ಸೆಪ್ಟೆಂಬರ್ 26ಕ್ಜೆ “ಬನಾರಸ್” ಚಿತ್ರದ ಟ್ರೇಲರ್ ಲಾಂಚ್.
ಚಂದನವನದಲ್ಲಿ ಮತ್ತೊಂದು ಸುಂದರ ದೃಶ್ಯಕಾವ್ಯ ತೆರೆಮೇಲೆ ಬರಲು ಸಜ್ಜಾಗಿದೆ. ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವಂತಹ ಚಿತ್ರವೇ “ಬನಾರಸ್”.ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದಲ್ಲಿ ಪಂಚ ಭಾಷೆಯಲ್ಲಿ ಮೂಡಿ ಬರ್ತಿರುವ “ಬನಾರಸ್” ಸಿನಿಮಾದ ಟ್ರೇಲರ್ ಇದೇ 26ಕ್ಕೆ ರಿಲೀಸ್ ಆಗ್ತಿದೆ. ಝೈದ್ ಖಾನ್ ನಾಯಕನಾಗಿ, ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸಿದ್ದು, ಜಯತೀರ್ಥ ನಿರ್ದೇಶನದಲ್ಲಿ ಚಿತ್ರ ತಯಾರಾಗಿರುವ ಈ ಚಿತ್ರ ನವೆಂಬರ್ 4ರಂದು ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ. ಬನಾರಸ್ ಚಿತ್ರತಂಡ ಈಗಾಗಲೇ ಪ್ರಚಾರ ಕಾರ್ಯವನ್ನು ಅದ್ದೂರಿಯಾಗಿ ಆರಂಭಿಸಿದ್ದು , 5ಭಾಷೆಗಳಲ್ಲಿ ಭಾರಿ ಸದ್ದನ್ನೇ ಸೃಷ್ಟಿಸಿದೆ. ಇದೆ ಇಪ್ಪತ್ತಾರು ಟ್ರೈಲರ್ ಬಿಡುಗಡೆ ಆಗುತ್ತಿದ್ದು, ನಂತರ ಇನ್ನೂ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನೀಡಲಿದೆಯಂತೆ.