“ಶುಭಾ ಪೂಂಜಾ” ಮದುವೆ ಹಾಗೋದು ಇವರನ್ನೇ
ಚಂದನವನದ ಮುದ್ದಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಈಗ ಮದುವೆ ಆಗುವುದಕ್ಕೆ ಸಿದ್ಧರಾಗಿದ್ದಾರೆ. ಹೌದು ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯ ಸುಮಂತ್ ಮಹಾಬಲ ರನ್ನ ಮದುವೆ ಆಗಲು ನಿರ್ಧರಿಸಿದ್ದಾರೆ.
ಮೂಲತಃ ಮಂಗಳೂರು ಮೂಲದ ಬಿಸಿನೆಸ್ ಮನ್ ಆಗಿರುವ ಸುಮಂತ್ ಜಯ ಕರ್ನಾಟಕ ಸಂಘದ ಬೆಂಗಳೂರು ದಕ್ಷಿಣ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರoತೆ.
ಸಿನಿಮಾ ನಟ, ನಟಿಯರ ಮದುವೆ ಅಂದಾಕ್ಷಣ ಬಹಳಷ್ಟು ಕುತೂಹಲ ಮೂಡುವುದು ಸಹಜ. ಬಣ್ಣದ ಸೆಳೆತವೇ ಅಂಥದ್ದು , ಅಭಿಮಾನಿಗಳು ಕೂಡ ಬಹಳಷ್ಟು ಕುತೂಹಲದಿಂದ ತಮ್ಮ ನೆಚ್ಚಿನ ತಾರೆಯರು ಯಾರನ್ನು ವರಿಸುತ್ತಾರೆ ಎಂಬ ಕಾತುರದಲ್ಲಿ ಇರುತ್ತಾರೆ.
ಕೆಲವೊಂದು ಬಾರಿ ನಟ ,ನಟಿಯರ ಬಗ್ಗೆ ಗಾಸಿಪ್ ಕೂಡ ಹರಿದಾಡುತ್ತಿದೆ. ಯಾವುದು ಸುಳ್ಳು… ಯಾವುದು ಸತ್ಯ ಎಂಬ ಗೋಜಲು ಕೂಡ ಸಿನಿಪ್ರಿಯರನ್ನು ಆವರಿಸುತ್ತದೆ. ಇದಕ್ಕೆಲ್ಲಾ ತೆರೆ ಎಳೆದಾಗಲೇ ಮುಕ್ತಿ ಸಿಗುವುದು.
ಅದೇನೇ ಇರಲಿ ಈಗ ನಟಿ ಶುಭಾ ಪೂಂಜಾ ತನ್ನ ಪ್ರೀತಿಯ ಹುಡುಗನನ್ನು ವರಿಸಲು ಸಿದ್ಧರಾಗಿದ್ದಾರೆ. ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.