Cinisuddi Fresh Cini News 

20 ಛಾಯಾಗ್ರಾಹಕರಿಗೆ ಕೆಲಸ ನೀಡಿದ ಸೃಜನ್

ಲಾಕ್‍ಡೌನ್‍ನಿಂದ ಕನ್ನಡ ಚಿತ್ರರಂಗದ ಬಹುತೇಕ ಕೆಲಸಗಳು ಸ್ಥಗಿತವಾಗಿವೆ. ಇದರಿಂದ ಕಲಾವಿದರು, ಕ್ಯಾಮೆರಾ ಮಾನ್‍ಗಳು ಸೇರಿದಂತೆ ಅನೇಕ ತಂತ್ರಜ್ಞರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮಜಾಟಾಕೀಸ್ ಖ್ಯಾತಿಯ ನಟ ಸೃಜನ್ ಲೋಕೇಶ್ ಅವರು ಒಂದು ಹೊಸ ಪ್ರಯೋಗ ಮಾಡಿದ್ದಾರೆ ಆತ್ಮ ನಿರ್ಭರ ಭಾರತಕ್ಕೆ ಕೈಜೋಡಿಸುವ ಮೂಲಕ ಕಲಾವಿದರಿಗೆ ನೆರವು ನೀಡಿದ್ದಾರೆ.

ನಟ ಸೃಜನ್ ಲೋಕೇಶ್ ತಮ್ಮ ಮನೆಯಲ್ಲಿಯೇ ಒಂದು ಕ್ರಿಯೇಟಿವ್ ವಿಡಿಯೋವನ್ನು ತಯಾರಿಸಿದ್ದಾರೆ. 20 ಛಾಯಾಗ್ರಾಹಕರನ್ನು ಬಳಸಿಕೊಂಡು ಈ ವಿಡಿಯೋವನ್ನು ತಯಾರಿಸಿದ್ದು, ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಬೇಕೆಂಬ ಉದ್ದೇಶದಿಂದ ಈ ವಿಡಿಯೋವನ್ನು ತಯಾರಿಸಿದ್ದಾರೆ.

20 ಶಾಟ್‍ಗಳ ಮೂಲಕ ಸೃಜನ್ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. ನಟ ಸೃಜನ್ ಲೋಕೇಶ್ ಅವರಿಗೆ ಸಂಭಾವನೆ ಕೂಡ ನೀಡಿದ್ದಾ.ಸೃಜನ್ ಲೋಕೇಶ್ ಇನ್ಸ್ಟಾಗ್ರಾಮï, ಫೇಸ್‍ಬುಕ್‍ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಆ ವಿಡಿಯೋಗೆ ಬನ್ನಿ ಮತ್ತೆ ದುಡಿಯೋಣ, ನಮ್ಮ ದೇಶವನ್ನ ಮತ್ತೆ ಕಟ್ಟೋಣ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆ beindianbuyindian ಎಂಬ ಹ್ಯಾಶ್‍ಟ್ಯಾಗ್ ಸಹ ಹಾಕಿದ್ದಾರೆ. ಎಲ್ಲರಿಗೂ ನಮಸ್ಕಾರ, ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧನೇ ಆಗಿರಲಿ, ಎಂತಹ ಸಂಕಷ್ಟನೇ ಆಗಿರಲಿ.

ಈಗಿನ ಮಹಾಮಾರಿ ಕೊರೊನಾವೇ ಆಗಿರಲಿ ಸಮಸ್ಯೆಗೆ ಹೆದರಿ ಮುಂದಿಟ್ಟಿದ್ದ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲೇ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟು ದಿನ ದೇಹದ ಆರೋಗ್ಯಕ್ಕಾಗಿ ಹೋರಾಡುದ್ವಿ, ಇನ್ನೂ ಮುಂದೆ ದೇಶದ ಸಂಪತ್ತಿಗೋಸ್ಕರ ಹೋರಾಡೋಣ.

ಹೂ, ಹಣ್ಣು, ತರಕಾರಿನೇ ಆಗಿರಲಿ, ದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್‍ನಿಂದ ಗ್ಲೋಬಲ್‍ವರೆಗೂ ಬೆಳೆಯೋಣ. ಆತ್ಮನಿರ್ಭರ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ ಎಂಬ ಸಂದೇಶವನ್ನು ಸಾರಿದ್ದಾರೆ.

