‘ಸ್ಪೂಕಿ ಕಾಲೇಜ್’ ನಲ್ಲಿ ದೆವ್ವದ ಕಾಟ…! (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸ್ಪೂಕಿ ಕಾಲೇಜ್
ನಿರ್ದೇಶನ : ಭರತ್ ಜಿ.
ನಿರ್ಮಾಪ ಕ : ಎಚ್.ಕೆ. ಪ್ರಕಾಶ್
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಕ : ಮನೋಹರ್ ಜೋಶಿ
ತಾರಾಗಣ: ವಿವೇಕ್ ಸಿಂಹ, ಖುಷಿ, ರೀಷ್ಮಾ ನಾಣಯ್ಯ, ಸಿದ್ಲಿಂಗು ಶ್ರೀಧರ್, ಪೃಥ್ವಿ ರಾಷ್ಟ್ರಕೂಟ, ಹನುಮಂತೇಗೌಡ ಹಾಗೂ ಮುಂತಾದವರು…
ಸಾಮಾನ್ಯವಾಗಿ ಸಸ್ಪೆನ್ಸ್ , ಥ್ರಿಲ್ಲರ್, ಹಾರರ್ ಕಂಟೆಂಟ್ ಇರುವ ಚಿತ್ರಗಳು ಪ್ರೇಕ್ಷಕರನ್ನ ಸೆಳೆಯೋದರಲ್ಲಿ ಒಂದು ಹೆಜ್ಜೆ ಮುಂದೆ ಸಾಗುತ್ತದೆ. ಆ ನಿಟ್ಟಿನಲ್ಲಿ ಸುಮಾರು ನೂರು ವರ್ಷಗಳ ಹಿಂದಿನ ಕಟ್ಟಡ. ಇದು ಪ್ರೊಫೆಸರ್ ಜೆಡಮ್ ನೇತೃತ್ವದಲ್ಲಿ ಬಹಳ ಶಿಸ್ತು ಬದ್ಧ ಕಾಲೇಜ್ ಆಗಿರುತ್ತದೆ. ಮುಂದೆ ನವೀಕರಣಗೊಂಡು ಸೇಂಟ್ ನಾರ್ವೆ ಇಂಜಿನಿಯರಿಂಗ್ ಕಾಲೇಜ್ ಆಗಿ ಪರಿವರ್ತನೆಗೊಂಡು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡಲು ಮುಂದಾಗುತ್ತದೆ.
ಆದರೆ ಪ್ರಸ್ತುತ ಕಾಲೇಜಿನ ತುಂಟಾಟ, ತರ್ಲೆ, ವಿದ್ಯಾರ್ಥಿಗಳಿಗೆ ಹಿಂಸೆ , ದೆವ್ವದ ಕಾಟ, ಪ್ರಾಂಶುಪಾಲರ ಒದ್ದಾಟ ಹೀಗೆ ಒಂದಕ್ಕೊಂದು ಬೆಸೆದುಕೊಂಡು ಪ್ರೇಕ್ಷಕರ ಮುಂದೆ ಬಂದಂತಹ ಚಿತ್ರವೇ ಸ್ಪೂಕಿ ಕಾಲೇಜ್. ಚಿತ್ರದ ಕಥಾಹಂದರ ತೆರೆದುಕೊಳುವುದೇ ಪ್ರಿಯತಮನಿಂದ ಮೋಸ ಹೋದ ಯುವತಿ ಖುಷಿ (ಖುಷಿ) ಒಂದು ವರ್ಷದ ಬಳಿಕ ಮತ್ತೆ ಕಾಲೇಜಿಗೆ ಕಾರಿನಲ್ಲಿ ಬರುತ್ತಾ ತನ್ನ ಗೆಳತಿಯ ಜೊತೆ ಫೋನ್ ನಲ್ಲಿ ಮಾತನಾಡುತ್ತಾ ತನ್ನ ಬದುಕಿನ ಕಹಿ ನೆನಪುಗಳನನ್ನ ಮೆಲಕು ಹಾಕುತ್ತಾ ಕಾಲೇಜಿಗೆ ಬರುತ್ತಾಳೆ.
