Cinisuddi Fresh Cini News 

ದಕ್ಷಿಣ ಭಾರತದಲ್ಲಿ ಶ್ರದ್ಧಾ ಶ್ರೀನಾಥ್ ಶೈನಿಂಗ್

ಚಂದನವನದಲ್ಲಿ ಒಂದು ಕಾಲದಲ್ಲಿ ಪರಭಾಷಾ ನಾಯಕಿಯರ ಹಾವಳಿಯೇ ಹೆಚ್ಚಾಗಿತ್ತು. ಮಾಧವಿ, ಸರಿತಾ, ಲಕ್ಷ್ಮಿ, ಅಂಬಿಕಾ, ಮಾಲಾಶ್ರೀ ಮುಂತಾದ ನಟಿಯರು ಆಳುತ್ತಿದ್ದರು. ಆದರೆ ಈಗ ನಮ್ಮ ಕನ್ನಡತಿಯರೇ ಟಾಲಿವುಡ್, ಬಾಲಿವುಡ್ ಅಂಗಳದಲ್ಲಿ ವಿರಾಜಿಸುತ್ತಿದ್ದಾರೆ.

ಗೀತಾಗೋವಿಂದಂ ಚಿತ್ರದ ನಂತರ ತೆಲುಗು ಚಿತ್ರರಂಗದ ಮುದ್ದಿನ ಕಣ್ಮಣಿಯಾಗಿರುವ ರಶ್ಮಿಕಾಮಂದಣ್ಣ, ದೇವುಡಜಗನ್ನಾದಂ(ಡಿಜೆ) ಚಿತ್ರದಿಂದ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡಿರುವ ಪೂಜಾಹೆಗಡೆ, ಇಸ್ಮಾರ್ಟ್‍ಶಂಕರ್ ಚಿತ್ರದ ನಂತರ ಟಾಲಿವುಡ್‍ನಲ್ಲಿ ಬೇಡಿಕೆ ಕುದುರಿಸಿಕೊಂಡಿರುವ ನಭಾನಟೇಶ್‍ರಂತೆ ಯುಟರ್ನ್ ಚಿತ್ರದ ಮೂಲಕ ಮುಂಚೂಣಿಗೆ ಬಂದ ಶ್ರದ್ಧಾಶ್ರೀನಾಥ್ ಕೂಡ ಟಾಲಿವುಡ್, ಕಾಲಿವುಡ್‍ನಲ್ಲಿ ಈಗ ತಮ್ಮ ಚಿತ್ರ ಜೀವನಕ್ಕೆ ಉತ್ತಮ ಟರ್ನ್ ದೊರಕಿಸಿಕೊಂಡಿದ್ದಾರೆ.

ಕಾನೂನು ಪದವೀಧರೆಯಾದ ಶ್ರದ್ಧಾಶ್ರೀನಾಥ್‍ಗೆ ಬಣ್ಣದ ಲೋಕದ ಸೆಳೆತ ಬೆರೆತುಕೊಂಡಿದ್ದು ಕೊಹಿನೂರ್ ಎಂಬ ಮಲಯಾಳಂ ಚಿತ್ರದಿಂದ. ಪವನ್ ಒಡೆಯರ್ ನಿರ್ದೇಶನದ ಯುಟರ್ನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ, ಮುಂಗಾರು ಮಳೆ 2, ಊರ್ವಿ, ರುಸ್ತುಂ ಸಿನಿಮಾಗಳಲ್ಲಿ ಮಿಂಚಿ ಪರಭಾಷಾ ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರ ಮುದ್ದಿನ ಕಣ್ಮಣಿ ಆದರು.