ಸುಮಾರು ನಾಲ್ಕು ನಿಮಿಷಗಳವರೆಗೂ ಸೃಜನ್ ಮಾತನಾಡುವ ಈ ವಿಡಿಯೋದಲ್ಲಿ ಅವರು ತುಂಬಾ ಶಾಟ್‍ಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಯಾಕೆ ಇಷ್ಟೊಂದು ಶಾಟ್ ತೆಗೆದುಕೊಂಡೆ ಎಂಬುದನ್ನು ಅವರೇ ತಿಳಿಸಿದ್ದಾರೆ.

ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್ ಕಟ್ ಯಾಕೆಂದು ಥಿಂಕ್ ಮಾಡುತ್ತಿದ್ದೀರ. ಈ ಶಾಟ್ ಕಟ್‍ಗಳ ಹಿಂದೆಯೂ ಒಂದು ಕಥೆಯಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನೀಷಿಯನ್ಸ್ ಸೇರಿದಂತೆ ಅನೇಕರಿಗೆ ತುಂಬಾನೇ ಕಷ್ಟವಾಗಿತ್ತು. ಇದಕ್ಕೆ ಸ್ಪಂದಿಸಿ ಹಲವಾರು ಜನರು ಸಹಾಯ ಮಾಡಿದ್ದಾರೆ.

ಅವರಿಗೆಲ್ಲ ಧನ್ಯವಾದ, ಆದರೆ ನಮ್ಮ ಲೋಕೇಶ್ ಪ್ರೊಡಕ್ಷನ್‍ನಲ್ಲಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರುಗಳು 10 ವರ್ಷದಿಂದ ನನ್ನ ಜೊತೆಗೇ ಇದ್ದವರು. ಇವರೆಲ್ಲರಿಗೂ ನಾನು ಏನಾದರೂ ಸಹಾಯ ಮಾಡಬೇಕೆಂದುಕೊಂಡೆ.

ಆದರೆ ಅವರು, ನಮಗೆ ಸಹಾಯ ಮಾಡಬೇಕು ಎನಿಸಿದರೆ ದಯವಿಟ್ಟು ಏನಾದರೂ ಕೆಲಸ ಕೊಡಿ ಎಂದು ಕೇಳಿಕೊಂಡರು. ಹಾಗಾಗಿ ಈ ವಿಡಿಯೋದಲ್ಲಿರುವ 20 ಶಾಟ್‍ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್‍ಗಳು ಕಂಪೋಸ್ ಮಾಡಿ ಅವರ ಸಂಭಾವನೆಯನ್ನ ಅವರೇ ದುಡಿದಿದ್ದಾರೆ.

ಈ ಲಾಕ್ಡೌನ್ ಸಮಯದಲ್ಲಿ ನನ್ನ ಕೈಯಲ್ಲಿ ಅವರಿಗೆ ಈ ಒಂದು ಕೆಲಸ ಕೊಡಲು ಮಾತ್ರ ನನಗೆ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಜೊತೆಗೆ ಪ್ರತಿಯೊಬ್ಬ ಕ್ಯಾಮೆರಾಮ್ಯಾನ್ ಹೆಸರುಗಳನ್ನು ಸಹ ಈ ವಿಡಿಯೋದಲ್ಲಿ ನಮೂದಿಸಿದ್ದಾರೆ.

ಈ ಜೀವನ ಭಗವಂತ ಹೇಳಿದ ಆ್ಯಕ್ಷನ್‍ನಿಂದ ಶುರುವಾಗುತ್ತೆ, ಅವನು ಹೇಳಿದ ಕಟ್‍ನಿಂದ ಮುಕ್ತಾಯವಾಗುತ್ತೆ. ಈ ಆ್ಯಕ್ಷನ್-ಕಟ್ ಮಧ್ಯದ ಜೀವನದಲ್ಲಿ ನಾವು ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶವನ್ನು ಸೃಜನ್ ಈ ಮೂಲಕ ಸಾರಿz್ದÁರೆ.

Share This With Your Friends

Related posts