Cinisuddi Fresh Cini News 

ಸೌಂಡ್ ಮಾಡಲಿದ್ದಾನೆ “ಶೋಕಿವಾಲ”

ಎಲ್ಲೆಲ್ಲೂ ಕೊರೋನಾ ಕರಾಳ ಛಾಯೆ ಆರ್ಭಟಿಸುತ್ತಿದೆ. ಇದರಿಂದ ಜನರು ಕಂಗಾಲಾಗಿರುವುದಂತೂ ಸತ್ಯ. ಇದರ ಬೆನ್ನಲ್ಲೇ ಶೋಕಿವಾಲ ಚಿತ್ರತಂಡ ಕೊರೋನಾ ಮುಕ್ತ ರಾಜ್ಯವಾದ ನಂತರ ತಮ್ಮ ಚಿತ್ರ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆಯoತೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅಜೇಯ್‍ರಾವ್ ನಾಯಕರಾಗಿ ಅಭಿನಯಿಸುತ್ತಿದ್ದು ಇವರಿಗೆ ಜೋಡಿಯಾಗಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಇವರಿಬ್ಬರು ಹಿಡಿದಿರುವ ಹಾರನ್ ಪೋಸ್ಟರ್ ಭಾರೀ ಸದ್ದನ್ನು ಮಾಡಿದೆ.

ಜಾಕಿ( ತಿಮ್ಮೇಗೌಡ ) ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಭಾಗ್ಯದ ಬಳೆಗಾರ, ತಮಸ್ಸು , ದೇವರು ಕೊಟ್ಟ ತಂಗಿ, ಲಕ್ಕಿ, ಅಧ್ಯಕ್ಷ, ರನ್ನ , ವಿಕ್ಚರಿ, ಕೆ.ಜಿ.ಎಫ್ ` ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ. ಹಳ್ಳಿ ಸೊಗಡಿನ ಹಾಸ್ಯ ಮಿಶ್ರಣದ ಪ್ರೇಮ ಕಥಾನಕ ಹೊಂದಿರುವ ಈ ಚಿತ್ರಕ್ಕೆ
ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.

ಶೋಕಿವಾಲನಿಗೆ ಶ್ರೀಧರ್. ವಿ. ಸಂಭ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಡಾ|| ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಫಿರ್ ಹಾಡುಗಳನ್ನು ರಚಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ, ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ. ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಇನ್ನು ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯ, ವಾಣಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿರುವ ಶೋಕಿವಾಲ ಚಿತ್ರದ ಹಾಡುಗಳು ಸದ್ಯದಲ್ಲೇ ಎಲ್ಲರ ಮುಂದೆ ರಾರಾಜಿಸಲಿದೆ.

Share This With Your Friends

Related posts