Cinisuddi Fresh Cini News Tv / Serial 

‘ಸಿರಿಕನ್ನಡ’ ವಾಹಿನಿಯಲ್ಲಿ ಸೂಪರ್ ಧಾರವಾಹಿಗಳು

ಹದಿನೆಂಟು ತಿಂಗಳ ಕೆಳಗೆ ಕನ್ನಡಿಗರಿಂದ, ಕನ್ನಡಿಗರಾಗಿ ಆರಂಭವಾದ ‘ಸಿರಿ ಕನ್ನಡ’ ವಾಹಿನಿಯು ಸೂಪರ್ ಹಿಟ್ ಚಿತ್ರಗಳು ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.

ಇದರಿಂದ ಉತ್ತೇಜಿತರಾಗಿ ವಾಹಿನಿಯು ಮನರಂಜನೆಯ ಮತ್ತೋಂದು ಹಂತಕ್ಕೆ ಹೆಜ್ಜೆ ಇಡುತ್ತಿದೆ. ಇದರ ಪ್ರತಿಫಲವಾಗಿ ರಾತ್ರಿ 7.30ರಿಂದ 9.30ರ ವರೆಗೆ ವಿಭಿನ್ನ ಕತೆಯ ಅಚ್ಚ ಹೊಸ ಧಾರವಾಹಿಗಳನ್ನು ನೀಡಲು ಮುಂದಾಗಿದೆ.

ರಾತ್ರಿ 7:30ಕ್ಕೆ ಪ್ರಸಾರವಾಗುವ “ಅಗ್ನಿನಕ್ಷತ್ರ” ಕತೆಯು ಪ್ರೀತಿಯ ವಿಭಿನ್ನ ಆಯಾಮಗಳನ್ನು ಪರಿಚಯಿಸುತ್ತಾ ಸಾಗುತ್ತದೆ. 8 ಗಂಟೆಗೆ “ತರಂಗಿಣಿ” ಧಾರವಾಹಿಯಲ್ಲಿ ಮೂವರು ಗೆಳತಿಯರ ಜೀವನ ಸಂಘರ್ಷದ ಕಥೆ ಹೊಂದಿದೆ.

8:30ರ “ಜಗದೇಕವೀರ’ ಅಡಿಬರಹದಲ್ಲಿ ಜೊತೆಯಲಿ ಸುಂದರಿ ಇರಲಿದ್ದು ವಿಶಿಷ್ಟ ಸೋಷಿಯೋ ಫ್ಯಾಂಟಸಿ ಕಥೆಯನ್ನು ಹೊಂದಿದೆ. ರಾತ್ರಿ 9 ಗಂಟೆಯ “ಗೊಂಬೆಮನೆ”ಯಲ್ಲಿ ಅಕ್ಕ-ತಂಗಿಯ ಪ್ರೀತಿ-ವಾತ್ಸಲ್ಯದ ಕಥೆ ಹೊಂದಿದೆ.

ವಾಹಿನಿಯ ಮುಖ್ಯಸ್ಥರಾದ ಸಂಜಯ್‍ಶಿಂಧೆ ಹೇಳುವಂತೆ, ಇದೀಗ ಪ್ರಸಾರವಾಗುವ ಕಂತುಗಳು ಉತ್ತಮ ಕಥೆ ಮತ್ತು ಮನರಂಜನಾ ಅಂಶವನ್ನು ಹೊಂದಿದ್ದು, ವೀಕ್ಷಕರನ್ನು ಸೆಳೆಯಲಿವೆ.

ಇದಲ್ಲದೇ ಪ್ರಸಿದ್ದ ದೇಸಿ ಕಾದಂಬರಿಗಳನ್ನು ಧಾರವಾಹಿ ಮಾಡುವ ಯೋಜನೆ ಹೊಂದಿದ್ದು, ಆ ನಿಟ್ಟಿನಲ್ಲಿ ಕ್ರಿಯೇಟಿವ್ ತಂಡ ಕಾರ್ಯನಿರತವಾಗಿದೆ ಎನ್ನುತ್ತಾರೆ. ಇದೇ ಜೂನ್22, ಸೋಮವಾರದಿಂದ ಶನಿವಾರದವರಗೆ ನಾಲ್ಕು ಧಾರವಾಹಿಗಳು ಪ್ರಸಾರವಾಗಲಿದೆ.

Share This With Your Friends

Related posts