Cinisuddi Fresh Cini News 

“ವೀರಂ” ಚಿತ್ರದಲ್ಲಿ ಪ್ರಜ್ವಲ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಕಿಟ್ಟಿ

.
ಸಾಲು ಸಾಲಾಗಿ ಚಿತ್ರಗಳ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಹಾವಳಿಯ ನಡುವೆಯೂ ಸಹ ಕೆಲಸದತ್ತ ಚಿತ್ರತಂಡದವರು ಗಮನ ಹರಿಸುತ್ತಿದ್ದಾರೆ.

ಈಗ ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಎಂ. ಶಶಿಧರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ `ವೀರಂ’. ಈ ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ನಾಯಕನಾಗಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವುದೇ.

ಈಗಾಗಲೇ ಚಿತ್ರದಲ್ಲಿನ ಪ್ರಜ್ವಲ್ ಅವರ ಲುಕ್ ಬಿಡುಗಡೆ ಯಾಗಿದ್ದು, ಲೆಜೆಂಡ್ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿ ಯಾಗಿ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ. ಖದರ್ ಕುಮಾರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಇದೇ ಮೊದಲ ಬಾರಿಗೆ ರಚಿತಾ ರಾಮ್ ಅವರು ಪ್ರಜ್ವಲ್ ದೇವರಾಜ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಹಲವು ಪ್ರಥಮಗಳನ್ನೊಳಗೊಂಡ ಈ ಚಿತ್ರದಲ್ಲಿ ಸಂಜು-ವೆಡ್ಸ್ ಗೀತಾ ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಅವರು ಅಭಿನಯಿಸಿರುವುದು ಮತ್ತೊಂದು ವಿಶೇಷ.

ದಿಶಾ ಎಂಟರ್‍ಟೈನ್ಮೆಂಟ್ಸï ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಡಾರ್ಕ್ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದು, ರಗಡ್ ಲುಕ್ ಹೊಂದಿರುವುದು ಚಿತ್ರ ಪ್ರೇಮಿಗಳ ನಿರೀಕ್ಷೆ, ಕುತೂಹಲಗಳನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನು ವೀರಂ ಚಿತ್ರದಲ್ಲಿ ಶಿಷ್ಯ ಖ್ಯಾತಿಯ ದೀಪಕ್ ನಾಯಕನ ಎದುರಾಳಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಾಲಿವುಡ್‍ನ ಟಾಪ್ ವಿಲನ್‍ಗಳ ಪೈಕಿ ಒಬ್ಬರನ್ನು ಸಿನಿಮಾದ ಭಾಗವಾಗಿರುವುದಕ್ಕಾಗಿ ಮಾತುಕತೆ ನಡೆಸಲಾಗುತ್ತಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ವೀರಂಗೆ ಅನೂಪ್ ಸಿಳೀನ್ ಅವರ ಸಂಗೀತ ನಿರ್ದೇಶನ ಇರಲಿದ್ದು, `ರಾಮಾ ರಾಮಾ ರೇ…’, `ಒಂದಲ್ಲ ಎರಡಲ್ಲಾ ‘ಖ್ಯಾತಿಯ ಲವಿತ್ ಈ ಚಿತ್ರದ ಸಿನಿಮೆಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ.

ಸದ್ಯ ಶ್ರೀನಗರಕಿಟ್ಟಿ ಖದರ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಫೆÇೀಟೋ ವೈರಲ್ ಆಗಿದ್ದು ಚಿತ್ರ ಯಾವ ರೀತಿ ಹೊರಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Share This With Your Friends

Related posts