Cinisuddi Fresh Cini News 

‘ಶಿವ’ ಚಿತ್ರದ ಟ್ರೈಲರ್ ರಿಲೀಸ್

ಮಂಡ್ಯ ಭಾಗದಲ್ಲಿ ನಡೆದ ಸುಂದರ ಪ್ರೇಮಕಥೆ ಹಾಗೂ ರಾಜಕೀಯ ಹಿನ್ನೆಲೆಯನ್ನು ಹೊಂದಿರುವ ಶಿವ ಚಿತ್ರದ ಟ್ರೈಲರ್ ಅನಾವರಣ ಹಾಗೂ ನಿರ್ದೇಶಕ ರಘು ವಿಜಯ ಅವರು ರಚಿಸಿದ 2 ಕವನ ಸಂಕಲನಗಳನ್ನು ಮೊನ್ನೆ ಬಿಡಗಡೆ ಮಾಡಲಾಯಿತು.

ಚಿತ್ರಕ್ಕೆ ಅಲ್‍ರೌಂಡರ್ ನಂತೆ ಕೆಲಸ ಮಾಡಿರವ ನಿರ್ದೇಶಕ ರಘು ವಿಜಯ ಕಸ್ತೂರಿ ಅವರೇ ಚಿತ್ರದ ನಾಯಕನಾಗುವುದರೊಂದಿಗೆ ನಿರ್ಮಾಣ,ಕಥೆ, ಚಿತ್ರಕಥೆ ಯ ಹೊಣೆಯನ್ನು ಹೊತ್ತಿದ್ದಾರೆ. ಟ್ರೈಲರ್ ಬಿಡಗಡೆಯ ನಂತರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕಂ ನಾಯಕ ನಟ ರಘು, ಚಿತ್ರದ ನಾಯಕ ಒಂದು ಸಮಸ್ಯೆಯಲ್ಲಿ ಸಿಲಕಿಕೊಂಡಾಗ ಆತ ಅದನ್ನ ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ಬಿಂಬಿಸವುದರ ಜೊತೆಗೆ ವ ಹಳ್ಳಿಯಲ್ಲಿನ ರಾಜಕೀಯದ ಬಗ್ಗೆಯೂ ಬೆಳಕು ಚೆಲ್ಲಿದ್ದ, ಮಂಡ್ಯ ಸುತ್ತಮುತ್ತ ಹಾಗೂ ಮಳವಳ್ಳಿ ಜಾತ್ರೆಯಲ್ಲಿ ಚಿತ್ರೀಕರಿಸಿರುವ ಈ ಚಿತ್ರವನ್ನ ಫೆಬ್ರವರಿ 21 ರಂದು ರಾಜ್ಯಾದಾದ್ಯಂತ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

ನಾಯಕಿ ಧರಣಿ ಮಾತನಾಡಿ, ಹಳ್ಳಿಯ ಶಾಲಾ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದರು.ನಿಶಾಂತ್, ಬೇಬಿ ಸಾನ್ವಿ, ರಾಜನ್‍ಶೆಟ್ಟಿ, ಚೇತನ್‍ರಾವ್, ಪಾಲನಹಳ್ಳಿ ಉಮೇಶ್ ಈ ಚಿತ್ರದ ಉಳಿದ ತಾರಾ ಬಳಗದಲ್ಲಿ ನಟಿಸಿದ್ದಾರೆ.

ಸತೀಶ್‍ಬಾಬು ಸಂಗೀತ, ರಮೇಶ್‍ರಾಜು ಛಾಯಾಗ್ರಹಣ, ವಿಕ್ರಂ ಯಶೋಧರ ಸಹ ನಿರ್ದೇಶಕರಾಗಿದ್ದಾರೆ. ಲೋಕಲ್ ರೌಡಿಸಂನೊಂದಿಗೆ ಅಪ್ಪಟ ಪ್ರೇಮ ಹಾಗೂ ಹಳ್ಳಿ ರಾಜಕೀಯವನ್ನು ಬಿಂಬಿಸುವ ಶಿವ ಚಿತ್ರವು ರಘುಗೆ ಚಿತ್ರರಂಗದಲ್ಲಿ ನೆಲೆ ಕಲ್ಪಿಸುವಂತಾಗಲಿ.

Share This With Your Friends

Related posts