾನ್ ಅವರ ಮನೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಈಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನಟ ಅಮೀರ್ ಖಾನ್ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ. ಸ್ವತ: ಅಮೀರ್ ಖಾನ್ ಅವರೇ ಈ ಬಗ್ಗೆ ಟ್ವಿಟ್ ಮಾಡಿದ್ದು, ನಮ್ಮ ಕುಟುಂಬದ ಎಲ್ಲರಿಗೂ ಕೊರೋನಾ ಪರೀಕ್ಷೆ ಮಾಡಿಸಿದ್ದು, ನಮ್ಮಲ್ಲಿ ಯಾರಿಗೂ ಕೊರೋನಾ ಬಂದಿಲ್ಲ ಎಂದು ತಿಳಿಸಿದ್ದಾರೆ. ಈಗ ಅಮೀರ್ ಖಾನ್ ಅವರು ತಮ್ಮ… Read More
Cini Gossips Cinisuddi Fresh Cini News 

ರಾಜಕಾರಣಿಗಳು-ಸೆಲೆಬ್ರೆಟಿಗಳ “ಬದಗಾಲು ನೀನು” ಹಾಡಿನಲ್ಲಿ ಕಿಚ್ಚ ಏಕಿಲ್ಲ..?

ಲಾಕ್ ಡೌನ್ ಸಡಿಲವಾದರೂ ಸೋಂಕು ತಗಲುವುದು ಕಡಿಮೆಯಾಗದೇ ವ್ಯಾಪಕವಾಗಿ ಹರಡುತ್ತಿದೆ. ಇದರ ಮಧ್ಯೆ ಎಲ್ಲಾ ಮಾಧ್ಯಮಗಳು, ಸೆಲೆಬ್ರೆಟಿಗಳು, ರೇಡಿಯೋಗಳು ಪತ್ರಿಕೆಗಳು, ಸೋಷಿಯಲ್ ಮೀಡಿಯಾ ಹೀಗೆ ಎಲ್ಲಾ ಕಡೆಯಿಂದನೂ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದು, ಪವನ್ ಒಡೆಯರ್ ನಿರ್ದೇಶನದಲ್ಲಿ ರಾಜ್ಯ ಸರ್ಕಾರದ ಸಂದೇಶ ಸಾರುವ ನಿಟ್ಟಿನಲ್ಲಿ ಒಂದು ಹಾಡು ತಯಾರಾಗುತ್ತಿದ್ದು, ಕನ್ನಡ ಟಾಪ್ ಸೆಲೆಬ್ರೆಟಿಗಳು ನಟಿಸಿದ್ದಾರೆ. ಆದರೆ ಈ ಒಂದು ಹಾಡಿನಲ್ಲಿ ಕಿಚ್ಚ ಸುದೀಪ್ ಮಾತ್ರ ಕಾಣಿಸಿಕೊಂಡಿಲ್ಲ ,ಅದು ಯಾಕೆ ಎಂಬ ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿ ಕಾಡತೊಡಗಿದೆ. ಕರುನಾಡಿನ ಸ್ಟಾರ್ ಗಳಾದ ಕ್ರೇಜಿ ಸ್ಟಾರ್… Read More
Cini Gossips Cinisuddi Fresh Cini News Kollywood 

ಸೂಪರ್ ಸ್ಟಾರ್ ರಜನಿ ಕೊಟ್ಟ ಅಕ್ಕಿಯನ್ನು ತಮಿಳು ಫಿಲಂ ಚೇಂಬರ್ ತಿರಸ್ಕರಿಸಿದ್ದೇಕೆ..?

ತಮಿಳು ಫಿಲಂ ಚೇಂಬರ್‍ಗೆ ಸೂಪರ್‍ಸ್ಟಾರ್ ರಜನೀಕಾಂತ್ ಒಂದು ಸಾವಿರ ಮೂಟೆ ಅಕ್ಕಿ ಕಳುಹಿಸಿದರು, ಅದು ಚೇಂಬರ್‍ಗೆ ತಲುಪಿದ ಕ್ಷಣದಲ್ಲೇ ನಿನ್ನ ಅಕ್ಕಿ ಮೂಟೆ ಯಾರಿಗೆ ಬೇಕು ? ನಾವೇನು ಕೇಳಿದ್ದೇವಾ ? ವಾಪಾಸ್ ತಗೋ ಎನ್ನುವ ಮೂಲಕ ತಮಿಳು ಫಿಲಂ ಚೇಂಬರ್ ರಜನೀ ವಿರುದ್ದ ಕಟು ಟೀಕೆ ಮಾಡಿದೆ. ಈ ಘಟನೆಯಿಂದ ಸ್ವತ: ರಜನೀ ಬೆಚ್ಚಿ ಬಿದ್ದಿದ್ದಾರೆ. ಕೋವಿಡ್ 19 ಬಂದು ಇಡೀ ತಮಿಳು ಚಿತ್ರರಂಗದ ಎಲ್ಲಾ ಆಯಾಮುಗಳೂ ಕೆಲಸ ನಿಲ್ಲಿಸಿವೆ. ಯಾರಿಗೂ ಕೆಲಸವಿಲ್ಲ, ಈ ವೈರಸ್ ಕರ್ನಾಟಕವನ್ನೂ ಮೀರಿ ಹೋಗಿದೆ. ಇದೊಂದು ಅನಿರೀಕ್ಷಿತ… Read More
Cinisuddi Fresh Cini News 

