Cinisuddi Fresh Cini News 

ಪ್ರೀತಿ ಸಂಕೇತದ ‘ಸೇರು ನನ್ನ ತೋಳಲ್ಲಿ’

‘ಲೈಫ್ 360’ ಚಿತ್ರದಲ್ಲಿ ನಟಿಸಿದ್ದ ಅರ್ಜುನ್‍ಕಿಶೋರ್‍ಚಂದ್ರ ‘ಸೇರು ನನ್ನ ತೋಳಲ್ಲಿ’ ಐದು ನಿಮಿಷದ ವಿಡಿಯೋ ಆಲ್ಬಂ ಗೀತೆಗೆ ರಚನೆ,ಸಾಹಿತ್ಯ ಮತ್ತು ನಾಯಕನಾಗಿ ನಟಿಸಿದ್ದು, ‘ಭಿನ್ನ’ ಸಿನಿಮಾದ ನಾಯಕಿ ಪಾಯಲ್‍ರಾಧಕೃಷ್ಣ ಜೋಡಿಯಾಗಿದ್ದಾರೆ. ವೈದ್ಯರಾಗಿ ವಿನಾಯಕ್‍ಜೋಷಿ ಕಾಣಿಸಿಕೊಂಡಿದ್ದಾರೆ.

ರ್ಯಾಪರ್ ಸಿದ್ದು ಆಲ್ಬಂನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ‘ಸೇರು ನಿನ್ನ ತೋಳಲ್ಲಿ, ನನ್ನಾಣೆ ನೀನೇ ನನ್ನ ಉಸಿರಲ್ಲಿ’ ಸಾಹಿತ್ಯವಿರುವ ಗೀತೆಯಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿದ ನಿಜವಾದ ಪ್ರೀತಿ ಏನೆಂಬುದನ್ನು ಹೇಳಲಾಗಿದೆ.

ಚಿಕ್ಕಮಗಳೂರು, ಬೆಂಗಳೂರು ಸುಂದರ ತಾಣಗಳಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿದ್ದು, ಸುಮಾರು ಏಳು ಲಕ್ಷ ಖರ್ಚು ಆಗಿರುತ್ತದೆ. ಸಂಗೀತ,ಗಾಯನ ಹಾಗೂ ನಿರ್ದೇಶನ ಅದ್ವಿಕ್, ಛಾಯಾಗ್ರಹಣ ಅಭಿಮನ್ಯು ಸದಾನಂದ್ ಅವರದಾಗಿದೆ. ಗಗನ್.ಜೆ.ಗೌಡ-ಸುನಿಲ್‍ಕುಮಾರ್ ಜಂಟಿಯಾಗಿ ಕ್ರಾಂತಿ ಕ್ರಿಯೇಶನ್ಸ್ ಮೂಲಕ ನಿರ್ಮಾಣ ಮಾಡಿರುವ ಹಾಡನ್ನು ಡಿಸಿ ಕ್ರಿಯೇಶನ್ಸ್ ಬಿಡುಗಡೆ ಮಾಡಿದ್ದಾರೆ.

ಸದರಿ ಗೀತೆಯು ಇತ್ತೀಚೆಗಷ್ಟೆ ಪ್ರಾರಂಭಗೊಂಡಿರುವ ಭಾನುಪ್ರತಾಪ್.ಎಸ್. ಒಡೆತನದ ’50 ಎಂಎಂ’ ಸ್ಟುಡಿಯೋದಲ್ಲಿ ಚಿತ್ರೀಕರಣೋತ್ತರ ಕೆಲಸಗಳು ನಡೆದಿದೆ. ಸ್ಟುಡಿಯೋ ಅತ್ಯಾಧುನಿಕ ತಂತ್ರಜ್ಘಾನ ಒಳಗೊಂಡಿದ್ದು, ಇದರಲ್ಲಿ ಡಿಐ, ಎಡಿಟಿಂಗ್, ಕಲರ್ ಗ್ರೇಡಿಂಗ್, ವಿಎಫ್‍ಎಕ್ಸ್, ಡಬ್ಬಿಂಗ್ ಮುಂತಾದ ಸೌಲಭ್ಯಗಳು ಆಕರ್ಷಕ ದರದಲ್ಲಿ ಲಭ್ಯವಿರುತ್ತದೆ. ಮುಂದೆ ಕ್ರಾಂತಿ ಕ್ರಿಯೇಶನ್ಸ್ ಹಾಗೂ 50 ಎಂಎಂ ಸ್ಟುಡಿಯೋ ಸೇರಿಕೊಂಡು ಸಿನಿಮಾ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.

Share This With Your Friends

Related posts