Cinisuddi Fresh Cini News 

“ಶಿವ@58” ಅಧಿಪತಿ ಸಾಂಗ್ ಬಿಡುಗಡೆ ಮಾಡಿದ ಅಪ್ಪು

ಶಿವಣ್ಣ ಅಂದರೆ ಆಕರ್ಷಣೆ, ಶಿವಣ್ಣ ಅಂದರೆ ಪ್ರೀತಿ, ಶಿವಣ್ಣ ಅಂದರೆ ಅಭಿಮಾನ… ಎಂಥವರನ್ನೂ ಸೆಳೆಯುವ ಗುಣ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರದ್ದು.

ಅಸಾಧಾರಣ ಎನರ್ಜಿ, ಯಾವ ಹುಡುಗರಿಗೂ ಕಡಿಮೆಯಿಲ್ಲದಂತಾ ಚುರುಕುತನ, ಎಲ್ಲರನ್ನೂ ಅವರು ಪ್ರೀತಿಸುವ ಪರಿಯಿಂದಲೇ ದಿನದಿಂದ ದಿನಕ್ಕೆ ಶಿವಣ್ಣನ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಬರುತ್ತಿದೆ.

ಇಂಥ ಶಿವಣ್ಣನಿಗೆ ಈಗ ಐವತ್ತೆಂಟು ವರ್ಷ ಅಂದರೆ ಯಾರು ತಾನೆ ನಂಬಲು ಸಾಧ್ಯ? ಆದರೆ ನಂಬಲೇಬೇಕು. ಜುಲೈ 12ರಕ್ಕೆ ಶಿವರಾಜ್‌ ಕುಮಾರ್‌ ಅವರ ಹುಟ್ಟುಹಬ್ಬ.

ಕೊರೋನಾದ ಕರಾಳ ಛಾಯೆಯ ನಡುವೆಯೂ ಆಭಿಮಾನದ ನಟನ ಹುಟ್ಟುಹಬ್ಬ ಭಿನ್ನ ರೀತಿಯಲ್ಲಿ ಆಚರಿಸಲು ಶಿವಣ್ಣನ ಅಭಿಮಾನಿಗಳು ಸಜ್ಜಾಗಿದ್ದಾರೆ. ಅದಾಗಲೇ ಆನ್‌ ಲೈನ್‌ ತುಂಬೆಲ್ಲಾ ಶಿವಣ್ಣನ ಹುಟ್ಟುಹಬ್ಬದ ಸಡಗರ ಜೋರಾಗೇ ಆರಂಭಗೊಂಡಿದೆ.

ವರುಣ್‌ ಸ್ಟುಡಿಯೋಸ್‌ ಮೂಲಕ ಶಿವಣ್ಣನ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ಉಡುಗೊರೆಯೊಂದು ತಯಾರಾಗಿದೆ. ಅದೇನೆಂದರೆ ಸೆಂಚುರಿಸ್ಟಾರ್‌ ಬದುಕಿನ ಒಟ್ಟು ಹಾದಿ, ಅವರ ಗುಣಗಳನ್ನೆಲ್ಲಾ ಒಂದು ಹಾಡಿನಲ್ಲಿ ಹಿಡಿದಿಡಲಾಗಿದೆ.

ʻಲಕ್‌ ಲಕ್‌ ಲಕ್‌ ಲಕ್‌ ಲಕ್ಪತಿ.. ಕರುನಾಡಿಗೆ ಇವರೇ ಅಧಿಪತಿʼ ಎಂದು ಶುರುವಾಗುವ ಹಾಡಿನಲ್ಲಿ ಅವರ ಗುಣಗಾನ ಮಾಡಲಾಗಿದೆ. ಈ ಹಾಡಿಗೆ ʻಶಿವ@58ʼ ಎಂದು ಹೆಸರಿಡಲಾಗಿದೆ. ಭಜರಂಗಿ ಮೋಹನ್‌ ರಚಿಸಿರುವ ಹಾಡಿಗೆ ಗುಮಿನೇನಿ ವಿಜಯ್‌ ಸಂಗೀತ ಸಂಯೋಜಿಸಿದ್ದಾರೆ.

ಅನಿರುದ್ಧ ಶಾಸ್ತ್ರಿ ಅದ್ಭುತವಾಗಿ ಹಾಡಿದ್ದಾರೆ. ಕೀರ್ತೀಗೌಡ ಮತ್ತು ಪ್ರಜ್ವಲ್‌ ತುಂಬಾ ಆಕರ್ಷಕವಾದ ಲಿರಿಕಲ್‌ ವಿಡಿಯೋ ವಿನ್ಯಾಸಗೊಳಿಸಿದ್ದಾರೆ. ವರುಣ್‌ ಕುಮಾರ್‌ ನಿರ್ಮಾಣದ ʼಶಿವ@58ʼ ಯಾವ ಸಿನಿಮಾ ಹಾಡಿಗೂ ಕಡಿಮೆ ಇಲ್ಲದಂತೆ ರೂಪುಗೊಂಡಿದೆ.

ಅಭಿಮಾನಿಗಳಿಗಾಗಿ ರೂಪಿಸಿರುವ ಈ ವಿಶೇಷ ಹಾಡನ್ನು ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಇಂದು ಲೋಕಾರ್ಪಣೆ ಮಾಡಿದ್ದಾರೆ. ʻʻಇಷ್ಟು ಚೆಂದದ ಹಾಡನ್ನು ನೋಡಿ ನಾನು ನಿಜಕ್ಕೂ ಥ್ರಿಲ್‌ ಆಗಿದ್ದೇನೆ.

ಒಂದು ಸಿನಿಮಾ ಹಾಡನ್ನು ರೂಪಿಸಲು ಎಷ್ಟು ಶ್ರಮ ಹಾಕಬೇಕೋ ಅದೇ ಮಟ್ಟಿಗೆ ಎಫರ್ಟ್‌ ಹಾಕಿ ಶಿವಣ್ಣನ ಕುರಿತಾದ ಹಾಡು ರೂಪಿಸಿರುವುದು ನೋಡಿ ನಿಜಕ್ಕೂ ಕಣ್ತುಂಬಿ ಬಂತುʼʼ ಎಂಬುದಾಗಿ ಪುನೀತ್‌ ಪ್ರತಿಕ್ರಿಯಿಸಿದ್ದಾರೆ.

Share This With Your Friends

Related posts