Cinisuddi Fresh Cini News 

ARK ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಶಿವಣ್ಣ

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ A r k ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೌಧರಿ ಅವರು ನಿರ್ಮಿಸುತ್ತಿರುವ, ನೂತನ ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಲಿದ್ದಾರೆ. ಕೊಟ್ರೇಶ್ ಚಪ್ಪರದಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎ.ಹರ್ಷ, ಯೋಗಿ ಜಿ ರಾಜ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಕೊಟ್ರೇಶ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಸಾಮಾಜಿಕ ಕಾಳಜಿಯಿರುವ ಈ ಚಿತ್ರದ ಕಥೆಯನ್ನು ಶಿವರಾಜಕುಮಾರ್ ಅವರ ಬಳಿ ಹೇಳಿದಾಗ, ಕಥೆ ತುಂಬಾ ಚೆನ್ನಾಗಿದೆ ಎಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಕಥೆ ಕೇಳಿದ ಕೂಡಲೆ ಶಿವರಾಜಕುಮಾರ್ ಅವರು ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಶಿವಣ್ಣ ಹೊಸಬರಿಗೆ ನೀಡುವ ಪ್ರೋತ್ಸಾಹ ನಿಜಕ್ಕೂ ನನ್ನಂಥಹ ನೂತನ ನಿರ್ದೇಶಕರಿಗೆ ಕಾರ್ಯ ನಿರ್ವಹಿಸಲು ‌ಮತ್ತಷ್ಟು ಸ್ಪೂರ್ತಿದಾಯಕ ಎನ್ನುತ್ತಾರೆ ಕೊಟ್ರೇಶ್ ಚಪ್ಪರದಹಳ್ಳಿ.

ಈಗಷ್ಟೇ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲು ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಾರಂಭಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

Related posts