ಬ್ರಿಟಿಷರ ಕಾಲದ ಕಾಲೇಜ್ ಕಟ್ಟಡವೊಂದನ್ನು ನವೀಕರಣಗೊಳಿಸಿ, ಪುನಃ ಅಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ಆರಂಭಿಸುವ ಪ್ರಿನ್ಸಿಪಾಲ್ ಅದನ್ನು ಉಳಿಸಿ ಬೆಳೆಸಲು ಫ್ರೆಂಡ್ಲಿ ನೇಚರ್ ವಿದ್ಯಾರ್ಥಿಗಳು ಹಾಗೂ ಟೀಚರ್ಸ್ಗಳ ನಡುವಿನ ಬಾಂಧವ್ಯ ಸ್ನೇಹದೊಂದಿಗೆ ಸಾಗಬೇಕೆಂಬ ತತ್ವವನ್ನು ಹೊಂದಿರುತ್ತಾನೆ.
ಇದರ ನಡುವೆ ಕಾಲೇಜಿನ ಕ್ಯಾಂಪಸ್ ನಲ್ಲಿ ಒಂದೊಂದೇ ಕೆಲ ಅಹಿತಕರ ಘಟನೆಗಳು ನಡೆಯುತ್ತಿದ್ದು, ಅದು ಇತಿಹಾಸದ ವಿಚಾರಕ್ಕೂ ಹೊಂದಾಣಿಕೆಯಾಗಿ ಸಿಂಕ್ ಆಗಿ ಅಲ್ಲಿದ್ದವರಲ್ಲಿ ನಡುಕ ಹುಟ್ಟಿಸುತ್ತವೆ. ಗೆಳೆಯ ಗೆಳತಿಯರೊಂದಿಗೆ ಕಾಲೇಜಿನಲ್ಲಿರುವ ಖುಷಿ ಗೆ ಅದೇ ಕಾಲೇಜಿನಲ್ಲಿ ರಿಷಿ (ವಿವೇಕ್ ಸಿಂಹ ) ಎಂಬ ಹುಡುಗನೂ ಪರಿಚಯನಾಗುತ್ತಾನೆ. ನಂತರ ಸ್ನೇಹ ಬೆಳೆದು, ಗುಡ್ ಫ್ರೆಂಡ್ಸ್ ಕೂಡ ಆಗುತ್ತಾರೆ.
ಒಂದೇ ಕಾಲೇಜು ಹುಡುಗರ ತುಂಟಾಟ, ತರಲೆ, ಒಂದಷ್ಟು ಗೊಂದಲ ಎಲ್ಲರನ್ನ ಕಾಡುತ್ತದೆ. ಆ ನಂತರ ಕಾಲೇಜಿನಲ್ಲಿ ಒಂದಷ್ಟು ಚಿತ್ರ ವಿಚಿತ್ರ ಘಟನೆಗಳು, ಅಸ್ವಾಭಾವಿಕ ಮರಣಗಳು ನಡೆಯಲು ಪ್ರಾರಂಭವಾಗುತ್ತದೆ. ಕೆಲವು ವಿಚಾರಗಳ ಬಗ್ಗೆ ಆ ಕಾಲೇಜಿನಲ್ಲಿ ಚರ್ಚೆ ಕೂಡ ಮಾಡುವಂತಿರಲಿಲ್ಲ. ಮಾಡಿದರೆ ಮುಂದೆ ದೊಡ್ಡ ಅನಾಹುತಗಳೇ ಸಂಭವಿಸುತ್ತೆ ಎನ್ನುವ ವದಂತಿ ಹಬ್ಬಿರುತ್ತದೆ.
ಕಾಲೇಜು ಆವರಣದಲ್ಲೇ ಕೆಲ ವಿದ್ಯಾರ್ಥಿಗಳು ವಿಚಿತ್ರವಾಗಿ ಸತ್ತು ಬಿದ್ದಿರುತ್ತಾರೆ. ಇದು ಕಾಲೇಜ್ ನಡೆಸುವವರೆಗೂ ದೊಡ್ಡ ತಲೆ ನೋವಾಗಿ ಕಾಡುತ್ತದೆ. ಅಷ್ಟಕ್ಕೂ ಆ ಕಾಲೇಜಿನಲ್ಲಿ ನಡೆಯುವ ಆ ಮರಣಗಳಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಸಿಗಲಿದೆ.
