Bollywood Cini Gossips Cinisuddi Fresh Cini News 

‘ಸೋನಾಕ್ಷಿ ಹಾಡೊಂದನ್ನು ಮೊದಲು ನಿಲ್ಲಿಸಬೇಕು’ : ಹೀಗೆ ಹೇಳಿದ್ದು ಯಾರು..? ಏಕೆ..?

ಬಾಲಿವುಡ್ ದಂತದ ಬೊಂಬೆ ಸೋನಾಕ್ಷಿ ಸಿನ್ಹಾ ಹಾಡು ಹೇಳುವುದನ್ನು ಮೊದಲು ನಿಲ್ಲಿಸಬೇಕು… ಹೀಗೆ ಹೇಳಿದ್ದು ಖ್ಯಾತ ಪಂಜಾಬಿ ಗಾಯಕ ಮತ್ತು ನಟ ಜಸ್ಸಿ ಗಿಲ್. ಆದರೆ ಈ ಹೇಳಿಕೆ ಸೀರಿಯಸ್ ಅಲ್ಲ.. ಸುಮ್ನೇ ತಮಾಷೆಗೆ..! ಮುದ್ದಿನ ಅರಗಿಣಿ ಸೋನಾಕ್ಷಿ ಜೊತೆ ಹ್ಯಾಪಿ ಫಿರ್ ಭಾಗ್ ಜಜಾಯೇಗಿ ಚಿತ್ರದಲ್ಲಿ ನಟಿಸಿದ್ದ ಗಿಲ್ ಹೀಗೆ ಹೇಳಲು ಕಾರಣವೇನು..? ಜನಪ್ರಿಯ ರಿಯಾಲಿಟಿ ಶೋ ಬೈ ಇನ್ವೈಟ್ ಒನ್ಲಿ ಎಪಿಸೋಡ್ ಒಂದರಲ್ಲಿ ಭಾಗವಹಿಸಿದ್ದ ಜಸ್ಸಿ ಗಿಲ್‍ಗೆ ಕಾರ್ಯಕ್ರಮ ನಿರೂಪಕಿ ರೆಹಿಯಾ ಚಕ್ರವರ್ತಿ ಪ್ರಶ್ನೆಗಳನ್ನು ಕೇಳಿದರು.

ನಟರಲ್ಲಿ ನೀವು ಯಾರನ್ನು ಮ್ಯಾರಿ, ಕಿಲ್, ಹುಕ್-ಅಪ್(ಮದುವೆಯಾಗಲು, ಕೊಲ್ಲಲು, ಜೊತೆಯಾಗಲು) ಬಯಸುವಿರಿ ಎಂಬುದು ಆಕೆಯ ಪಶ್ನೆಯಾಗಿತ್ತು. ಇದಕ್ಕೆ ಗಿಲ್ ನೀಡಿದ ಉತ್ತರ ವರುಣ್ ಧವನ್, ಜಹೀರ್ ಇಕ್ಬಾಲ್ ಮತ್ತು ಸಿದಾರ್ಥ್ ಮಲ್ಹೋತ್ರಾ ಎಂದು ಉತ್ತರಿಸಿ ಕಾರಣ ನೀಡಿದ್ದಾನೆ. : ನಾನು ವರುಣ್ ಧವನ್ ಜೊತೆ ಮದುವೆಯಾಗಲು ಬಯಸುತ್ತೇನೆ.

ಏಕೆಂದರೆ ನಾವಿಬ್ಬರು ಉತ್ತಮ ಗೆಳೆಯರು. ನಾನು ಜಹೀರ್ ಇಕ್ಬಾಲ್‍ನನ್ನು ಕೊಂದು ಕ್ಷಮೆ ಕೇಳುತ್ತೇನೆ(ಆತನೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಇರುವ ಕಾರಣ) ಹಾಗೂ ಸಿದ್ಧಾರ್ಥ್ ಜೊತೆ ಹುಕ್ ಆಫ್ ಆಗುತ್ತೇನೆ. ಏಕೆಂದರೆ ಆತ ತುಂಬಾ ಹಾಟ್ ಎಂದು ಗಿಲ್ ಕಾರಣ ನೀಡಿದ್ದಾನೆ. ನೀವು ಯಾವ ತಾರೆ ಹಾಡುವುದನ್ನು ನಿಲ್ಲಿಸಬೇಕೆಂದು ಹೇಳುವಿರಿ ಎಂಬ ಪ್ರಶ್ನೆಗೆ ಪಂಜಾಬಿ ಗಾಯಕ-ನಟ ತಡಮಾಡದೇ ಹೇಳಿದ್ದು : ಸೋನಾಕ್ಷಿ ಸಿನ್ಹಾ. ಕಾಮಿಡಿಗಾಗಿ ಈತ ಈ ಮಾತನ್ನು ಹೇಳಿದ(ಖ್ಯಾತ ಗಾಯಕ ಗಿಲ್‍ನ ಮನದಾಳ ನಿರ್ಧಾರ ಇದಾಗಿದ್ದರೂ ಅಚ್ಚರಿ ಇಲ್ಲ).

ಸೋನಾ 2016ರಲ್ಲಿ ತೆರೆಕಂಡ ಇಷ್ಕೋಲಿಕ್‍ನಲ್ಲಿ ಮೊದಲ ಹಾಡು ಹಾಡಿದ್ದಳು. ನಂತರ ಅಕಿರಾ ಚಿತ್ರದಲ್ಲಿ ರಾಜ್ ರಾಜ್ ಕೇ ಟೈಟಲ್ ಟ್ರ್ಯಾಕ್‍ಗೆ ಧ್ವನಿಯಾಗಿದ್ದಳು. ಈ ಹಾಡುಗಳು ಎಷ್ಟು ಜನರಿಗೆ ಇಷ್ಟವಾಯಿತೋ ಗೊತ್ತಿಲ್ಲ.

Share This With Your Friends

Related posts