Cinisuddi Fresh Cini News Tv / Serial 

ಬಹು ದಿನಗಳ ನಂತರ ‘ಮನಸಾರೆ’ ಬಣ್ಣ ಹಚ್ಚಿದ ಸುನಿಲ್ ಪುರಾಣಿಕ್

ಗುರುರಾಜ್ ಕುಲಕರ್ಣಿ ಅವರ ನಿರ್ಮಾಣದ ಮನಸಾರೆ ತಂದೆ ಮಗಳ ನಡುವಿನ ಪ್ರೀತಿಯ ಕಥೆ ಹೇಳುವ ನೂತನ ಧಾರಾವಾಹಿ. ಮನಸುಗಳು ಭಾವನೆಗಳ ಸುತ್ತ ಹೆಣೆಯಲಾದ ಈ ಕಥೆಯನ್ನು ರವಿ ಕಿಶೋರ್ ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ನಟ, ನಿರ್ದೇಶಕ ನಿರ್ಮಾಪಕ ಸುನೀಲ್ ಪುರಾಣಿಕ್ ಅವರು ಬಹಳ ದಿನಗಳ ನಂತರ ಬಣ್ಣ ಹಚ್ಚಿದ್ದಾರೆ.

ಇಲ್ಲಿ ನಾಯಕಿಯ ತಂದೆಯ ಪಾತ್ರವನ್ನು ನಿಭಾಯಿಸುವ ಮೂಲಕ ಅವರು ಕಿರುತೆರೆಗೆ ಮರಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ತಂದೆ, ಮಗಳ ನಡುವಿನ ಬಾಂಧವ್ಯದ ಸೂಕ್ಷ್ಮತೆಯ ಅನಾವರಣವಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸುನೀಲ್ ಪುರಾಣಿಕ್, ಗುರುರಾಜ್ ನನಗೆ ಬಹಳ ವರ್ಷಗಳ ಸ್ನೇಹಿತ. ಅವರು ಕೇಳಿದಾಗ ಇಲ್ಲ ಎನ್ನಲಾಗಲಿಲ್ಲ, ಅದರಲ್ಲೂ ತಂದೆ ಮಗಳ ಕಥೆಯಲ್ಲಿ ತೂಕದ ಪಾತ್ರ.

ಎಲ್ಲ ವರ್ಗದ ಜನರಿಗೂ ಇಷ್ಟವಾಗುವಂತಹ ಕಥೆ ಇದರಲ್ಲಿದೆ. ಭಾರತೀಯ ಸಂಸ್ಕøತಿಯಲ್ಲಿ ತಾಯಿಯ ಪ್ರೀತಿಗೆ ವಿಶೇಷ ಆದ್ಯತೆ ಇದೆ. ಇಲ್ಲಿ ಎರಡೆರಡು ಅಮ್ಮಂದಿರ ಪ್ರೀತಿ, ಜೊತೆಗೆ ತಂದೆಯ ಪ್ರೀತಿಯ ಪ್ರಾಮುಖ್ಯತೆ ಕೂಡ ಇದರಲ್ಲಿದೆ. ನಿರ್ದೇಶಕರು ಎಲ್ಲ ಪಾತ್ರಗಳನ್ನು ಸೊಗಸಾಗಿ ಹೆಣೆದಿದ್ದಾರೆ ಎಂದು ಅವರು ಹೇಳಿದರು.

ನನ್ನದು ಇಲ್ಲಿ ಮಲತಾಯಿ ದೇವಕಿಯ ಪಾತ್ರ. ಆದರೆ ಕೆಟ್ಟ ಮಲತಾಯಿಯಾಗಿ ಅಲ್ಲ. ನನಗೆ ಜೀವನ ಕೊಟ್ಟ ಮಗು ಎನ್ನುವ ಋುಣ ಇರುತ್ತದೆ ಎನ್ನುವುದು ನಟಿ ಸ್ವಾತಿಯವರ ಮಾತು. ಈ ಹಿಂದೆ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಪಾರ್ವತಿಯಾಗಿ ನಟಿಸುವ ಮೂಲಕ ಹೆಂಗಳೆಯರ ಮನಗೆದ್ದಿದ್ದ ಪ್ರಿಯಾಂಕ ಚಿಂಚೋಳಿ ಇಲ್ಲಿ ತಂದೆಯ ಪ್ರೀತಿಗಾಗಿ ಹಂಬಲಿಸುವ ಮಗಳು ಪ್ರಕೃತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಕಥೆ ಕೇಳಿದಾಗ ಭಾವುಕಳಾಗಿ ನಾನೂ ಅತ್ತಿದ್ದೆ, ನನಗೆ ರಿಯಲ್ ಲೈಫ್‍ನಲ್ಲಿ ಅಪ್ಪ ಇಲ್ಲ, ನಾನು 3 ವರ್ಷದವಳಿದ್ದಾಗಲೇ ಅವರನ್ನು ಕಳೆದುಕೊಂಡಿದ್ದೆ ಎಂದು ಪ್ರಿಯಾಂಕ ಹೇಳಿಕೊಂಡರು. ಸಾಗರ್ ಇಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್, ನಟಿ ಸುನೇತ್ರ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಪಂಡಿತ್, ಯಮುನಾ ಶ್ರೀನಿಧಿ, ಹಿರಿಯ ರಂಗಭೂಮಿ ನಟಿ ಜಯಲಕ್ಷ್ಮೀ ಪ್ರಮುಖ ಪಾತ್ರಗಳಲ್ಲ ಕಾಣಿಸಿಕೊಳ್ಳಲಿದ್ದಾರೆ. ಉದಯ ವಾಹಿನಿಯಲ್ಲಿ ಫೆ.24ರಿಂದ ಮನಸಾರೆ ಪ್ರಸಾರವಾಗಲಿದೆ.

Share This With Your Friends

Related posts