Cinisuddi Fresh Cini News 

‘ಸೂಜಿದಾರ’ ಚಿತ್ರದ ಆಡಿಯೋ ಬಿಡುಗಡೆ

ಸ್ಯಾಂಡಲ್‍ವುಡ್‍ನಲ್ಲಿ ಬಲು ಬೇಡಿಕೆ ನಟಿಯಾಗಿರುವ ಹರಿಪ್ರಿಯಾ ಅವರು ಈಗ ಉತ್ತರ ಕರ್ನಾಟಕದ ಮಹಿಳೆಯ ಅವತಾರದಲ್ಲಿ ಸೂಜಿದಾರದಲ್ಲಿ ಕಾಣಿಸಿಕೊಳ್ಳಲು ಹೊರಟಿದ್ದು ಮೊನ್ನೆ ಈ ಚಿತ್ರದ ಧ್ವನಿಸುರುಳಿ ಸಮಾರಂಭವು ನಡೆಯಿತು.

ಇಂದ್ರಕುಮಾರ್ ಅವರು ಬರೆದಿರುವ ಕಥೆಯೊಂದನ್ನು ಆಧರಿಸಿ ಸಿದ್ಧವಾಗುತ್ತಿರುವ ಸೂಜಿದಾರಕ್ಕೆ ಮೌನೇಶ್ ಬಡಿಗೇರ ಕ್ಯಾಪ್ಟನ್ ಆಫ್ ದಿ ಶಿಫ್ ಆಗಿದ್ದಾರೆ. ಮೊನ್ನೆ ನಡೆದ ಚಿತ್ರದ ಟ್ರೈಲರ್ ಹಾಗೂ ಹಾಡುಗ ಬಿಡುಗಡೆ ಸಮಾರಂಭಕ್ಕೆ ನೀನಾಸಂ ಸತೀಶ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಈ ಹಿಂದೆ ಜ್ವಲಂತಂ, ಅಥರ್ವ, ಅಭಿಸಾರಿಕೆ ಚಿತ್ರಗಳಲ್ಲಿ ಖಳನಟನಾಗಿ ತಮ್ಮ ಪ್ರತಿಭೆ ತೋರಿಸಿದ್ದ ಯಶ್ವಂತ್ ಶೆಟ್ಟಿಗೆ ಸೂಜಿದಾರದಲ್ಲಿ ನಾಯಕನಾಗಿ ಬಡ್ತಿ ಸಿಕ್ಕಿದ್ದು, ಶ್ರೀಧರ್ ಹೆಗ್ಗೋಡು ಹಾಗೂ ಅವರ ಸಹೋದರ ಭಿನ್ನಷಡ್ಡ ಕೂಡಿ ಕಂಪೋಸ್ ಮಾಡಿರುವ ಹಾಡುಗಳು ಜನಪ್ರಿಯವಾಗಿದು,ನಾಯಕ, ನಾಯಕಿ ಮೊದಲ ಬಾರಿಗೆ ಮುಖಾಮುಖಿಯಾದ ಸಂದರ್ಭದಲ್ಲಿ ಮೂಡಿಬರವ ಜಾರುತಿಹುದು ಎಂಬ ಹಾಡು ವಿಕ್ರಂ ಹತ್ವಾರ ರಚನೆಯ ಯುಟ್ಯೂಬ್‍ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದಿದೆ.

ಈ ಚಿತ್ರದ ನಿರ್ದೇಶಕ ಮೌನೇಶ್ ಅವರು ನನಗೆ 16 ವರ್ಷಗಳಿಂದಲೂ ಸ್ನೇಹಿತರು. ಯಶ್ವಂತ್ ಕೂಡ ನನ್ನ ಸ್ನೇಹಿತ, ಈ ಚಿತ್ರವನ್ನು ನಾನೇ ಬಿಡುಗಡೆ ಮಾಡಬೇಕಿತ್ತು, 2-3 ಚಿತ್ರಗಳಲ್ಲಿ ನಾನು ನಟಿಸುತ್ತಿರುವುದರಿಂದ ಆಗಲಿಲ್ಲ ಎಂದು ನೀನಾಸಂ ಸತೀಶ್ ಹೇಳಿದರು.

ನಿರ್ದೇಶಕ ಮೌನೇಶ್ ಬಡಿಗೇರ ಮಾತನಾಡಿ, ನಮ್ಮ ಸುತ್ತ ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಬರೆದಿದ್ದು, ಹರಿಪ್ರಿಯಾ ಈ ಹಿಂದಿನ ಚಿತ್ರಗಳಲ್ಲಿ ಮಾಡಿರದಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಸುಂಚೇದ್ರ ಪ್ರಸಾದ್, ಅಚ್ಯುತಕುಮಾರ್, ಬಿರಾದಾರ, ಚೈತ್ರ ಕೋಟೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಿದರು.

ನಾಯಕ ಯಶ್ವಂತ್‍ಶೆಟ್ಟಿ ಮಾತನಾಡಿ, ನಾನು ಈ ಹಿಂದೆ ನಟಿಸಿದ್ದ ಮೂರು ಚಿತ್ರಗಳಲ್ಲೂ ಖಳನಾಗಿ ನಟಿಸಿದ್ದೆ, ಸೂಜಿದಾರ ಮೂಲಕ ನಾಯಕನಾಗಿರುವುದು ಸಂತಸವಾಗಿದೆ. ಈ ಚಿತ್ರದ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.

ಅಭಿಜಿತ್ ಕೋಟಗಾನಹಳ್ಳಿ ಹಾಗೂ ಸಚ್ಚೇಂದ್ರನಾಯಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೂಜಿದಾರ ಎಂಬ ಟೈಟಲ್ಲೇ ತುಂಬಾ ಕ್ಯಾಚಿಯಾಗಿದ್ದು, ಚಿತ್ರದಲ್ಲಿ ಕಂಡು ಬರುವ ಕೆಲವು ಲೋಪದೋಷಗಳನ್ನು ಕೂಡ ಪ್ರೇಕ್ಷಕರನ್ನು ಮರೆತು ಈ ಚಿತ್ರವನ್ನು ಅಪ್ಪಿಕೊಳ್ಳುವಂತಾಗಲಿ.

Share This With Your Friends

Related posts