Cinisuddi Fresh Cini News 

ರಿವೀಲ್ ಆಯ್ತು ಕೆ.ಜಿ.ಎಫ್-2 ನಲ್ಲಿ ಸಂಜಯ್ ದತ್ ಲುಕ್…?!

ಇಡೀ ವಿಶ್ವವ್ಯಾಪಿ ಬಾರಿ ಸಂಚಲನವನ್ನೇ ಮೂಡಿಸಿದಂತ ಚಿತ್ರ ಕೆ.ಜಿ.ಎಫ್. ರಾಕಿಂಗ್ ಸ್ಟಾರ್ ಯಶ್ ಗೆ ಒಂದು ಹೊಸ ಇಮೇಜ್ ನೀಡಿದ ಈ ಚಿತ್ರ ದಾಖಲೆಗಳ ಪುಟ ಸೇರಿದೆ.

ಈಗ ಭಾಗ -2 ಚಿತ್ರೀಕರಣ ನಡೆಯುತ್ತಿದ್ದು , ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಹಾವಳಿಯಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.

ಈ ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ಕಲಾವಿದರು ಕೂಡ ಕಾಣಿಸಿಕೊಂಡಿರುವುದು ವಿಶೇಷ. ಕನ್ನಡ ಸಿನಿಮಾ ಕ್ಷೇತ್ರವನ್ನು ದೇಶ, ವಿದೇಶವೇ ತಿರುಗಿ ನೋಡಿದ್ದು, ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಅಭಿನಯಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಈಗ ವಿಶೇಷ ಏನೆಂದರೆ ಅವರ ಒಂದು ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೌದು ಇಡೀ ಕೆ.ಜಿ.ಎಫ್ ಚಿತ್ರ ತಂಡ ಬಹಳ ಸೂಕ್ಷವಾಗಿ ಎಲ್ಲಿಯೂ ಕೂಡ ಚಿತ್ರೀಕರಣದ ಸ್ಟಿಲ್ಸ್ ಗಳನ್ನು ಹೊರಬಿಡದಂತೆ ಬಹಳ ಜೋಪಾನವಾಗಿ ಕಾಪಾಡಿಕೊಂಡಿದ್ದು, ಅದರಲ್ಲೂ ವಿಶೇಷವಾಗಿ ಸಂಜಯ್ ದತ್ ಅವರ ಫೋಟೋಗಳನ್ನು ರಿವೀಲ್ ಮಾಡಿದ ಮಾಡದಂತೆ ಕಾಪಾಡಿಕೊಂಡಿದ್ದರು. ಆದರೆ ಅದೇಗೋ ಒಂದು ಫೋಟೋ ಈಗ ರಿವಿಲ್ ಆಗಿದೆ.

ಅಧೀರಾ ನ ಲುಕ್ ನಲ್ಲಿ ಕಾಣುವ ಈ ಫೋಟೋ ಕೆ.ಜಿ.ಎಫ್-2 ಚಿತ್ರದ ಚಿತ್ರೀಕರಣದ ಸಮಯದಲ್ಲಿ ತೆಗೆದಿರಬಹುದು ಎನ್ನಲಾಗುತ್ತಿದೆ . ಸಂಜಯ್ ದತ್ ಇದೇ ಹೇರ್ ಸ್ಟೈಲ್ ನ ಬಿಯರ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿರಬಹುದು ಇಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಪೋಸ್ಟರ್ ದೊಡ್ಡ ಹವಾ ಕ್ರಿಯೇಟ್ ಮಾಡುತ್ತಿದೆ. ಪ್ರಶಾಂತ್ ನೀಲ್ ಸಾರಥ್ಯದ ಈ ಚಿತ್ರ ಹೊಂಬಾಳೆ ಫಿಲ್ಮ್ ಮೂಲಕ ವಿಜಯ್ ಕಿರಗಂದೂರು ಜಂಟಿಯಾಗಿ ಹೊಸ ದಾಖಲೆ ಬರೆಯಲು ಸಿದ್ಧರಾಗುತ್ತಿದ್ದಾರೆ.

Share This With Your Friends

Related posts