Cinisuddi Fresh Cini News 

ಬಣ್ಣದ ಜಗತ್ತಿನಲ್ಲಿ ಉತ್ತರ ಕರ್ನಾಟಕದ ಚೆಂದುಳ್ಳಿ ಚೆಲುವೆ ಶ್ರುತಿ ಪಾಟೀಲ್

ಕಲರ್ ಫುಲ್ ದುನಿಯಾ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಅದೃಷ್ಟದ ಜೊತೆ ನಟನೆಯ ಸಾಮರ್ಥ್ಯವಿದ್ದರೆ ಮಾತ್ರ ಇಲ್ಲಿ ನಿಲ್ಲಲು ಸಾಧ್ಯ . ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕದವರ ಕೊಡುಗೆ ಅಪಾರವಾಗಿದೆ. ಉತ್ತರ ಕರ್ನಾಟಕದಿಂದ ಹಲವಾರು ಪ್ರತಿಭಾವಂತ ನಟ – ನಟಿಯರು ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.

ಹಾಗೆಯೇ ನಿರ್ದೇಶಕ ಯೋಗರಾಜ್ ಭಟ್, ಸುರೇಶ್ ಹೆಬ್ಳಿಕರ್, ಶರಣ್, ಶೃತಿ, ಅಜಯ್ ರಾವ್, ಮಯೂರಿ ಹೀಗೆ ಹಲವಾರು ಕಲಾವಿದರು ಹಾಗೂ ತಂತ್ರಜ್ಞರು ಚಿತ್ರರಂಗದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಇತ್ತಿಚಿಗೆ ಕಿರುತೆರೆ ವೀಕ್ಷಕರಿಗೆ ಚಿರಪರಿಚಯವಾದ ಹಾಗೂ ಕನ್ನಡ ಚಿತ್ರರಂಗದ ಉದೋಯೊನ್ಮುಖ ನಾಯಕಿಯಾಗಿ ಭದ್ರ ನೆಲೆ ಕಾಣುತ್ತಿರುವ ನಟಿ ಶೃತಿ ಪಾಟೀಲ್.

ಕಳೆದ ವರ್ಷ ಪ್ರಸಾರವಾಗುತ್ತಿದ್ದ ಮಾನಸ ಸರೋವರ ಧಾರವಾಹಿಯನ್ನು ವೀಕ್ಷಿಸಿದವರಿಗೆ ಈ ಮುಖ ಚಿರಪರಿಚತ, ಅದರಲ್ಲಿ ಶರಧಿ ಪಾತ್ರದ ಮೂಲಕ ಹೆಂಗಳೆಯರ ಮನಸೂರೆಗೊಂಡಿದ್ದ ಶೃತಿಯವರು ರಾಮಕೃಷ್ಣ -ಪದ್ಮವಾಸಂತಿ ಅವರ ಮಗಳಾಗಿ ಕಾಣಿಸಿಕೊಂಡಿದ್ದರು.
ಮೊದಲ ಅವಕಾಶದಲ್ಲೇ ಡಾ.ರಾಜ್ ಕುಮಾರ್ ರವರ ಬ್ಯಾನರ್ ನಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.

ಇದಾದ ನಂತರ ನಟಿ ಖುಷ್ಬು ರವರು ನಿರ್ಮಾಣ ಮಾಡಿದ ಲಕ್ಷ್ಮೀ ಸ್ಟೋರ್ಸ್ ಎಂಬ ತಮಿಳು ಧಾರಾವಾಹಿಯಲ್ಲೂ ಸಹ ಶೃತಿ ಮಿಂಚಿದರು. ಆ ಸಮಯದಲ್ಲೇ ಶೃತಿಯವರಿಗೆ ಸಿನಿಮಾ ಆಫರ್ ಬಂದಿದೆ.ಮೂಲತಃ ಬೆಳಗಾವಿ ಯವರಾದ ಶೃತಿ ಪಾಟೀಲ್ ಆಡಿಷನ್ ಮೂಲಕ ಸೀರಿಯಲ್ ಗೆ ಸೆಲೆಕ್ಟ್ ಆಗಿದ್ದರು. ನಂತರ ಚಿತ್ರರಂಗದಲ್ಲಿ ಒಮ್ಮೆಗೆ ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು.

ಮಿಸ್ಟರಿ ಆಫ್ ಮಂಜುಳ, ಚಿ.ಸೌ ಕನ್ಯಾಕುಮಾರಿ , ಬ್ಲಡ್ ಹ್ಯಾಂಡ್ ಇವು ಶೃತಿಯವರ ಮುಂಬರುವ ಚಿತ್ರಗಳಾಗಿವೆ. ಎಂ.ಎಸ್. ರಮೇಶ್ ರವರ ಗರಡಿಯಲ್ಲಿ ಗುರುತಿಸಿಕೊಂಡಿದ್ದ ಯುವ ನಿರ್ದೇಶಕ ಪ್ರವೀಣ್ ಜಯಣ್ಣ ಚೊಚ್ಚಲ ನಿರ್ದೇಶನದ ಮಿಸ್ಟರಿ ಆಫ್ ಮಂಜುಳ ಚಿತ್ರದ ತಬಲಾ ನಾಣಿಯವರು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಶೃತಿ ಪಾಟೀಲ್ ಪ್ರಧಾನ ಪಾತ್ರವನ್ನ ನಿರ್ವಹಿಸಿದ್ದಾರೆ. ನಿರೀಕ್ಷೆ ಇರುವ ಮಿಸ್ಟರಿ ಆಫ್ ಮಂಜುಳ ಚಿತ್ರದ ಟ್ರೈಲರ್ ಅತೀ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಇನ್ನೂ ಸಂಪೂರ್ಣ ಹೊಸಬರ ತಂಡವಾಗಿರುವ ಚಿ.ಸೌ.ಕನ್ಯಾ ಕುಮಾರಿ ಮಹಿಳಾ ಪ್ರಧಾನ ಕಥಾಹಂದರದ ಈ ಚಿತ್ರದ ನಾಯಕಿ ಶೃತಿ ಪಾಟೀಲ್ ರವರ ಪಾತ್ರವೇ ಹೈಲೆಟ್. ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಬಂದಿರುವ ಯುವ ನಟಿ ಶ್ರುತಿ ಗೆ ಈಗಾಗಲೇ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಉತ್ತಮ ಅವಕಾಶ ದೊರೆತಿದ್ದು , ಭರವಸೆಯ ನಾಯಕಿಯಾಗಿ ಚಿತ್ರರಂಗದಲ್ಲಿ ನಿಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿರುವ ಈ ಯುವ ನಟಿ ಶ್ರುತಿ ಚಂದನವನದಲ್ಲಿ ಉಜ್ವಲ ಭವಿಷ್ಯವನ್ನು ಕಾಣುವಂತಾಗಲಿ.

Related posts