Cinisuddi Fresh Cini News 

ಶೋಕಿವಾಲ’ ಚಿತ್ರದ ಚಿತ್ರೀಕರಣ ಪೂರ್ಣ

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ಅವರು ನಿರ್ಮಿಸುತ್ತಿರುವ, ಅಜೇಯ್‍ರಾವ್ ನಾಯಕರಾಗಿ ಅಭಿನಯಿಸುತ್ತಿರುವಶೊಕಿವಾಲ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಚನ್ನಪಟ್ಟಣ, ಶ್ರೀರಂಗಪಟ್ಟಣ, ಮೈಸೂರು, ಮಂಡ್ಯ, ತುಮಕೂರು, ಮಾಗಡಿ, ಮದ್ದೂರು ಮುಂತಾದ ಕಡೆ ನಡೆದಿದೆ. ಮದ್ದೂರಿನ ಬಳಿಯ ತೈಲೂರಿನಲ್ಲಿ ಕೊನೆಯ ದಿನದ ಚಿತ್ರೀಕರಣ ನಡೆದಿದ್ದು, ಅಲ್ಲೇ ಕುಂಬಳಕಾಯಿ ಒಡೆಯಲಾಯಿತು.

ಚಿತ್ರದ ಡಬ್ಬಿಂಗ್ ಕೂಡ ಮುಕ್ತಾಯಹಂತದಲ್ಲಿರುವುದಾಗಿ ತಿಳಿಸಿರುವ ನಿರ್ದೇಶಕರು, ಅಂದುಕೊಂಡದಕ್ಕಿಂತ ಚಿತ್ರೀಕರಣ ಬೇಗ ಮುಗಿದಿದೆ ಎನ್ನುತ್ತಾರೆ. ಚಿತ್ರೀಕರಣ ಸುಗಮವಾಗಿ ನಡೆಯಲು ನಿರ್ಮಾಪಕರ ಸಹಕಾರವೇ ಕಾರಣ ಎನ್ನುವ ನಿರ್ದೇಶಕ ಜಾಕಿ, ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ್ದಾರೆ.

ಜಾಕಿ ಈ ಚಿತ್ರಕ್ಕೆಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಭಾಗ್ಯದ ಬಳೆಗಾರ, ತಮಸ್ಸು ದೇವರು ಕೊಟ್ಟ ತಂಗಿ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ, ಲಕ್ಕಿ, ಅಧ್ಯಕ್ಷ,ರನ್ನವಿಕ್ಚರಿ,ಕೆ.ಜಿ.ಎಫ್ ` ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಜಾಕಿ ಕೆಲಸ ಮಾಡಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.

ನವೀನ್ ಕುಮಾರ್ ಅವರ ಛಾಯಾಗ್ರಹಣವಿರುವ ಶೋಕಿವಾಲನಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನವಿದೆ. ಜಯಂತ ಕಾಯ್ಕಿಣಿ, ಡಾ|| ವಿ.ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಫಿûರ್ ಹಾಡುಗಳನ್ನು ರಚಿಸಿದ್ದಾರೆ. ಕ್ಕೆ.ಎಂ.ಪ್ರಕಾಶ್ ಸಂಕಲನ, ವಿಕ್ರಂ ಮೋರ್ ಸಾಹಸ ನಿರ್ದೇಶನ, ಹಾಗೂ ಮೋಹನ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ಬಾಲು ಕುಮುಟ ಅವರ ನಿರ್ಮಾಣ ಮೇಲ್ವಿಚಾರಣೆಯಿದೆ. ಈ ಚಿತ್ರಕ್ಕೆ ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಅಜೇಯ್‍ರಾವ್ ಅವರಿಗೆ ನಾಯಕಿಯಾಗಿ ಸಂಜನ ಆನಂದ್ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯ, ವಾಣಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts