Cini Gossips Cinisuddi Fresh Cini News Kollywood 

ಸೂಪರ್ ಸ್ಟಾರ್ ರಜನಿ ಕೊಟ್ಟ ಅಕ್ಕಿಯನ್ನು ತಮಿಳು ಫಿಲಂ ಚೇಂಬರ್ ತಿರಸ್ಕರಿಸಿದ್ದೇಕೆ..?

ತಮಿಳು ಫಿಲಂ ಚೇಂಬರ್‍ಗೆ ಸೂಪರ್‍ಸ್ಟಾರ್ ರಜನೀಕಾಂತ್ ಒಂದು ಸಾವಿರ ಮೂಟೆ ಅಕ್ಕಿ ಕಳುಹಿಸಿದರು, ಅದು ಚೇಂಬರ್‍ಗೆ ತಲುಪಿದ ಕ್ಷಣದಲ್ಲೇ ನಿನ್ನ ಅಕ್ಕಿ ಮೂಟೆ ಯಾರಿಗೆ ಬೇಕು ? ನಾವೇನು ಕೇಳಿದ್ದೇವಾ ? ವಾಪಾಸ್ ತಗೋ ಎನ್ನುವ ಮೂಲಕ ತಮಿಳು ಫಿಲಂ ಚೇಂಬರ್ ರಜನೀ ವಿರುದ್ದ ಕಟು ಟೀಕೆ ಮಾಡಿದೆ. ಈ ಘಟನೆಯಿಂದ ಸ್ವತ: ರಜನೀ ಬೆಚ್ಚಿ ಬಿದ್ದಿದ್ದಾರೆ.

ಕೋವಿಡ್ 19 ಬಂದು ಇಡೀ ತಮಿಳು ಚಿತ್ರರಂಗದ ಎಲ್ಲಾ ಆಯಾಮುಗಳೂ ಕೆಲಸ ನಿಲ್ಲಿಸಿವೆ. ಯಾರಿಗೂ ಕೆಲಸವಿಲ್ಲ, ಈ ವೈರಸ್ ಕರ್ನಾಟಕವನ್ನೂ ಮೀರಿ ಹೋಗಿದೆ. ಇದೊಂದು ಅನಿರೀಕ್ಷಿತ ಆತಂಕವಾಗಿರುವುದರಿಂದ ಅಲ್ಲಿನ ಕಾರ್ಮಿಕರು ತೊಂದರೆಗೊಳಗಾಗಿದ್ದಾರೆ.

ಇಲ್ಲಿ ಐವತ್ತು ಸಾವಿರ ಕಾರ್ಮಿಕರು ಲೆಕ್ಕಕ್ಕೆ ಸಿಗುತ್ತಾರೆ. ಕನ್ನಡ ಚಿತ್ರರಂಗದ ವಾರ್ಷಿಕ ವ್ಯವಹಾರ ಸುಮಾರು ಐನೂರೈವತ್ತು ಕೋಟಿ ಆದರೆ, ತಮಿಳು ಚಿತ್ರರಂಗದ್ದು ಒಂದೂವರೆ ಸಾವಿರ ಕೋಟಿ ರೂ. ದಾಟಿಹೋಗಿದೆ.

ಇದೊಂದು ದಾಖಲೆ ಸಾಕು ತಮಿಳು ಚಿತ್ರರಂಗ ಬೆಳೆದಿರುವುದಕ್ಕೆ. ಸದ್ಯ ಸಿನಿಮಾದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಅಲ್ಲಿನ ಫಿಲಂ ಚೇಂಬರ್ ಉಳ್ಳವರಿಂದ ನೆರವು ಕೇಳಿದೆ, ಅದು ನಗದಾಗಿದ್ದರೆ ಹೆಚ್ಚು ಅನುಕೂಲ ಎನ್ನುವ ಮನವಿ ಚಿತ್ರರಂಗಕ್ಕೂ ತಲುಪಿಸಿದೆ.

