Cinisuddi Fresh Cini News 

16ಕೆಜಿಯ ಕುಂಬಳಕಾಯಿ ಒಡೆದ “ಸಾಲ್ಟ್ ” ಚಿತ್ರತಂಡ

ಸಾಮಾನ್ಯವಾಗಿ ಸಿನಿಮಾದ ಚಿತ್ರೀಕರಣದ ಕೊನೆ ದಿನದಂದು ಕುಂಬಳಕಾಯಿ ಒಡೆಯುವ ಪದ್ದತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದರಲ್ಲಿ ವಿಶೇಷತೆ ಏನೆಂದು ಕೇಳಬಹುದು. ಯಸ್ ಹೊಸಬರ ’ಸಾಲ್ಟ್’ ಎನ್ನುವ ಚಿತ್ರತಂಡವು ವಿಶೇಷ ರೀತಿಯ ಪ್ರಯೋಗ ಮಾಡಿ ಯಶಸ್ವಿ ಯಾಗಿದ್ದಾರೆ. ಅದೇನೆಂದರೆ ಗರಿಷ್ಟ ಸುಮಾರು ಹದಿನಾರು ಕೆ.ಜಿ ತೂಕದ ಕುಂಬಳಕಾಯಿ ಯನ್ನು ಇಬ್ಬರು ಸೇರಿಕೊಂಡು ಒಡೆದಿರುವುದು ಸುದ್ದಿಯಾಗಿದೆ.

ಇದರ ಕುರಿತಂತೆ ನಿರ್ಮಾಪಕಿ ಶಾಲಿನಿ.ಎಂ. ಮಾತನಾಡಿದ್ದಾರೆ. ನಮ್ಮ ಚಿತ್ರದ ಶೀರ್ಷಿಕೆ ವಿನೂತನವಾಗಿದೆ. ಅದರಂತೆ ಏನಾದರೂ ಹೊಸ ರೀತಿ ಪ್ರಯೋಗ ಮಾಡಬೇಕೆಂದು ಚಿಂತನೆ ಕಾಡಿತ್ತು. ಇಲ್ಲಿಯವರೆವಿಗೂ ಯಾರೂ ನೋಡಿರದ ಬೃಹದಾಕಾರದ ಕುಂಬಳಕಾಯಿ ಒಡೆದರೆ ಹೇಗಿರುತ್ತದೆಂದು ತಂಡದೊಂದಿಗೆ ಚರ್ಚಿಸಲಾಯಿತು. ಎಲ್ಲರೂ ಚೆನ್ನಾಗಿದೆ ಅಂತ ಹುರಿದುಂಬಿಸಿದರು.

ಕೊನೆಗೆ ಎಲ್ಲಾ ಕಡೆಗಳಲ್ಲಿ ಸಂಶೋಧನೆ ನಡೆಸಿ ಹೊಸದುರ್ಗದ ರೈತ ರಾಜುಅವಳಿಪಾಳ್ಯ ಅವರ ಬಳಿ ಇರುವುದನ್ನು ತಿಳಿದು, ಮುಂದೆ ಅದರ ಪ್ರತಿಫಲವೇ ಯೋಜನೆ ಫಲಿಸಿತು ಎನ್ನುತ್ತಾರೆ. ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ, ಜೀವನದಲ್ಲಿ ಸಾಲ್ಟ್ ಅವಶ್ಯಕವೆಂದು ಸಾರುವ ಕತೆ ಇದಾಗಿದೆ.

ರಚನೆ, ನಿರ್ದೇಶನ ಮಾಡಿರುವ ಭರತ್‌ನಂದ ಬಣ್ಣ ಹಚ್ಚಿದ್ದು ಅವರೊಂದಿಗೆ ಚೇತನ್‌ಕುಮಾರ್, ಚಂದ್ರು ಛತ್ರಪತಿ, ಸತೀಶ್‌ಮಳವಳ್ಳಿ ನಾಯಕರುಗಳು. ತಾರಗಣದಲ್ಲಿ ಬಾಲರಾಜ್‌ವಾಡಿ, ಸಂದೀಪ್, ವಿಜಯ ಶ್ರೀಕಲಬುರಗಿ, ಯಶಸ್ವಿನಿ ಶೆಟ್ಟಿ, ರಶ್ಮಿತ ಗೌಡ, ಸುರ್ಯೋದಯ್ ‌ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಮುಂತಾದವರು ಬಣ್ಣ ಹಚ್ಚಿದ್ದಾರೆ.

ರಾಘವೇಂದ್ರ ಕಾಮತ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಯಲಸ್ಟಿನ್-ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಂತೋಷ್‌ ದಯಾಲನ್, ಸಂಕಲನ ವಿನಯ್‌ಕುಮಾರ, ನೃತ್ಯ ಮದುಸುಧನ್, ಸಂಭಾಷಣೆ ಸತೀಶ್‌ ಮಳವಳ್ಳಿ ಅವರದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ರಾಜರತ್ನ ಸ್ಟುಡಿಯೋ ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ.

Related posts