Cinisuddi Fresh Cini News 

ಸೆನ್ಸಾರ್ ಪರೀಕ್ಷೆಯಲ್ಲಿ “ಶೋಕಿವಾಲ” ಪಾಸ್

ಈ ಸಿನಿಮಾದ ಆರಂಭದಿಂದ ಇಲ್ಲಿಯವರೆಗೂ ಪ್ರತಿ ಹಂತದಲ್ಲೂ ವಿಭಿನ್ನ ರೀತಿಯಲ್ಲಿ ಸದ್ದು ಮಾಡುತ್ತಿರುವ ಚಿತ್ರ “ಶೋಕಿವಾಲ” ಈಗ ಚಿತ್ರವು ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಪಡೆದು ಪಾಸ್ ಆಗಿ ಜನರ ಮುಂದೆ ಬಂದು ಗೆಲ್ಲುವ ಪರೀಕ್ಷೆ ತಯಾರಿ ನಡೆಸುತ್ತಿದ್ದಾರೆ. ಜನವರಿಯಲ್ಲಿ ಬರುವ ಎಲ್ಲಾ ಸಾಧ್ಯತೆಗಳು ಇದೆ ಎಂದು ಚಿತ್ರತಂಡ ತಿಳಿಸಿದ್ದಾರೆ.

ಈ ಸಿನಿಮಾದ ಮೊದಲ ಲಿರಿಕಲ್ ವೀಡಿಯೋ ರೀಲಿಸ್ ಅಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ ಮುಡಿ ಬಂದಿದೆ ಎಂದು ಹೇಳಿದ್ದರು…. ಈಗ ಮತ್ತೋಂದು ಹಾಡನ್ನು ಬಿಡಲು ತಯಾರಿ ನಡೆಯುತ್ತಿದೆ. ಹರಸಿ ಪ್ರೀತಿ ತೋರಿಸುತ್ತಿರುವ ಎಲ್ಲರಿಗೂ ಮತ್ತು ತಮಗೂ ನನ್ನ ಕಡೆಯಿಂದ ಈ ಮೂಲಕವಾಗಿಯೂ ಧನ್ಯವಾದವನ್ನು ತಿಳಿಸುತ್ತೆನೆ.

ನನಗೆ ಅವಕಾಶ ಕೊಟ್ಟ ನಿರ್ಮಾಪಕರಾದ T.R. ಚಂದ್ರಶೇಖರ್ ಹಾಗೂ ಕಿಶೋರ್ ಗೆ ಧನ್ಯವಾದಗಳನ್ನ ತಿಳಿಸುತ್ತಾ , ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ . ಅಜಯ್ ರಾವ್, ಸಂಜನಾ ಆನಂದ್, ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ವಾಣಿ , ಚಂದನ , ಲಾಸ್ಯ, ನಾಗರಾಜಮೂರ್ತಿ ಇನ್ನೂ ತುಂಬಾ ಜನ ಕಲಾವಿದರು ನಟಿಸಿದ್ದಾರೆ.

ಇದುವರೆಗೆ ಚನ್ನಪಟ್ಟಣ, ಹೊಂಗನೂರು, ವಿರುಪಾಕ್ಷೀಪುರ, ಶ್ರೀರಂಗಪಟ್ಟಣ, ಮಂಡ್ಯ ,ಮೈಸೂರು, ತುಮಕೂರು ,ಮಾಗಡಿ ಯತಂಹ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಶ್ರೀಧರ್. ವಿ. ಸಂಭ್ರಮ್ ರವರ ಸಂಗೀತವಿದ್ದು, 4 ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ.

ಜಯಂತ್ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ರವರ ಸಾಹಿತ್ಯವಿದೆ. ನವೀನ್ ಕುಮಾರ್.ಎಸ್ ಕ್ಯಾಮೆರಾಮೆನ್,ಕೆ.ಎಂ. ಪ್ರಕಾಶ್ ಎಡಿಟರ್ , ಪ್ರಶಾಂತ್ ರಾಜಪ್ಪ ಸಂಭಾಷಣೆ ಮೋಹನ್ ನೃತ್ಯ,ವಿಕ್ರಮ್ ಮೋರ್ ಸಾಹಸ,ಮೈಸೂರು ರಘು ರವರ ಕಲಾ ನಿರ್ದೇಶನ ಈ ಶೋಕಿವಾಲ ಚಿತ್ರಕ್ಕೆ ಇದೆ. ಕೋರೋನ ಕ್ಲಿಯರ್ ಅಗಿ‌100% ಸಿಕ್ಕಿದ ಕೂಡಲೆ ಚಿತ್ರಮಂದಿರಕ್ಕೆ ಶೋಕಿವಾಲ ಎಂಟ್ರಿ ಕೊಡಲಿದ್ದಾನೆ ಎಂದು ನಿರ್ದೇಶಕ ಜಾಕಿ ಸಂಪೂರ್ಣ ಮಾಹಿತಿಯನ್ನು ನೀಡಿದರು.

Related posts