Cinisuddi Fresh Cini News 

ಕರುನಾಡ ಚಕ್ರವರ್ತಿ ಶಿವಣ್ಣನಿಗೆ 58ರ ಹುಟ್ಟುಹಬ್ಬ

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್​ ಶಿವರಾಜ್ ಕುಮಾರ್​ ಗೆ ಇಂದು 58 ರ ಹುಟ್ಟುಹಬ್ಬದ ಸಂಭ್ರಮ. ಕೊರೋನಾ ಕಾಟದಿಂದ ಇಂದು ಸಂಡೇ ಲಾಕ್ ಡಾನ್ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ.

ಈಗಾಗಲೇ ಈ ವಿಚಾರವಾಗಿ ಅಭಿಮಾನಿಗಳು ಯಾರೂ ಮನೆ ಬಳಿ ಬರುವುದು ಬೇಡ, ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿದ್ದರು.

ಅದರಂತೆ ಅಭಿಮಾನಿಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ಶಿವಣ್ಣನಿಗೆ ಹುಟ್ಟುಹಬ್ಬವನ್ನು ತಿಳಿಸಿದ್ದಾರೆ. ಮುಂದೆ ಕೊರೋನಾ ಹಾವಳಿ ಕಮ್ಮಿ ಆದ ನಂತರ ಅಭಿಮಾನಿಗಳು ಶಿವಣ್ಣನ ಬರ್ತ್ಡೇ ಸೆಲೆಬ್ರೇಟ್ ಮಾಡಲಿದ್ದಾರಂತೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕುಟುಂಬ ವರ್ಗದೊಂದಿಗೆ ಶಿವಣ್ಣ ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಸೆಂಚುರಿ ಸ್ಟಾರ್ ಶಿವಣ್ಣನಿಗೆ ಕರುನಾಡ ಅಲ್ಲದೆ ವಿಶ್ವದೆಲ್ಲೆಡೆಯೂ ಕೂಡ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ. ಹಾಗಾಗಿ ಶಿವಣ್ಣನ ಬರ್ತ್ಡೇಗಾಗಿ ವೀಡಿಯೋ ಕಾಲ್ ಮೂಲಕ ಮುಖಾಮುಖಿಯಾಗಿ ಶುಭ ಹಾರೈಸಿದರು. ಕತಾರ್, ದುಬೈ, ಲಂಡನ್, ಫ್ರಾನ್ಸ್, ಅಮೇರಿಕ ಸೇರಿದಂತೆ ಹಲವು ದೇಶಗಳ ಅಭಿಮಾನಿಗಳು ಈ ವೀಡಿಯೋ ‌ಮುಖಾಮುಖಿಯಲ್ಲಿ ಭಾಗವಹಿಸಿದ್ದಾರೆ.

ಈ ಬಾರಿ ಶಿವಣ್ಣನ ಹುಟ್ಟುಹಬ್ಬಕ್ಕೆ ಹಲವಾರು ಚಿತ್ರಗಳು ಟೀಸರ್ , ಪೋಸ್ಟರ್, ಟ್ರೇಲರ್ ಲಾಂಚ್ ಗಳನ್ನು ಮಾಡಿದೆ. ಅದರಲ್ಲಿ ಭಜರಂಗಿ-2 ಚಿತ್ರದ ಟೀಸರ್ ಹೈಲೈಟ್. ಹರ್ಷ ನಿರ್ದೇಶನದ ಈ ಸಿನಿಮಾಗೆ ಭಾವನಾ ನಾಯಕಿ.

ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೋನಾ ಹಾವಳಿಯಿಂದ ಚಿತ್ರಕ್ಕೆ ತಡವಾಗಿದೆ. ಹಾಗೆಯೇ ಹೊಸ ಸಿನಿಮಾಗಳು ಸಹ ಅನೌನ್ಸ್ ಆಗಿದ್ದು, ಡಾಲಿ ಧನಂಜಯ್ ಜೊತೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ ಶಿವಣ್ಣ.

ಅಷ್ಟೇ ಅಲ್ಲದೆ ಸಿಂಹ ಘರ್ಜನೆಯಲ್ಲಿ ಇರುವ ಶಿವಣ್ಣನ ಪೋಸ್ಟರ್ನ ಫಸ್ಟ್ ಲುಕ್ ಹಾಗೂ ಪ್ರೊಡಕ್ಷನ್ ನಂ -1 ಚಿತ್ರ ಸಿನಿಮಾ ಸಹ ಅನೌನ್ಸ್ ಆಗಿದೆ. ಶಿವಣ್ಣ @58 ಎಂಬ ವಿಶೇಷ ಹಾಡು ಸೇರಿದಂತೆ ಹಲವಾರು ಕಾರ್ಯಕ್ರಮಗಳು ಈ ಬಾರಿ ಶಿವಣ್ಣನ ಹುಟ್ಟುಹಬ್ಬಕ್ಕೆ ನಡೆದಿದ್ದು ವಿಶೇಷವಾಗಿದೆ.

ಒಟ್ಟಾರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಂಭ್ರಮ ಕೊರೋನಾ ನಡುವೆಯೂ ಸಹ ವಿಶೇಷ ರೀತಿಯಲ್ಲಿ ಆಚರಣೆ ಗೊಳ್ಳುತ್ತಿರುವುದು ಸಂಭ್ರಮವೇ ಸರಿ.

Share This With Your Friends

Related posts