Cinisuddi Fresh Cini News 

ಜಾಲಿ ರೈಡ್ ಬೇಕಿತ್ತಾ ಶರ್ಮಿಳಾ..?

ಪ್ರತಿಯೊಬ್ಬ ನಾಗರಿಕರು ಸೇಫ್ ಆಗಿ ಮನೇಲಿದ್ದು ಪ್ರಾಣವನ್ನು ಉಳಿಸಿಕೊಳ್ಳೋಣ ಎಂದು ಚಡಪಡಿಸುತ್ತಿರುವ ಈ ಸಮಯದಲ್ಲಿ ಜಾಲಿ ರೈಡ್ ಬೇಕಿತ್ತಾ ಶರ್ಮಿಳಾ ಮಾಂಡ್ರೆ. ಸಂಪೂರ್ಣ ಭಾರತವೇ ಲಾಕ್‌ಡೌನ್‌ ಆಗಿದೆ. ಈ ಸಮಯದಲ್ಲಿ ಈ ರೀತಿಯ ಅವಾಂತರಗಳು ಎಷ್ಟರ ಮಟ್ಟಿಗೆ ಸರಿ ಹೇಳಿ. ಕಾನೂನು ಉಲ್ಲಂಘನೆ ಮಾಡುವುದು ಮಹಾ ದೊಡ್ಡ ಅಪರಾಧ.

ರಸ್ತೆಗಳು ಪ್ರಶಾಂತವಾಗಿವೆ ಎಂಬ ಕಾರಣಕ್ಕೆ ಸರ್ಕಾರದ ನಿಯಮಗಳನ್ನು ಮೀರಿ ರಾತ್ರೋ ರಾತ್ರಿ ಗೆಳೆಯ ಲೋಕೇಶ್ ಜೊತೆ ಜಾಲಿ ರೈಡ್ ಹೋಗಿದ್ದಾರೆ ನಟಿ ಶರ್ಮಿಳಾ ಮಾಂಡ್ರೆ. ವಸಂತ ನಗರದ ಬಳಿ ಇರುವ ಅಂಡರ್ ಪ್ಲಸ್ ಫ್ಲೈಓವರ್ನ ಕಂಬವೊಂದಕ್ಕೆ ಓವರ್ ಸ್ಪೀಡ್ ಹೋಗಿ ಕಾರು ಅಪಘಾತವಾಗಿದೆ.

ಜಾಗ್ವಾರ್ ಕಾರಿನಲ್ಲಿದ್ದ ಏರ್ ಬ್ಯಾಗ್ ತಕ್ಷಣ ಓಪನ್ ಆಗಿದ್ದು ದೊಡ್ಡ ಮಟ್ಟದ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ನಟಿ ಶರ್ಮಿಳಾ ಮಾಂಡ್ರೆಗೆ ಮುಖಕ್ಕೆ ಪೆಟ್ಟಾದರೆ ಗೆಳೆಯ ಲೋಕೇಶ್ ಗೆ ಕೈಗೆ ಬಲವಾಗಿ ಪೆಟ್ಟಾಗಿದೆಯಂತೆ ಇವರಿಬ್ಬರು ಹತ್ತಿರದ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತದನಂತರ ಫ್ಯಾಮಿಲಿ ಡಾಕ್ಟರ್ ಬಳಿ ತೋರಿಸಿಕೊಳುತ್ತೇವೆ ಎಂದು ಹೊರಟು ಹೋಗಿದ್ದಾರೆ.

ಇದು ಕಾನೂನು ಉಲ್ಲಂಘನೆ ಆಗಿದ್ದು , ಪೊಲೀಸರು ಕೇಸನ್ನು ದಾಖಲಿಸಿಕೊಂಡಿದ್ದಾರೆ. ಈಗ ನಟಿ ಶರ್ಮಿಳಾ ಹಾಗೂ ಲೋಕೇಶ್ನನ್ನು ಹುಡುಕುತ್ತಿದ್ದಾರೆ. ಇವರ ಕಾರು ಬಹಳ ದೊಡ್ಡ ಮಟ್ಟದ ಡ್ಯಾಮೇಜ್ ಆಗಿದ್ದು , ಈ ಮಟ್ಟದ ಅಪಘಾತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮುಂದಿನ ತನಿಖೆಯಲ್ಲಿ ಈ ಎಲ್ಲಾ ವಿಚಾರಗಳು ಹೊರಬರಬೇಕಾಗಿದೆ.

ಈ ಬೆಡಗಿ ಸಜನಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು, ಮಾಂಡ್ರೆ ಕುಟುಂಬದ ಈ ಬೆಡಗಿ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.ನೆಮ್ಮದಿಯಾಗಿ ಮನೆಯಲ್ಲಿ ಇರುವುದು ಬಿಟ್ಟು ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಮುಂದೆ ಏನೆಲ್ಲ ಎದುರಿಸಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕು. ಇದನ್ನು ಗಮನಿಸಿದ ಪ್ರತಿಯೊಬ್ಬ ನಾಗರಿಕರು ಹಾಗೂ ಸೆಲೆಬ್ರಿಟಿಗಳು ಜಾಗೃತವಾಗಿರಿ. ನಿಮ್ಮ ಜೀವಕ್ಕೆ ನೀವೇ ಹೊಣೆ, ಹುಷಾರಾಗಿ ಮನೆಯಲ್ಲಿರಿ.

Share This With Your Friends

Related posts