Cinisuddi Fresh Cini News 

ಸಕ್ಸಸ್ ಸಂಭ್ರಮದಲ್ಲಿ ‘ಶಿವಾಜಿ ಸುರತ್ಕಲ್’

ಲವ್, ದೇವದಾಸ, ಕಾಮಿಡಿ ಪಾತ್ರಗಳಿಂದಲೇ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಸ್ಯಾಂಡಲ್‍ವುಡ್‍ನ ಸುಂದರ ನಟ ರಮೇಶ್ ಅರವಿಂದ್‍ಗೆ ಕ್ರೈಮ್, ಸಸ್ಪೆನ್ಸ್ ಚಿತ್ರಗಳು ಒಗ್ಗುತ್ತದೆ ಎಂಬುದನ್ನು ಶಿವಾಜಿ ಸುರತ್ಕಲ್ ಚಿತ್ರವು ಸಾಬೀತುಪಡಿಸಿದೆ.

ಶಿವಾಜಿ ಸುರತ್ಕಲ್ ಚಿತ್ರವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದರಿಂದ ಚಿತ್ರದ ನಿರ್ಮಾಪಕರು ಮೊನ್ನೆ ಸಕ್ಸಸ್ ಮೀಟ್ ಅನ್ನು ಹಮ್ಮಿಕೊಂಡಿದ್ದರು. ಅಲ್ಲಿ ಕಲಾವಿದರು, ತಂತ್ರಜ್ಞರು ತಮ್ಮ ಮನದಾಳವನ್ನು ತೆರೆದಿಟ್ಟರು.ಪರಭಾಷಾ ಚಿತ್ರಗಳ ಅಬ್ಬರ ನಡುವೆ ಒಂದು ವಾರದಲ್ಲೇ ಚಿತ್ರಮಂದಿರಗಳಿಂದ ಕನ್ನಡ ಚಿತ್ರಗಳು ಎತ್ತಂಗಡಿಯಾಗುತ್ತಿದ್ದಾರೆ, ಶಿವಾಜಿಸುರತ್ಕಲ್ ಹೆಚ್ಚೆಚ್ಚು ಚಿತ್ರಮಂದಿರಗಳು ದೊರೆಯುತ್ತಿರುವುದು ಯುವ ನಿರ್ದೇಶಕ ಆಕಾಶ್ ಶ್ರೀವತ್ಸರ ಸಂತಲವನ್ನು ಇಮ್ಮಡಿಗೊಳಿಸಿದೆ.

ನಟ ರಮೇಶ್ ಅರವಿಂದ್ ಮಾತನಾಡಿ, ನನ್ನ 30 ವರ್ಷಗಳ ಚಿತ್ರ ಜೀವನದ ಪಯಣದಲ್ಲಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದ ನನ್ನನ್ನು ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರೇಕ್ಷಕರು ಒಪ್ಪುತ್ತಾರೋ ಇಲ್ಲವೋ ಎಂಬ ಭಯ ಇತ್ತು ಅದು ಈಗ ದೂರವಾಗಿದೆ. ಶಿವಾಜಿಸುರತ್ಕಲ್ ಚಿತ್ರದ ಪ್ರದರ್ಶನ ಹೆಚ್ಚಾಗುತ್ತಿರುವುದು ಕೂಡ ನನಗೆ ಸಂತಸ ತಂದಿದೆ ಎಂದು ಹೇಳಿದರು.

ನಿರ್ದೇಶಕ ಆಕಾಶ್ ಶ್ರೀವತ್ಸ ಮಾತಾಡಿ, ಶಿವಾಜಿಸುರತ್ಕಲ್‍ಗೆ ಸಿಗುತ್ತಿರುವ ಪ್ರೊತ್ಸಾಹ ನೋಡಿರುವ ನಾವು ಈ ವಾರ ಚಿತ್ರವನ್ನು ಚೆನ್ನೈ, ಹೈದರಾಬಾದ್‍ನಲ್ಲೂ ಬಿಡುಗಡೆ ಮಾಡುತ್ತಿದ್ದೇವೆ, ಅಲ್ಲದೆ ಮುಂದಿನ ತಿಂಗಳು ವಿದೇಶಗಳಲ್ಲೂ ಪ್ರದರ್ಶನ ಮಾಡಲಿದ್ದೇವೆ ಎಂದು ಹೇಳಿದರು.ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದ್ದು, ಜಯಂತ್ ಕಾಯ್ಕಿಣಿ , ಕೆ. ಕಲ್ಯಾಣ್ ಹಾಗು ಆಕಾಶ್ ಶೀವತ್ಸ ಸಾಹಿತ್ಯ ರಚಿಸಿದ್ದಾರೆ.

ಈ ಚಿತ್ರದಲ್ಲಿ ರಮೇಶ್ ಒಬ್ಬ ಡಿಟೆಕ್ಟಿವ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ರಾಧಿಕಾ ನಾರಾಯಣ್ ಹಾಗು ಆರೋಹಿ ನಾರಾಯಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ರೇಖಾ ಕೆ. ಎನ್. ಹಾಗೂ ಅನುಪ್ ಗೌಡ ನಿರ್ಮಿಸಿದ್ದಾರೆ. ಅಭಿಜಿತ್ ವೈ. ಆರ್. ಹಾಗೂ ಆಕಾಶ್ ಶ್ರೀವತ್ಸ ಚಿತ್ರದ ಕಥೆ ಬರೆದಿದ್ದಾರೆ.

ಈ ಚಿತ್ರದ ವಿತರಣೆ ಹಕ್ಕನ್ನು ಕೆ.ಆರ್.ಜಿ. ಸ್ಟುಡಿಯೋ ಪಡೆದುಕೊಂಡಿತ್ತು.ಇದುವರೆಗೂ ರಮೇಶ್ ನಟಿಸಿರುವ 100 ಚಿತ್ರಗಳಲ್ಲಿ ಹಲವು ಏಳು ಬೀಳು ಕಂಡಿದ್ದರೂ 101ನೆ ಚಿತ್ರದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭರ್ಜರಿ ಓಪನ್ನಿಂಗ್ ಅನ್ನೇ ಪಡೆದುಕೊಂಡಿದ್ದಾರೆ. ಈ ಗೆಲುವು 200 ಚಿತ್ರಗಳವರೆಗೂ ಮುಂದುವರೆಯಲಿ.

Related posts