Cinisuddi Fresh Cini News 

ಕ್ರೈಂ ರಿಪೋರ್ಟರ್ ಪಾತ್ರದಲ್ಲಿ ಶುಭಾ ಪೂಂಜಾ

ಸಾಕಷ್ಟು ಬೋಲ್ಡ್ ಅಂಡ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಶುಭಾಪೂಂಜಾ ಮೊದಲಬಾರಿ ‘ಅಂಬುಜಾ’ ಚಿತ್ರದಲ್ಲಿ ಕ್ರೈಂ ರಿಪೋರ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಮಹಿಳಾ ಪ್ರಧಾನ ಕತೆಯಲ್ಲಿ ಇವರು ತಮ್ಮ ತನಿಖೆಯಿಂದ ಅಪರಾಧ ಪ್ರಕರಣವೊಂದನ್ನು ಭೇದಿಸುತ್ತಾರಂತೆ. ‘ಕೆಲವು ದಿನಗಳ ನಂತರ’ ಚಿತ್ರವನ್ನು ನಿರ್ದೇಶನ ಮಾಡಿರುವ ಶ್ರೀನಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ವಿಜಯಪುರದ ಲಂಬಾಣಿ ಕುಟುಂಬವೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಹಾರರ್, ಹಾಗೂ ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ.

ಪ್ರಥಮ ಹಂತದಲ್ಲಿ ಗೋವಿಂದೇಗೌಡ ಆಯ್ಕೆಯಾಗಿದ್ದು, ಉಳಿದ ತಾರಗಣ ಮತ್ತು ತಂತ್ರಜ್ಘರ ಆಯ್ಕೆಪ್ರಕ್ರಿಯೆ ಸದ್ಯದಲ್ಲೆ ನಡೆಯಲಿದೆಯಂತೆ. ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಪ್ರಿ ಪ್ರೊಡಕ್ಷನ್‍ದಲ್ಲಿ ತಂಡವು ಬ್ಯುಸಿ ಇದೆ. ಉದ್ಯಮಿ ಕಾಶಿನಾಥ್.ಡಿ.ಮಡಿವಾಳರ್ ಕತೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ.

Share This With Your Friends

Related posts