Cinisuddi Fresh Cini News 

ರಣಗಿರಿ ರಹಸ್ಯ ಭೇದಿಸಲು ರೆಡಿಯಾದ ‘ಶಿವಾಜಿ ಸುರತ್ಕಲ್’

ಸ್ಯಾಂಡಲ್‍ವುಡ್‍ನ ಸುಂದರ ನಟ ರಮೇಶ್ ಅರವಿಂದ್ ರಣಗಿರಿ ರಹಸ್ಯವನ್ನು ಭೇದಿಸಲು ಹೊರಟಿರುವ ಶಿವಾಜಿ ಸುರತ್ಕಲ್ ಚಿತ್ರವು ಶಿವರಾತ್ರಿ ಹಬ್ಬದಂದು ತೆರೆಕಾಣಲು ಹೊರಟಿದೆ.
ವೆಂಕಟ ಇನ್ ಸಂಕಟ ಚಿತ್ರದ ನಂತರ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮೇಶ್, ಶಿವಾಜಿ ಸುರತ್ಕಲ್‍ನಲ್ಲಿ ಡಿಟೆಕ್ಟಿವ್ ಆಗಿದ್ದು ಕೊಲೆಯ ರಹಸ್ಯವನ್ನು ಭೇದಿಸಲು ಹೊರಟಿದ್ದು ಮೊನ್ನೆ ಈ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಲಕ್ಷಾಂತರ ವೀಕ್ಷಕರು ಇದನ್ನು ವೀಕ್ಷಿಸಿದ್ದಾರೆ.

ನಿರ್ದೇಶಕ ಆಕಾಶ್ ಶ್ರೀವತ್ಸ ಮಾತನಾಡಿ, ಪವರ್‍ಗೆ ಮತ್ತೊಂದು ಹೆಸರು ಶಿವಾಜಿ, ಸುರತ್ಕಲ್ ಎಂದರೆ ಮೆದುಳು. ಇವೆರಡನ್ನೂ ಟೈಟಲ್ ಆಗಿ ಹೊಂದಿರುವ ಶಿವಾಜಿ ಸುರತ್ಕಲ್‍ಗೆ ದಿ ಕೇಸ್ ಆಫ್ ರಣಗಿರ ರಹಸ್ಯ ಎಂಬ ಅಡಿಬರಹವಿದೆ. ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಚಿತ್ರದ ಇತರೆ ತಾರಾಗಣದಲ್ಲಿ ಸುಕನ್ಯ, ನಿಶಾಂತ್. ಪಿ.ಡಿ. ಸತೀಶ್, ರೋಹಿತ್ ಭಾನುಪ್ರಕಾಶ್, ಧನುಷ್, ಅಮಿತಾ, ಕಿಶೋರ್ ಮುಂತಾದವರು ನಟಿಸಿದ್ದಾರೆ ಎಂದು ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.

ನಿರ್ಮಾಪಕ ಅನೂಪ್‍ಗೌಡ ಮಾತನಾಡಿ, ಇಂದಿನ ಕಾಲದಲ್ಲಿ ಚಿತ್ರವನ್ನ ನಿರ್ಮಿಸುವುದು ದೊಡ್ಡ ಸವಾಲು. ಆದರೆ ನಟ ರಮೇಶ್ ಅರವಿಂದ್ ಅವರು ತೋರಿದ ಸಹಕಾರದಿಂದಾಗಿ ಚಿತ್ರೀಕರಣ ಸುಲಲಿತವಾಗಿ ಸಾಗಿದೆ. ನನಗೆ ನನ್ನ ಸೋದರಿ ಕೆ.ಎನ್.ರೇಖಾ ಕೂಡ ಕೈಜೋಡಿಸಿದರು ಎಂದು ಹೇಳಿದರು.

ನಾಯಕ ನಟ ರಮೇಶ್ ಅರವಿಂದ್ ಮಾತನಾಡ, ನನ್ನ 101 ನೆ ಚಿತ್ರದಲ್ಲಿ 100 ವಿವಿಧ ಶಕ್ತಗಳು ಕೆಲಸ ಮಾಡಿದೆ. ಹಾಲಿವುಡ್‍ನ ಶೆರ್ಲಾಕ್ ಹೋಂರನ್ನು ನೆನಪಿಸುವಂತಹ ಪಾತ್ರ ನನ್ನದು. ಈ ಚಿತ್ರದ ಪಾತ್ರಧಾರಿ ವಿನಯ್‍ಗೌಡ ಕೊಲೆಯಾಗುತ್ತಾನೆ ಅವನನ್ನು ಯು ಕೊಲೆ ಮಾಡಿದರು ಎಂಬುದನ್ನು ಕಂಡು ಹಿಡಿಯುವುದೇ ದೊಡ್ಡ ಛಾಲೆಂಜಿಂಗ್ ಆಗಿದ್ದು ಅದನ್ನು ಹೇಗೆ ಭೇದಿಸುತ್ತೇನೆ ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ. ಕತೆಗಾರ ಅಭಿಜಿತ್ ಒಂದೇ ರಿಸಾರ್ಟ್‍ದಲ್ಲಿ 35 ದಿನಗಳ ಕಾಲ ಒಂದು ವಿಷಯ, ಚಿತ್ರದ ಬಗ್ಗೆ ಚರ್ಚೆ ನಡೆಸುತ್ತಿದ್ದೆವು ಎಂದು ಹೇಳಿದರು.

ನಾಯಕನ ಪತ್ನಿ ಹಾಗೂ ವಕೀಲೆಯಾಗಿ ಕಾಣಿಸಿಕೊಂಡಿರುವ ನಾಯಕಿ ರಾಧಿಕಾ ನಾರಾಯಣ್, ಸೈಕ್ರಿಯಾಟಿಸ್ಟ್ ಆಗಿ ಆರೋಹಿ ನಾರಾಯಣ್, ಛಾಯಾಗ್ರಾಹಕ ಗುರುಪ್ರಸಾದ್.ಎಂ.ಜಿ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಇದೇ ತಿಂಗಳ 21ರಂದು ಶಿವಾಜಿ ಸುರತ್ಕಲ್ ರಾಜ್ಯದ್ಯಂತ ತೆರೆ ಕಾಣಲಿದ್ದು ಪ್ರೇಕ್ಷಕ ಮನ ಗೆಲ್ಲುವಂತಾಗಲಿ.

Share This With Your Friends

Related posts