Cinisuddi Fresh Cini News 

ಅಂಬಿ-ವಿಷ್ಣು ಸ್ನೇಹಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ : ಸುಮಲತಾ

ನಮ್ಮ ಪ್ರೀತಿಯ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ ಒಂದು ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದುಬಂದಿಲ್ಲ.

ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ 5 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ನಡುವಿನ ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ’
ರೆಬಲ್ ಸ್ಟಾರ್ ಅಂಬರೀಷ್ ಅವರ ಅಭಿಮಾನಿಗಳ ಕನಸು ಈಗ ನನಸಾಗಿದೆ.

ಯಾಕಂದ್ರೆ ರೆಬಲ್ ಸ್ಟಾರ್ ಅಂಬರೀಷ್ ಅವರ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸೋಮವಾರ ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಸುಮಲತಾ ಅಂಬರೀಶ್ , ರಾಕ್‍ಲೈನ್ ವೆಂಕಟೇಶ್, ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ಸೇರಿದಂತೆ ಚಿತ್ರರಂಗದ ಗಣ್ಯರು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಂಬಿ ಸ್ಮಾರಕ ನಿರ್ಮಾಣಕ್ಕೆ ಕೂಡಲೇ ಯೋಜನೆ ರೂಪಿಸುವಂತೆ ಸಿಎಂ ಯಡಿಯೂರಪ್ಪ ಅವರು ಸೂಚಿಸಿದರು.

ಇದು ಅಂಬರೀಷ್ ಅಭಿಮಾನಿಗಳಿಗೆ ಖುಷಿ ನೀಡಿತು. ಅಂಬಿ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1 ಎಕರೆ 34 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಅಲ್ಲದೆ, 5 ಕೋಟಿ ರೂ.ಗಳ ಅನುದಾನ ನೀಡಲು ಸಹ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ನಟನಿಗೆ ಗೌರವ ಸೂಚಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಕಾರ್ಯ ಕೈಗೊಳ್ಳುತ್ತಿದೆ.

ಆದರೆ ಈ ಬೆಳವಣಿಗೆಯ ಬೆನ್ನಲ್ಲೇ ವಿಷ್ಣುವರ್ಧನ್ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಂಬಿ ಮತ್ತು ವಿಷ್ಣು ಆಪ್ತ ಸ್ನೇಹಿತರಾಗಿದ್ದರು. ಸಾಹಸಸಿಂಹ ವಿಷ್ಣುವರ್ಧನ್ ನಿಧನರಾಗಿ ಒಂದು ದಶಕವೇ ಕಳೆದಿದೆ.

ಅವರ ಸ್ಮಾರಕ ನಿರ್ಮಾಣಕ್ಕಾಗಿ ವಿಷ್ಣು ಕುಟುಂಬ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಹಾಗಿದ್ದರೂ ಸಹ ಇಂದಿಗೂ ವಿಷ್ಣು ಸ್ಮಾರಕದ ನಿರ್ಮಾಣ ಕೆಲಸ ಪೂರ್ತಿ ಆಗಿಲ್ಲ. ಈ ಕಾರ್ಯ ವಿಳಂಬ ಆಗಿರುವುದು ‘ಸಾಹಸ ಸಿಂಹ’ನ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.

ಈ ಕುರಿತಂತೆ ಟ್ವಿಟರ್ ಮೂಲಕ ಸುಮಲತಾ ಅಂಬರೀಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಪ್ರೀತಿಯ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಕ್ಐಸೂರಿನಲ್ಲೇ ಒಂದು ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದುಬಂದಿಲ್ಲ.

ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ 5 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ನಡುವಿನ ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ’ ಎಂದು ಸುಮಲತಾ ಅಂಬರೀಷ್ ಟ್ವೀಟ್ ಮಾಡಿದ್ದಾರೆ.

ಸುಮಲತಾ ಅಂಬರೀಷ್ ಅವರ ಈ ಮಾತಿಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ವಿಷ್ಣು ನಿಧನರಾಗಿ 10 ವರ್ಷ ಕಳೆದರೂ ಅವರ ಸ್ಮಾರಕದ ನಿರ್ಮಾಣ ಕೆಲಸ ಆಗಿಲ್ಲ ಎಂಬ ಬೇಸರ ನಮಗಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

ನಟರ ಸ್ಮಾರಕಕ್ಕೆ ಇಷ್ಟೊಂದು ಖರ್ಚು ಮಾಡುವ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ. ಮುಂದೆ ಯಾವ ರೀತಿ ಸ್ಮಾರಕ ಕುರಿತು ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Share This With Your Friends

Related posts