ಹಸಿದವರಿಗೆ ಆಸರೆಯಾದ ಡಾಲಿ ಧನಂಜಯ್

ಸಿನಿಮಾ ನಟರು ಎಂದರೆ ಕೇವಲ ತೆರೆಯ ಮೇಲಷ್ಟೇ ನಿರ್ದೇಶಕರು ಹೇಳಿಕೊಟ್ಟ ಹಾಗೆ ಬಡವರನ್ನು ಉದ್ದಾರ ಮಾಡುವ, ಅವರ ಹಸಿವನ್ನು ನೀಗಿಸುವ ಹೀರೋಗಳಲ್ಲ, ಅಂಥಾ ತುರ್ತು ಸಂದರ್ಭ ಬಂದಾಗ ತಾವೂ ಸಹ ತಮ್ಮ ಕೈಲಾದ ಸಹಾಯ ಮಾಡಬಲ್ಲೆವು ಎಂದು ಈಗಾಗಲೇ ಹಲವಾರು ಕಲಾವಿದರು ತೋರಿಸಿಕೊಟ್ಟಿದ್ದಾರೆ. ತಾವು ಬರೀ ಡೈರೆಕ್ಟರ್ ಹೇಳಿಕೊಟ್ಟ ಹಾಗೆ ಸೋಷಿಯಲ್ ಸರ್ವೀಸ್ ಮಾಡಿ ಹೀರೋಗಳಾಗಿ ಮೆರೆಯುವವರಲ್ಲ. ಅದನ್ನು ತಮ್ಮ ಜೀವನದಲ್ಲೂ ಸಹ ಅಳವಡಿಸಿಕೊಳ್ಳಬಲ್ಲೆವು ಎಂಬುದನ್ನು ನಿರೂಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈಗ ಅಂಥವರ ಸಾಲಿಗೆ ಟಗರು ಖ್ಯಾತಿಯ ನಟ ಡಾಲಿ ಧನಂಜಯ ಕೂಡ… Read More
Cinisuddi Fresh Cini News 

ಬುಡಕಟ್ಟು ಜನರಿಗೆ ಆಹಾರ ಸಾಮಗ್ರಿ ತಲುಪಿಸಿದ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು

ಕಾಡಂಚಿನ ಜನರ ನೋವಿಗೆ ಮತ್ತೆ ಮಿಡಿದಿದ್ದಾರೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು. ಕಾಡನ್ನೇ ನಂಬಿಕೊಂಡು ಬದುಕುತ್ತಿರುವ ಅನೇಕ ಬುಡಕಟ್ಟು ಕುಟುಂಬಗಳಿಗೆ ಈ ಹಿಂದೆ ಶ್ರುತಿ ಅವರು ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ನೀಡಿದ್ದರು. ಈಗ ನೂರೈವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಪೂರೈಕೆ ಮಾಡಿದ್ದಾರೆ. ಕೊರೋನಾ ವೈರಸ್ ಇಡೀ ಜಗತ್ತನ್ನೇ ತಲ್ಲಣಕ್ಕೀಡು ಮಾಡಿದೆ. 21 ದಿನಗಳ ಕಾಲ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅನೇಕರು ಆಹಾರ ಸಿಗದೇ ಪರದಾಡುತ್ತಿದ್ದಾರೆ. ನಗರಗಳಲ್ಲಿ ಇರುವ ಬಡವರು, ವಲಸೆ ಕಾರ್ಮಿಕರಿಗೆ ಕೆಲ ಸಂಘ ಸಂಸ್ಥೆಗಳು ಮತ್ತು ಸರಕಾರ ಸ್ಪಂದಿಸುತ್ತಿದೆ. ಆದರೆ, ಬುಡಕಟ್ಟು… Read More
Cinisuddi Fresh Cini News 

ಕೊರೋನಾ ಹಾವಳಿ : ಸುದೀಪ್ ಅಭಿಮಾನಿಗಳಿಂದ ಸಹಾಯಹಸ್ತ

ವಿಶ್ವದಾದ್ಯಂತ ಕೊರೋನಾ ಹಾವಳಿ ಜನರನ್ನು ಕಂಗಾಲಾಗಿಸಿದೆ. ಕರ್ನಾಟಕದಲ್ಲೂ ಕೂಡ ಜನರ ಪರಿಸ್ಥಿತಿ ಆತಂತ್ರದಲ್ಲಿದೆ. ದೇಶವ್ಯಾಪ್ತಿ ಲಾಕ್ ಡೌನ್ ಮಾಡಿರುವುದರಿಂದ ಜನರು ದಿನನಿತ್ಯದ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಇದನ್ನು ಗಮನಿಸಿದಂತ ದಕ್ಷಿಣ ಭಾರತದ ಕೆಲವು ಸ್ಟಾರ್ ನಟರುಗಳು ಸರ್ಕಾರಕ್ಕೆ ಹಣದ ಸಹಾಯ ಮೂಲಕ ಬಡವರಿಗೆ ನೆರವಿಗೆ ಧಾವಿಸಿದ್ದಾರೆ. ಅದೇ ರೀತಿ ಸ್ಯಾಂಡಲ್ ವುಡ್ ನಟರು ಕೂಡಾ ಬಂದಿದ್ದಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಇದರ ನಡುವೆ ಯುವರಾಜ ನಟ ನಿಖಿಲ್ ಕುಮಾರಸ್ವಾಮಿ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದು, ಅಲ್ಲಿ ಇರುವ ಕಾರ್ಮಿಕರಿಗೆ ಅನುಕೂಲ ಆಗುವಂತೆ… Read More