ಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ‘ಕಳಂಕ್’

ಬಾಲಿವುಡ್ ದಂತದ ಗೊಂಬೆ ಸೋನಾಕ್ಷಿ ಸಿನ್ಹಾ ಈಗ ಫುಲ್ ಬ್ಯುಸಿ. ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ (ಕೆಜೊ) ಬ್ಯಾನರ್‍ನಲ್ಲಿ ನಿರ್ಮಾಣಗೊಳ್ಳಲಿರುವ ಬಹು ತಾರಾಗಣದ ಅದ್ಧೂರಿ ಸಿನಿಮಾ ಕಳಂಕ್ ಚಿತ್ರೀಕರಣ ಭರದಿಂದ ಸಾಗಿದೆ. 1940ರಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆದ ನೈಜ ಘಟನಾವಳಿಗಳು ಈ ಚಿತ್ರದ ಮೂಲ ಕಥಾವಸ್ತು. ಈ ಸಿನಿಮಾವನ್ನು 15 ವರ್ಷಗಳ ಹಿಂದೆಯೇ ಕರಣ್ ಅವರ ತಂದೆ ಯಶ್ ನಿರ್ಮಿಸುವ ಉದ್ದೇಶ ಹೊಂದಿದ್ದರು. ಆದರೆ ಕಾರಣಾಂತರಗಳಿಂದ ಇದು ಸಾಕಾರಗೊಳ್ಳಲಿಲ್ಲ. ಬಾಲಿವುಡ್ ಹೆವಿವೇಟ್‍ಗಳೇ ಈ ಚಿತ್ರದಲ್ಲಿದ್ದಾರೆ. ಸಂಜಯ್ ದತ್, ವರುಣ್ ಧವನ್, ಅಲಿಯಾ ಭಟ್,… Read More