Cinisuddi Fresh Cini News 

ಜನ್ಮದಿನದ ಸಂಭ್ರಮದಲ್ಲಿ ಸದಭಿರುಚಿಯ ನಿರ್ಮಾಪಕ ಡಾ. ಟಿ. ಆರ್. ಚಂದ್ರಶೇಖರ್

ಸ್ಯಾಂಡಲ್ ವುಡ್ ನ ಲಕ್ಕಿ ನಿರ್ಮಾಪಕರಂದೇ ಗುರುತಿಸಿಕೊಂಡಿರುವ ಮೈಸೂರಿನ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಮಾಲಿಕರಾದ ಡಾ. ಟಿ. ಆರ್. ಚಂದ್ರಶೇಖರ್ ಅವರು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಬೆಳ್ಳಿ ಪರದೆಯ ಮೇಲೆ ಚಮಕ್ , ಅಯೋಗ್ಯ , ಬೀರ್ ಬಲ್ ನಂತಹ ವಿಭಿನ್ನ ಬಗೆಯ ಚಿತ್ರಗಳನ್ನು ನೀಡಿ ಗಮನ ಸೆಳೆದಂತಹ ಈ ಸಂಸ್ಥೆಯು ಇನ್ನು ಸಾಲು ಸಾಲಾಗಿ ಹಲವಾರು ಚಿತ್ರಗಳಾದ ಶೋಕಿವಾಲ, ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಬುದ್ಧಿವಂತ -2 ಚಿತ್ರಗಳನ್ನು ನಿರ್ಮಿಸುತ್ತಿದ್ದು , ಬಹಳಷ್ಟು ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡುತ್ತಿದ್ದಾರೆ.

ಚಿತ್ರರಂಗಕ್ಕೆ ಅನುಭವಿ ಹಾಗೂ ಬುದ್ಧಿಜೀವಿ ನಿರ್ಮಾಪಕರಾದ ಡಾ. ಟಿ. ಆರ್. ಚಂದ್ರಶೇಖರ್ ಅಂತಹ ವ್ಯಕ್ತಿಗಳು ಬಹಳ ಅತ್ಯಗತ್ಯ. ಕೊರೋನಾ ಮುಕ್ತವಾಗಿ ಪ್ರತಿಯೊಬ್ಬ ಮನುಷ್ಯರು ನೆಮ್ಮದಿಯ ಬದುಕನ್ನು ಸಾಗಿಸಲಿ ಎಂದು ಆಶಿಸುವ ನಿರ್ಮಾಪಕ ಟಿ. ಆರ್. ಚಂದ್ರಶೇಖರ್ ಅವರ ಸಿನಿಮಾ ಜೀವನ ಹಾಗೂ ವೈಯಕ್ತಿಕ ಬದುಕು ಸುಖಕರವಾಗಿ ಯಶಸ್ಸಿನತ್ತ ಸಾಗಲಿ ಎಂದು ಅವರ ಆತ್ಮೀಯರು ಹಾಗೂ ಚಿತ್ರೋದ್ಯಮದ ಸ್ನೇಹಿತರ ಆಶಿಸಿದ್ದಾರೆ.

Related posts