Cinisuddi Fresh Cini News 

ಯುವಪಡೆಗಳ “ಸಿರಿ ಲಂಬೋದರ ವಿವಾಹ” ಚಿತ್ರಕ್ಕೆ ಚಾಲನೆ

ಚಂದನವನಕ್ಕೆ ಮತ್ತೊಂದು ಗೆಳೆಯರ ಬಳಗ ವಿಭಿನ್ನ ಕಥಾಹಂದರದ ಮೂಲಕ ಚಿತ್ರವನ್ನು ಆರಂಭಿಸಲು ಮುಂದಾಗಿದ್ದು , ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಹಲವಾರು ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಸಂಜೀವ್ ಕುಲಕರ್ಣಿ ರವರ ಪುತ್ರ ಸೌರಭ್ ಕುಲಕರ್ಣಿ ಪ್ರಥಮಬಾರಿಗೆ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಮೊದಲ ಚಿತ್ರ “ಎಸ್ ಎಲ್ ವಿ” ಸಿರಿ ಲಂಬೋದರ ವಿವಾಹ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಮೊದಲ ಸನ್ನಿವೇಶಕ್ಕೆ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ತನ್ನ ಶಾರ್ಟ್ ಫಿಲಂ ಮೂಲಕ ಬಹಳಷ್ಟು ಗಮನ ಸೆಳೆದ ಯುವ ನಿರ್ದೇಶಕ ಸೌರಭ್ ಕುಲಕರ್ಣಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗೆಳೆಯರನ್ನು ಒಗ್ಗೂಡಿಸಿ ಕೊಂಡು ಈ ಚಿತ್ರವನ್ನ ಆರಂಭಿಸಿದ್ದಾರೆ. ಮೊದಲ ಹಂತದ ಚಿತ್ರೀಕರಣ ಇದೆ 13 ರಿಂದ ಆರಂಭಗೊ ಆರಂಭಗೊಳ್ಳಲಿದೆಯoತೆ.

ಈ ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ಇದು ಹೋಟೆಲ್ ಚಿತ್ರನಾ… ಕಾಮಿಡಿ ಕಥೆನಾ… ಎಂದು ಬಹಳಷ್ಟು ಮಂದಿ ಕೇಳಿದರು. ಇದೊಂದು ಸಂಪೂರ್ಣ ಕಮರ್ಷಿಯಲ್ ಚಿತ್ರವಾಗಿದ್ದು , ಕಾಮಿಡಿ, ಸೆಂಟಿಮೆಂಟ್, ಲವ್ ಹಾಗೂ ಫ್ಯಾಮಿಲಿ ಡ್ರಾಮಾ ಎಲ್ಲವೂ ಬೆಸೆದುಕೊಂಡಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಲವತ್ತು ದಿನಗಳ ಕಾಲ ನಡೆಯಲಿದೆ.

ಈ ಚಿತ್ರಕ್ಕೆ ಕಲಾವಿದರು, ತಾಂತ್ರಿಕ ವರ್ಗದವರು ಹಾಗೂ ಸ್ನೇಹಿತರು ಹಿತೈಷಿಗಳು ಎಲ್ಲರೂ ಸಹಕಾರ ನೀಡಿದ್ದಾರೆ. ನಾನು ಪಾಪ ಪಾಂಡು ಧಾರಾವಾಹಿಯಲ್ಲೂ ಅಭಿನಯಿಸಿದ್ದೇನೆ. ಸಿಹಿ ಕಹಿ ಚಂದ್ರು ರವರ ಸಾರಥ್ಯದಲ್ಲಿ ಬಹಳಷ್ಟು ಕಲಿತಿದ್ದೇವೆ. ‌ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದೇನೆ.