ಹಾಗೆ ನೆರವು ಆರಂಭವಾಗುತ್ತಿದ್ದಂತೆ ಅಲ್ಲಿನ ಸೂಪರ್‍ಸ್ಟಾರ್ ರಜನೀಕಾಂತ್ ಅಕ್ಕಿ ಮೂಟೆಗಳನ್ನು ಫಿಲಂ ಚೇಂಬರ್‍ಗೆ ಮುಟ್ಟಿಸಿದ್ದಾರೆ. ಆದರೆ ಈ ಅಕ್ಕಿ ಮೂಟೆಯನ್ನು ಚೇಂಬರ್ ಪದಾಧಿಕಾರಿಗಳು ಇಳಿಸಿಕೊಳ್ಳಲೇ ಇಲ್ಲ, ಅಷ್ಟೂ ಅಕ್ಕಿ ಮೂಟೆಗಳನ್ನು ರಜನೀಗೆ ಟಿಪ್ಪಣಿಯೊಂದಿಗೆ ವಾಪಾಸ್ ಮಾಡಿದೆ. ಚೇಂಬರ್‍ನ ಈ ವರ್ತನೆ ನೋಡಿ ಸ್ವತ: ರಜನೀಕಾಂತ್ ಬೆಚ್ಚಿ ಬಿದ್ದಿದ್ದಾರೆ.

ತಮಿಳು ಚಿತ್ರರಂಗ ಊಟ ಮಾಡದಷ್ಟು ಬರ್‍ಬಾತ್ ಆಗಿಲ್ಲ, ಒಂದು ವೇಳೆ ನಗದು ಕೊಟ್ಟಿದ್ದರೆ ಸಂಕಷ್ಟಕರ ಬದುಕಿನಲ್ಲಿರುವವರು ಅವರಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಅವರೇ ಖರೀದಿಸುವ ಮೂಲಕ ಸಂತೃಪ್ತಿ ಪಡೆಯುತ್ತಿದ್ದರು. ಅದು ಬಿಟ್ಟು ಚಿತ್ರರಂಗವನ್ನು ಚೇಂಬರ್‍ಗೆ ಆಹ್ವಾನಿಸಿ, ಅವರನ್ನು ನಡುದಾರಿಯಲ್ಲಿ ಕ್ಯೂನಿಲ್ಲಿಸಿ ಅಕ್ಕಿ ಹಂಚಲಾ ? ಹೀಗೆ ಬಹು ಅತೃಪ್ತಿ ಮತ್ತು ಟೀಕೆಯ ಪದಗಳೊಂದಿಗೆ ರಜನಿಗೆ ಚೇಂಬರ್‍ನಿಂದ ಬಹಿರಂಗ ಪತ್ರ ಹೋಗಿದೆ.

ತಮಿಳುನಾಡಿನ ಚೇಂಬರ್ ಅಂದರೆ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಸದಸ್ಯರಾಗಿದ್ದಾರೆ, ಅವರ ಬದುಕನ್ನು ನಾವು ಅನಾವರಣ ಮಾಡುವುದಿಲ್ಲ, ಅದರಲ್ಲೂ ನಿರ್ಮಾಪಕರು ಚಿತ್ರರಂಗದ ಅನ್ನದಾತರು, ಅವರು ನೂರಾರು ಮಂದಿಗೆ ಊಟ ಹಾಕುವ ಸಂಪ್ರದಾಯ ಇಟ್ಟುಕೊಂಡವರು ಎಂದು ತಮಿಳು ಚೇಂಬರ್ ಗೌರವದ ಸಂಕೇತ ಎನ್ನುವಂತೆ ಹೇಳಿಕೆಯನ್ನೂ ಕೊಟ್ಟಿದೆ.

ಅಕ್ಕಿ ವಾಪಾಸ್ ಬಂದ ವಿಷಯಕ್ಕೆ ರಜನೀಕಾಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ಸೂಕ್ಷ್ಮ ವಿಷಯವನ್ನು ತಮಿಳುನಾಡು ಹೇಗೆ ರಾದ್ದಾಂತ ಮಾಡಿಬಿಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ. ಇಂತಹ ವ್ಯವಸ್ಥೆಯಲ್ಲಿ ಒಂದು ನಲವತ್ತು ವರ್ಷದಿಂದ ರಜನೀ ಸೂಪರ್‍ಸ್ಟಾರ್ ಆಗಿ ಉಳಿದುಕೊಂಡಿದ್ದಾರಲ್ಲ ? ಅದೇ ಆತನ ಬದುಕಿನ ಸಾಧನೆ !

Share This With Your Friends

Related posts