Cinisuddi Fresh Cini News 

“ಸಿರಿಕನ್ನಡ” ವಾಹಿನಿಯಲ್ಲಿ ಮೆಗಾ ಮನರಂಜನಾ ಪ್ಯಾಕೇಜ್

ಸಿರಿಕನ್ನಡ ವಾಹಿನಿ ತನ್ನ ವೈಶಿಷ್ಟ್ಯತೆಯಿಂದಲೇ ವೀಕ್ಷಕರ ಮನದಲ್ಲಿ ಸ್ಥಾನ ಪಡೆದಿದ್ದು, ಇದೀಗ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಟಾಟಾ ಸ್ಕೈ ಡಿ.ಟಿ.ಹೆಚ್ನ ಚಾನೆಲ್ ನಂ 1618ರಲ್ಲಿ ಲಭ್ಯವಿದ್ದು, ಲಕ್ಷಾಂತರ ಜನರ ಮನೆಯಂಗಳವನ್ನು ತಲುಪಲಿದೆ.

ಸಿರಿಕನ್ನಡದ ಈ ಸಂಭ್ರಮ ಮತ್ತಷ್ಟು ಹೆಚ್ಚುತ್ತಿದ್ದು ಇದಕ್ಕೆ ಮತ್ತೊಂದು ಕಾರಣ, ಸಾಲುಸಾಲಾಗಿ ಬರುತ್ತಿರುವ ಹಬ್ಬದ ಸಂಭ್ರಮ. ಈ ಹಬ್ಬಗಳ ಸಂಭ್ರಮಕ್ಕಾಗಿ ನಿಮ್ಮ ಸಿರಿಕನ್ನಡ ಮೆಗಾ ಮನರಂಜನಾ ಪ್ಯಾಕೇಜ್ ನೀಡುತ್ತಿದ್ದು ನಿಮ್ಮನ್ನು ಮತ್ತಷ್ಟು ರಂಜಿಸಲಿದೆ.

ಇದೇ ಸೆಪ್ಟಂಬರ್ 13 ರಿಂದ ಸಿರಿಕನ್ನಡ ಕಿರುತೆರೆಯ ಮೇಲೆ ಹೊಸ ಕಾರ್ಯಕ್ರಮಗಳು ಮೂಡಿಬರಲಿವೆ. ರಾತ್ರಿ 9 ಗಂಟೆಗೆ “ಧೃವ ನಕ್ಷತ್ರ” ಮೆಗಾ ಧಾರಾವಾಹಿ ಪ್ರಸಾರವಾಗಲಿದ್ದು, ಈ ಧಾರಾವಾಹಿ ಕಿರುತೆರೆಯ ಹೆಸರಾಂತ ನಟ-ನಟಿಯರಾದ ಮೈಕೋ ಮಂಜು, ಸ್ಪಪ್ನರಾಜ್, ಶ್ರೀಕಾಂತ್ ಹೆಬ್ಳಿಕರ್, ಅಲಕಾನಂದ್ ಮುಂತಾದವರು ತಾರಾಬಳಗದಲಿದ್ದು, ಅಕ್ಕ-ತಂಗಿ, ಅತ್ತೆ-ಸೊಸೆಯಾಗಿ ಬರುವಂತಹ ಅಪರೂಪದ ಕಥಾ ಹಂದರವನ್ನು ಹೊಂದಿದೆ.

ರಾತ್ರಿ 9.30ಕ್ಕೆ “ಪ್ರೇಮ್ ಜೊತೆ ಅಂಜಲಿ” ಮುಗ್ಧ ಮನಸುಗಳ ಮುದ್ದಾದ ಪ್ರೇಮ ಕಥೆಯ ಮೆಗಾ ಧಾರಾವಾಹಿ ಪ್ರಸಾರವಾಗಲಿದ್ದು, ಈ ಧಾರಾವಾಹಿಯಲ್ಲಿ ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟ-ನಟಿಯರಾದ ಪದ್ಮಜಾರಾವ್, ಮಂಜುನಾಥ್ ಹೆಗ್ಗಡೆ, ಪ್ರವೀಣ್ ಡಿ ರಾವ್ ಮುಂತಾದವರೊಂದಿಗೆ ಹೊಸ ಪ್ರತಿಭೆಗಳು ನಟಿಸಿದ್ದು, ವೀಕ್ಷಕರ ಮನಗೆಲ್ಲುವ ಕಥಾಹಂದರವನ್ನು ಹೊಂದಿದೆ.

ಇನ್ನು ಕನ್ನಡದ ಮನೆ-ಮನಗಳಲ್ಲಿ ತಮ್ಮ ಹಾಸ್ಯದ ಕಚಗುಳಿಯನ್ನು ಇಟ್ಟು ರಂಜಿಸಿದ ಪ್ರಾಣೇಶ್, ಮುಖ್ಯಮಂತ್ರಿ ಚಂದ್ರು, ಎಮ್.ಎಸ್.ನರಸಿಂಹಮೂರ್ತಿ, ಸುಧಾ ಬರಗೂರ್, ರಿಚರ್ಡ್ ಲೂಯಿಸ್ ಮುಂತಾದ ಹಾಸ್ಯ ದಿಗ್ಗಜರು ನಡೆಸಿಕೊಡೋ “ಹಾಸ್ಯ ದರ್ಬಾರ್” ಸೆಪ್ಟೆಂಬರ್ 13ರಿಂದ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಈ ಹೊಸ ಕಾರ್ಯಕ್ರಮಗಳೊಟ್ಟಿಗೆ ಮತ್ತಷ್ಟು ವಿಭಿನ್ನ ಕ್ರಿಯಾತ್ಮಕ ಕಾರ್ಯಕ್ರಮಗಳು ಸಿರಿಕನ್ನಡ ವಾಹಿನಿಯಲ್ಲಿ ಮೂಡಿ ಬರಲಿವೆ ಎಂದು ವಾಹಿನಿ ಮುಖ್ಯಸ್ಥರಾದ ಸಂಜಯ್ ಶಿಂಧೆ ಅವರು ಹೇಳುತ್ತಾರೆ.

Related posts