ಕಾಲೇಜಿನಲ್ಲಿ ಅಂತದೇನಿದೆ…
ಇದು ದೆವ್ವದ ಕೈವಾಡವೇ…
ಪ್ರೊಫೆಸರ್ ಜೆಡಮ್ ಕಾಟವೇ…
ಖುಷಿಗೆ ಆದ ಮೋಸ ಏನು…
ಈ ಎಲ್ಲಾ ಗೊಂದಲ ತಿಳಿಯಬೇಕಾದರೆ ಒಮ್ಮೆ ನೀವು ಈ ಚಿತ್ರವನ್ನು ನೋಡಬೇಕು.
ಇನ್ನು ಈ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಎಚ್. ಕೆ .ಪ್ರಕಾಶ್ ರವರ ಧೈರ್ಯ ಮೆಚ್ಚಲೇಬೇಕು. ಹೊಸಬರಿಗೆ ಅವಕಾಶ ನೀಡುವುದರ ಜೊತೆಗೆ ಒಂದು ವಿಭಿನ್ನ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಇನ್ನು ನಿರ್ದೇಶಕ ಭರತ್ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರುವಂತೆ ಹೆದರಿಸಬೇಕು ಎಂದು ತುಂಬಾ ಎಫರ್ಟ್ ಹಾಕಿದ್ದಾರೆ. ತಾಂತ್ರಿಕವಾಗಿ ಚಿತ್ರ ಗಮನ ಸೆಳೆದರು, ಚಿತ್ರದ ಓಟ ಒಂದಷ್ಟು ಗೊಂದಲದ ಗೂಡಾಗಿದೆ. ಅದೊಂದು ಎಂಜಿನಿಯರಿಂಗ್ ಕಾಲೇಜ್ ಆದರೂ ಬೆರಳಿಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಕಾಣಿಸುತ್ತಾರೆ. ಒಂದಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ.
ವಿಶೇಷವಾಗಿ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಮನೋಹರ ಜೋಷಿ ಕೈಚಳಕ ಅದ್ಭುತವಾಗಿ ಮೂಡಿ ಬಂದಿದೆ. ಇದಕ್ಕೆ ಪೂರಕವಾಗಿ ಗ್ರಾಫಿಕ್ಸ್ ಕೆಲಸ ಚಿತ್ರಕ್ಕೆ ಪ್ಲಸ್ ಆಗಿದೆ. ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ನೋಡುಗರಿಗೆ ಮೈ ಜುಮ್ ಎನ್ನುವಂತೆ ಮಾಡಿದೆ. ಹಾಗೆಯೇ ‘ಮೆಲ್ಲುಸಿರೇ ಸವಿಗಾನ… ಹಾಡಿನ ರಿಮಿಕ್ಸ್ ನಲ್ಲಿ ರೀಷ್ಮಾ ನಾಣಯ್ಯ ನರ್ತಿಸಿದ್ದು, ಇದು ಅಗತ್ಯನ ಅನಿಸುತ್ತದೆ.
ಇನ್ನು ನಾಯಕನಾಗಿ ಅಭಿನಯಿಸಿರುವ ವಿವೇಕ್ ಸಿಂಹ ಕೂಡ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿ ನಡೆಸಿದ್ದಾರೆ. ಅಷ್ಟೇ ಅದ್ಭುತವಾಗಿ ನಟಿ ಖುಷಿ ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಉಳಿದಂತೆ ಅಭಿನಯಿಸಿರುವ ವಿಜಯ ಚೆಂಡೂರ್, ಸಿದ್ಲಿಂಗು ಶ್ರೀಧರ್, ಹನುಮಂತೇಗೌಡ,ರಘು ರಾಮನಕೊಪ್ಪ , ಅಶ್ವಿನ್ ಹಾಸನ್, ಸುಂದರ್ ವೀಣಾ ಸೇರಿದಂತೆ ಕಾಮಿಡಿ ಪಾತ್ರಧಾರಿಗಳು ಕೂಡ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಟ್ಟಾರೆ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಇಷ್ಟಪಡುವವರಿಗೆ ಚಿತ್ರ ಇಷ್ಟವಾಗುತ್ತದೆ. ಮನೋರಂಜನೆಯ ದೃಷ್ಟಿಯಿಂದ ಎಲ್ಲರೂ ಒಮ್ಮೆ ನೋಡಬಹುದು