ನನ್ನ ತಂಡದವರು ನನಗೆ ಕೈಜೋಡಿಸಿದ್ದಾರೆ. ಯಾರಾದರೂ ಕೈ ಕೊಟ್ಟರೆ ನಾನು ಆ ಪಾತ್ರವನ್ನು ನಿರ್ವಹಿಸುತ್ತೇನೆ ಎಂದು ಚಿತ್ರದ ಸಂಕ್ಷಿಪ್ತ ಮಾಹಿತಿಯನ್ನು ನೀಡುತ್ತಾ ,ಈ ಶುಭ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಹಿರಿಯರು ಹಾಗೂ ನನ್ನ ಸ್ನೇಹಿತರಿಗೆ ಧನ್ಯವಾದ ಎಂದರು ಯುವ ನಿರ್ದೇಶಕ ಸೌರಭ್ ಕುಲಕರ್ಣಿ.

ನನ್ನ 9ವರ್ಷದ ಕನಸೀಗ ನನಸಾಗಿದೆ. ನಾನು ರಂಗಭೂಮಿ ಕಲಾವಿದ , ಪಾಪಾ ಪಾಂಡು ಧಾರಾವಾಹಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದೇನೆ. ಈ ಚಿತ್ರದಲ್ಲಿ ನಾನು ವೆಡ್ಡಿಂಗ್ ಪ್ಲಾನರ್ ಪಾತ್ರ ಮಾಡುತ್ತಿದ್ದೇನೆ. ಚಿತ್ರದಲ್ಲಿ ತಮಗೆ ಸಂಪೂರ್ಣ ಮನರಂಜನೆ ಸಿಗಲಿದೆ ಆಕ್ಷನ್ , ಫೈಟ್ ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ಸದಾ ಇರಲಿ ಎಂದರು ಯುವ ನಟ ಅಂಜನ್. ಎ. ಭಾರದ್ವಾಜ್.

ಇನ್ನು ಈ ಚಿತ್ರದ ನಾಯಕಿಯಾಗಿ ಹಿರಿಯ ನಟ ಮಂಡ್ಯ ರಮೇಶ್ ಅವರ ಸುಪುತ್ರಿ ದಿಶಾ ರಮೇಶ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ದೇವರ ನಾಡು ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು. ಆದರೆ ಈ ಎಸ್.ಎಲ್. ವಿ ಚಿತ್ರವು ಅವರ ಸಿನಿಪಯಣಕ್ಕೆ ಹೊಸ ನಾಂದಿ ಹಾಡಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ. ಬೆಳ್ಳಿಪರದೆ ಮೇಲೆ ತಮ್ಮದೇ ಆದ ಛಾಪನ್ನ ಮೂಡಿಸುವ ಕನಸು ಹೊತ್ತುಕೊಂಡಿರುವ ದಿಶಾ ಮಾತಿನಲ್ಲಿ ದೃಢ ನಿರ್ಧಾರ ಇದ್ದಂತೆ ಕಾಣುತ್ತದೆ. ಈ ನಟಿಗೆ ಉಜ್ವಲ ಭವಿಷ್ಯ ಸಿಗುವಂತಾಗಲಿ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸುಂದರ್ ವೀಣಾ , ರಾಜೇಶ್ ನಟರಂಗ, ಬಾಲ ರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಹರೀಶ್ ಪ್ರಭಾತ್, ಶಿವಕುಮಾರ್, ಪಿ.ಡಿ.ಸತೀಶ್ ಚಂದ್ರ, ಗಿರೀಶ್ ಜತ್ತಿ, ಸಂತೋಷ್ ಕರ್ಕಿ, ಅಶೋಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಸ್ಯ್ರಾಟೊ ವೆಂಚ್ಯೂರ್ಸ್, ಪವಮಾನ ಕ್ರಿಯೇಷನ್ಸ್ ಹಾಗೂ ಧೂಪದ ದೃಶ್ಯ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಸಂಘರ್ಷ ಕುಮಾರ್ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ , ದೇವಿಪ್ರಕಾಶ್ ಕಲಾ ನಿರ್ದೇಶನ ಹಾಗೂ ಕಂಬಿ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಒಟ್ಟಾರೆ ಉತ್ಸಾಹಿ ಯುವಕರ ಬಳಗ ಸೇರಿಕೊಂಡು ನಿರ್ಮಿಸಲು ಮುಂದಾಗಿರುವ “ಎಸ್.ಎಲ್.ವಿ. ಸಿರಿ ಲಂಬೋದರ ವಿವಾಹ” ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆಯಂತೆ.

Related posts