Bollywood Cinisuddi Fresh Cini News 

ಭೂಲ್ ಭುಲೈಯ್ಯಾ-2 ಚಿತ್ರಕ್ಕೆ ಟಬು ಸೇರ್ಪಡೆ

ಒಂದು ಕಾಲದಲ್ಲಿ ಬಾಲಿವುಡ್ ಸೂಪರ್‍ಸ್ಟಾರ್ ಆಗಿ ಮಿಂಚಿದ್ದ ಟಬು ಈಗ ವಯೋಸಹಜ ಪೋಷಕ ಪಾತ್ರಗಳಲ್ಲಿ ಬ್ಯುಸಿ. ಯಾವುದೇ ಪಾತ್ರಗಳಿರಲಿ ಅದಕ್ಕೆ ನ್ಯಾಯ ಒದಗಿಸುವ ಪ್ರೌಢ ಅಭಿನಯ ಈ ಅಭಿನೇತ್ರಿಗೆ ಕರಗತ.

ಈ ಹಿಂದೆ ತೆರೆಕಂಡ ಎಲ್ಲ ಸಿನಿಮಾಗಳಲ್ಲೂ ಈ ತಾರೆಯ ಅಭಿನಯವನ್ನು ಪ್ರೇಕ್ಷಕರು ಮತ್ತು ಚಿತ್ರ ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಸೂಪರ್‍ಹಿಟ್ ಅಂಧಾ ಧುನ್ ಚಿತ್ರದಲ್ಲಿ ಖಳನಾಯಕಿ ಪಾತ್ರ ಬೆಚ್ಚಿಬೀಳಿಸುವಂಥದ್ದು.

ವೈವಿಧ್ಯಮಯ ಪಾತ್ರ ಪೋಷಣೆಗಾಗಿ ಎದುರು ನೋಡುವ ಟಬುಗೆ ಈಗ ಮತ್ತೊಂದು ಭರವಸೆಯ ಸಿನಿಮಾದಲ್ಲಿ ಒಳ್ಳೆಯ ರೋಲ್ ಲಭಿಸಿದೆ. ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಭೂಲ್ ಭುಲೈಯ್ಯಾ-2 ಚಿತ್ರದಲ್ಲಿ ಟಬು ನಟಿಸುತ್ತಿದ್ದಾಳೆ.

ಕಾರ್ತಿಕ್ ಮತ್ತು ಕಿಯಾರಾ ಸೋಷಿಯಲ್ ಮೀಡಿಯಾ ಮೂಲಕ ಈ ತಂಡಕ್ಕೆ ಟಬುಳನ್ನು ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಚಿತ್ರದ ನಾಯಕ ಮತ್ತು ನಾಯಕಿ. ಬಿಬಿ-2 ಪ್ರಾಜೆಕ್ಟ್‍ಗೆ ಪ್ರತಿಭಾವಂತ ಅಭಿನೇತ್ರಿ ಎಂಟ್ರಿಯಾಗಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.

ಐಬು ವಹಿಸಲಿರುವ ಪಾತ್ರದ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಭೂತೋಚ್ಚಾಟನೆ ಕುರಿತು ಸೈಕೋಲಾಜಿಕಲ್ ಥ್ರಿಲ್ಲರ್ ಚಿತ್ರ ಕುತೂಹಲ ಕೆರಳಿಸಿದೆ.

ಇದು ಸೂಪರ್‍ಸ್ಟಾರ್ ಅಕ್ಷಯ್ ಕುಮಾರ್, ಅಮೀಶಾ ಪಟೇಲ್ ಮತ್ತು ವಿದ್ಯಾ ಬಾಲನ್ ಅಭಿನಯಿಸಿದ್ದ ಭೂಲ್ ಭುಲೈಯ್ಯಾ ಸಿನಿಮಾದ ಮುಂದುವರಿದ ಭಾಗ. 2007ರಲ್ಲಿ ತೆರೆಕಂಡ ಬಿಬಿ ಭರ್ಜರಿ ಹಿಟ್ ಆಗಿದ್ದು. ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದರು.

ಇದು 1993ರಲ್ಲಿ ತೆರೆಕಂಡಿದ್ದ ಸೂಪರ್‍ಹಿಟ್ ಮಣಿಚಿತ್ರತ್ತಳ್ ಎಂಬ ಮಲೆಯಾಳಂ ಚಿತ್ರದ ರೀಮೇಕ್. ಮೋಹನ್ ಲಾಲ್ ಮತ್ತು ಶೋಭನಾ ಮೂಲ ಚಿತ್ರದಲ್ಲಿ ಅಭಿನಯಿಸಿದ್ದರು. ಈಗ 12 ವರ್ಷಗಳ ಬಳಿಕ ಎರಡನೇ ಭಾಗ ಸೆಟ್ಟೇರಿದೆ.

ಅನೀಸ್ ಬಜ್‍ಮೀ ಈ ಚಿತ್ರದ ನಿರ್ದೇಶಕರು. ಮೊದಲ ಭಾಗಕ್ಕೆ ಹಣ ಹೂಡಿದ್ದ ಭೂಷಣ್ ಕುಮಾರ್ ಮತ್ತು ಕಿಷನ್ ಕುಮಾರ್ ಹೊಸ ಪ್ರಾಜೆಕ್ಟ್‍ನ ನಿರ್ಮಾಪಕರು. ಮುಂದಿನ ವರ್ಷ ಜುಲೈ 31ರಂದು ತೆರೆ ಕಾಣಲಿದೆ.

Share This With Your Friends

Related posts