ಕಾರ್ತಿ ನಟನೆಯ ಕಾಟ್ರುವೆಲಿಯಿದೈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟ ಶ್ರದ್ಧಾ ನಂತರ ವಿಕ್ರಂವೇದಾ, ಕೆ13, ಬಾಲಿವುಡ್‍ನ ಮಿಲನಾ ಟಾಕೀಸ್ ಮೂಲಕ ಬಿಗ್‍ಟೌನ್‍ಗೂ ಹೆಜ್ಜೆ ಇಟ್ಟ ಶ್ರದ್ಧಾ, ಟಾಲಿವುಡ್‍ನ ಸ್ಟೈಲಿಶ್ ಸ್ಟಾರ್ ನಾನಿ ಅಭಿನಯದ ಜೆರ್ಸಿ ಮೂಲಕ ತೆಲುಗು ಚಿತ್ರರಂಗದಲ್ಲೂ ಗುರುತಿಸಿಕೊಂಡ ಶ್ರದ್ಧಾ ಈಗ ಟಾಲಿವುಡ್‍ನ ಬಲು ಬೇಡಿಕೆಯ ನಟಿಯಾಗುವತ್ತ ಚಿತ್ತ ಹರಿಸಿದ್ದಾರೆ.

ಡೈಲಾಗ್ ಕಿಂಗ್ ಸಾಯಿಕುಮಾರ್‍ರ ಪುತ್ರ ಆದಿ ಸಾಯಿಕುಮಾರ್ ನಟನೆಯ ಜೋಡಿ ಚಿತ್ರದಲ್ಲಿ ನಟಿಸಿದ ನಂತರ ಟಾಲಿವುಡ್‍ನಲ್ಲಿ ಶ್ರದ್ಧಾರನ್ನು ಅಲ್ಲಿನ ಚಿತ್ರವಲಯದವರು ಗುರುತಿಸುತ್ತಿದ್ದು ನಿರ್ದೇಶಕ ರವಿಕಾಂತ್ ಪೆರಪು ನಿರ್ದೇಶಿಸಿ ಸಿದ್ದು ನಾಯಕನಟನಾಗಿರುವ ಕೃಷ್ಣ ಆ್ಯಂಡ್ ಈಸ್ ಲೀಲಾ ಚಿತ್ರದಲ್ಲಿ ನಟಿಸಿರುವ ಶ್ರದ್ಧಾ ಈಗ ಅದೇ ನಿರ್ದೇಶಕರು ನಿರ್ದೇಶಿಸುತ್ತಿರುವ ಮುಂದಿನ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕೃಷ್ಣ ಆ್ಯಂಡ್ ಈಸ್ ಲೀಲಾ ಚಿತ್ರದಲ್ಲಿ ಕೃಷ್ಣನ ಲೀಲಾರಾಗಿ ಶ್ರದ್ಧಾ ಶ್ರೀನಾಥ್, ಸೀರತ್ ಕಪೂರ್, ಶಾಲಿನಿ ಪದ್ನಿಕಟ್ಟಿ ನಟಿಸಿದ್ದು ಮೂವರು ನಾಯಕಿಯರ ಪೈಕಿ ಕೃಷ್ಣ ಯಾರಿಗೆ ಒಲಿಯುತ್ತಾನೆ ಎಂಬುದೇ ಕಥೆಯ ಕುತೂಹಲ ಭರಿತ ಅಂಶವಾಗಿದೆ.

ಅಂದ ಹಾಗೆ ಕೃಷ್ಣ ಆ್ಯಂಡ್ ಈಸ್ ಲೀಲಾ ಚಿತ್ರವನ್ನು ಬಾಹುಬಲಿಯ ಬಲ್ಲವದೇವ ಖ್ಯಾತಿಯ ರಾಣದಗ್ಗುಬಟ್ಟಿ ನಿರ್ಮಿಸಿದ್ದು ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದರು ಕೂಡ ಕನ್ನಡತಿ ಶ್ರದ್ಧಾ ಶ್ರೀನಾಥ್‍ರ ಅಭಿನಯ ಎಲ್ಲರ ಮನಸ್ಸನ್ನು ಗೆಲ್ಲಲಿದೆ ಎಂದು ನಿರ್ದೇಶಕ ರವಿಕಾಂತ್ ಪೆರಪು ತಿಳಿಸಿದ್ದಾರೆ.

