Cinisuddi Fresh Cini News 

ಯೂಟ್ಯೂಬ್ ನಲ್ಲಿ ಲೋಕಲ್ ವಾಲ ನ “ಶೋಕಿವಾಲ”

ಕೊರೋನಾ ಅಬ್ಬರದಿಂದ ಬೇಸತ್ತಿರುವ ಸಿನಿಪ್ರಿಯರಿಗೆ ಶೋಕಿವಾಲ ಚ ಚಿತ್ರ ತಂಡದಿಂದ ಲೋಕಲ್ ವಾಲ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅಜೇಯ್‍ರಾವ್ ನಾಯಕರಾಗಿ ಅಭಿನಯಿಸುತ್ತಿದ್ದು ಇವರಿಗೆ ಜೋಡಿಯಾಗಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.

ಜಾಕಿ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಳ್ಳಿ ಸೊಗಡಿನ ಹಾಸ್ಯ ಮಿಶ್ರಣದ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರಕ್ಕೆ
ನವೀನ್ ಕುಮಾರ್ ಅವರ ಛಾಯಾಗ್ರಹಣ , ಶ್ರೀಧರ್. ವಿ. ಸಂಭ್ರಮ್ ಸಂಗೀತ ನಿರ್ದೇಶನ , ಜಯಂತ್ ಕಾಯ್ಕಿಣಿ, ಡಾ|| ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಫಿರ್ ಹಾಡುಗಳನ್ನು ರಚಿಸಿದ್ದಾರೆ.

ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ, ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ. ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಸೇರಿಕೊಂಡಿದೆ. ಕ್ರಿಸ್ಟಲ್ ಮ್ಯೂಸಿಕ್ ಮೂಲಕ ಹಾಡುಗಳು ಹೊರಬಂದಿದ್ದು , ಹೆಚ್ಚಿನ ಮಾಹಿತಿಯನ್ನು ಯೂಟ್ಯೂಬ್ ನಲ್ಲಿ ಗಮನಿಸಿಬಹುದು.

Share This With Your Friends

Related posts