Cinisuddi Fresh Cini News 

ಯುವ ಪಡೆಗಳ “ಸಿoಧೂರ” ಸಾಂಗ್ ಶೂಟಿಂಗ್ ಗೆ ರೆಡಿ

ಸ್ಯಾಂಡಲ್ ವುಡ್ ನಲ್ಲಿ ಪ್ರೀತಿ ಪ್ರಣಯದ ಚಿತ್ರಗಳು ಬಹಳಷ್ಟು ಬಂದಿವೆ. ಆದರೆ ನಿರೂಪಣಾ ಶೈಲಿ ವಿಭಿನ್ನವಾಗಿದ್ದರೆ ಖಂಡಿತ ಪ್ರೇಕ್ಷಕರು ಇಷ್ಟಪಡುತ್ತಾರೆ. ಆ ನಿಟ್ಟಿನಲ್ಲಿ ಯುವ ಪ್ರತಿಭೆ ಸಚಿನ್ ಪುರೋಹಿತ್ ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ನಿರ್ಮಾಣ, ನಿರ್ದೇಶನ ಮಾಡುವುದರ ಜೊತೆಗೆ ನಟನಾಗಿ ಬೆಳ್ಳಿ ಪರದೆ ಮೇಲೆ ಮಿಂಚಲು ಅಣಿಯಾಗುತ್ತಿದ್ದಾರೆ.

ಇದೊಂದು ರೊಮ್ಯಾಂಟಿಕ್ ಪ್ರೇಮಮಯ ಚಿತ್ರವಾಗಿದ್ದು, ನಾಯಕ ಸಚಿನ್ ಗೆ ಜೋಡಿಯಾಗಿ ರೇಷ್ಮಾ , ಸುರಕ್ಷಿತ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಮಾತಿನ ಭಾಗ ಮುಗಿದಿದ್ದು , ಹಾಡುಗಳ ಚಿತ್ರೀಕರಣಕ್ಕೆ ಹೊರಡಲು ತಂಡ ಸನ್ನದ್ಧವಾಗಿದೆ.

ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡುವುದರ ಜೊತೆಗೆ 5 ಹಾಡುಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಅನುರಾಧಾ ಭಟ್, ಸಂತೋಷ್ ವೆಂಕಿ ಹಾಗೂ ಶಶಾಂಕ್ ಶೇಷಗಿರಿ ಈ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದು , ಕಾರ್ತಿಕ್ ವೆಂಕಟೇಶ್ ಸ್ಟುಡಿಯೋದಲ್ಲಿ ಎಡಿಟಿಂಗ್ ಹಾಗೂ ಡಬ್ಬಿಂಗ್ ಕೆಲಸಗಳು ಮುಗಿದಿದೆ.

ಇನ್ನು ಈ ಚಿತ್ರದಲ್ಲಿ ಬ್ಯಾಂಕ್ ಜನಾರ್ದನ್ , ಜ್ಯೋತಿ ಮೂರುರ್ , ರೇಖಾ ದಾಸ್ , ರಾಮ್ ಪುರೋಹಿತ್ ಸೇರಿದಂತೆ ಹಲವಾರು ಹಿರಿಯ ಹಾಗೂ ಕಿರಿಯ ಕಲಾವಿದರು ಕೂಡ ಅಭಿನಯಿಸಿದ್ದಾರೆ.

ಇದೊಂದು ಸುಮಧುರ ಸಂಗೀತಮಯ ಚಿತ್ರವಾಗಲಿದ್ದು , ಈ ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಗಿ ಈಗಾಗಲೇ ಸುಂದರ ತಾಣಗಳನ್ನು ಆಯ್ಕೆ ಮಾಡಲಾಗಿದೆಯಂತೆ. ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಅತಿ ಶೀಘ್ರದಲ್ಲಿ ಸಿಂಧೂರ ಸುಂದರ ಪರಿಸರದ ಮಧ್ಯೆ ಸಾಗಲಿದೆ.

Share This With Your Friends

Related posts