ಶ್ರದ್ಧಾ ಶ್ರೀನಾಥ್ ನಟಿಸಿದ್ದ ಕೃಷ್ಣ ಆ್ಯಂಡ್ ಈಸ್ ಲೀಲಾ ಚಿತ್ರವು ಬಿಡುಗಡೆಯಾಗುವ ಸಮಯದಲ್ಲೇ ಕೊರೊನಾ ಹಾವಳಿ ಉಂಟಾಗಿದ್ದರಿಂದ ಚಿತ್ರವನ್ನು ನೆಟ್‍ಫ್ಲೆಕ್ಸ್ ಮೂಲಕವೇ ಬಿಡುಗಡೆ ಮಾಡಿದ್ದು
ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆಯಂತೆ.

ಟಾಲಿವುಡ್, ಕಾಲಿವುಡ್‍ನಲ್ಲಿ ಬ್ಯುಜಿ ಆಗಿರುವ ಕನ್ನಡತಿ ಶ್ರದ್ಧಾ ಶ್ರೀನಾಥ್‍ಗೆ   ಸ್ಯಾಂಡಲ್‍ವುಡ್‍ನಿಂದಲೂ ಬಹಳಷ್ಟು ಅವಕಾಶಗಳು ಹುಡುಕಿಕೊಂಡು ಬಂದಿದೆ.

ಕಿಚ್ಚ ಸುದೀಪ್ ನಟನೆಯ ಪ್ಯಾಂಥ್ಯಾಮ್ ಚಿತ್ರದ ಚಿತ್ರೀಕರಣವು ಹೈದಾಬ್ರಾದ್‍ನಲ್ಲಿ ನಡೆಯಲಿದ್ದು ಶ್ರದ್ಧಾಶ್ರೀನಾಥ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ನೀನಾಸಂ ಸತೀಶ್ ನಟಿಸಿರುವ ಗೋದ್ರಾ ಚಿತ್ರದಲ್ಲೂ ಶ್ರದ್ಧಾ ನಟಿಸಿದ್ದು ಈ ಚಿತ್ರದ ಬಹುತೇಕ ಚಿತ್ರೀಕರಣವು ಮುಗಿದಿದೆ, ರಿಷಭ್‍ಶೆಟ್ಟಿ ನಿರ್ದೇಶನದ ರುದ್ರಪ್ರಯಾಗ ಚಿತ್ರಗಳಲ್ಲೂ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದಾರೆ.

ಇದರೊಂದಿಗೆ ವಿಶಾಲ್ ನಟನೆಯ ಚಕ್ರದಲ್ಲಿ ಎಸಿಪಿ ಗಾಯತ್ರಿ ಪಾತ್ರದಲ್ಲಿ ರಗಡ್ ಆಗಿ ಮಿಂಚುತ್ತಿರುವ ಶ್ರದ್ಧಾ , ಮಾಧವನ್ ಅಭಿನಯದ ಮಾರಾ ಚಿತ್ರದಲ್ಲೂ ನಟಿಸು ತ್ತಿದ್ದಾರೆ.

ಮದುವೆ ಆದ ನಂತರ ನಟಿಯರ ಬೇಡಿಕೆ ಕುಸಿಯುತ್ತದೆಯೇ ಎಂದು ಟ್ವಿಟ್‍ನಲ್ಲಿ ಪ್ರಶ್ನಿಸಿರುವ ಶ್ರದ್ಧಾಗೆ ವಿವಾಹ ವಾದ ನಂತ ರವೂ ಅಭಿನಯಕ್ಕೆ ಚಾಲೆಂಜ್ ಆಗಿರು ವಂತಹ ಪಾತ್ರಗಳೇ ಸಿಕ್ಕಿ, ಚಿತ್ರರಂಗದಲ್ಲಿ ಶ್ರದ್ಧಾ ಬಹು ಬೇಡಿಕೆಯ ನಟಿ ಆಗಿ ಮಿಂಚುವoತಾಗಲಿ.

Share This With Your Friends

Related posts