Cinisuddi Fresh Cini News 

ಕೆ.ಜಿ.ಎಫ್ ತಂಡದಿಂದ ಅಧೀರನಿಗೆ ಬರ್ತ್ಡೇ ಗಿಫ್ಟ್

ಕಳೆದೆರಡು ದಿನಗಳಿಂದ ಅಂತರ್ಜಾಲದಲ್ಲಿ ಕೆಜಿಎಫ್ 2 ಚಿತ್ರದ ಬಗ್ಗೆ ಸೆನ್ಸೇಷನ್ ಸುದ್ದಿ ಹೊರಬೀಳುತ್ತದೆ ಎಂದು ಬಿಂಬಿಸುತ್ತಿದ್ದರಿಂದ ಯಶ್‍ನ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಸೃಷ್ಟಿಯಾಗಿತ್ತು.

ತಮ್ಮ ನೆಚ್ಚಿನ ಹೀರೋ ಬಗ್ಗೆ ಏನಾದರೂ ಹೊಸದೊಂದು ಸುದ್ದಿಯೋ, ವೀಡಿಯೋ ಅಥವಾ ಫೋಟೋವನ್ನು ಪ್ರಕಟಿಸುತ್ತಾರೋ ಎಂದು ಯಶ್‍ನ ಅಭಿಮಾನಿಗಳು ಲೆಕ್ಕಾಚಾರ ಹಾಕಿಕೊಂಡಿದ್ದರು, ಆದರೆ ಈಗ ಕೆಜಿಎಫ್-2ನ ಬಗ್ಗೆ ಮೂಡಿದ್ದ ಎಲ್ಲಾ ಕುತೂಹಲ ಅಂಶಗಳಿಗೂ ಸ್ಪಷ್ಟ ಉತ್ತರ ಸಿಕ್ಕಿದೆ.

ಕೆಜಿಎಫ್ 2 ಸಿನಿಮಾದ ಬಗ್ಗೆ ಈಗಾಗಲೇ ಮೂಡಿಬಂದಿದ್ದ ಅನೇಕ ಪೋಸ್ಟರ್‍ಗಳು ಕುತೂಹಲ ಮೂಡಿಸಿದಂತೆ ಮೊನ್ನೆ ಬಾಲಿವುಡ್ ನಟ ಸಂಜಯ್‍ದತ್‍ರ ಹುಟ್ಟುಹಬ್ಬದಂದು ಹೊಂಬಾಳೆ ಫಿಲಂಸ್ ಬಿಡುಗಡೆಗೊಳಿಸಿರುವ ಅಧೀರನ ಪೋಸ್ಟರ್ ಕೂಡ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ಕನ್ನಡದ ಮೊದಲ ಫ್ಯಾಬ್ ಚಿತ್ರವೆಂದು ಬಿಂಬಿಸಿಕೊಂಡಿರುವ ಕೆಜಿಎಫ್‍ನಲ್ಲೇ ಅಧೀರನ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲಗಳು ಕೆರಳಿದ್ದವು. ಅಧೀರನ ಪಾತ್ರದ ವೈಭವ ಹೇಗಿರುತ್ತದೆ, ಅಧೀರನಾಗಿ ಯಾವ ಜನಪ್ರಿಯ ನಟ ನಟಿಸುತ್ತಾನೆ ಎಂಬುವುದರ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಮೂಡಿಸಿದ್ದರು.

ಕೆಜಿಎಫ್ 2 ಚಿತ್ರದ ಶೂಟಿಂಗ್ ಆರಂಭಗೊಂಡಾಗಲೂ ಅಧೀರನ ಪಾತ್ರ ಸ್ವತಃ ಯಶ್ ಅಭಿಮಾನಿಗಳನ್ನೇ ಕಾಡಿತ್ತಂತೆ. ಕೊನೆಗೆ ಬಾಲಿವುಡ್‍ನ ಸ್ಟಾರ್ ನಟ ಸಂಜಯ್‍ದತ್ ಅವರು ಆ ಪಾತ್ರಕ್ಕೆ ಆಯ್ಕೆಗೊಂಡ ನಂತರ ಚಾಪ್ಟರ್ 2 ಚಿತ್ರವು ಕೆಜಿಎಫ್ ಚಾಪ್ಟರ್ ಒಂದಕ್ಕಿಂತ ಹೆಚ್ಚು ಕ್ರೇಜ್ ಹುಟ್ಟಿಸಿದೆ.

ಸಂಜಯ್‍ದತ್‍ನ ಹುಟ್ಟುಹಬ್ಬದಂದು ಚಿತ್ರತಂಡ ಪ್ರಕಟಿಸಿರುವ ಫೋಟೋದಲ್ಲಿ ಅಧೀರ ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಕುಳಿತಿರುವ ಫೋಟೋ ಅಂತರ್ಜಾಲಗಳಲ್ಲಿ ಧಗ ಧಗಿಸುತ್ತಿದೆ.

ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿರುವುದರಿಂದ ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಬಿಂಬಿಸುತ್ತಿದೆ.

ಚಾಪ್ಟರ್ 2ನಲ್ಲಿ ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬುದು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.

ಕೆಜಿಎಫ್ 2 ಚಿತ್ರದ ಬಹುತೇಕ ಚಿತ್ರೀಕರಣವು ಈಗಾಗಲೇ ಮುಗಿದಿದ್ದು ಮೈಸೂರಿನಲ್ಲಿ ನಡೆದ ಶೂಟಿಂಗ್‍ನಲ್ಲಿ ಅಧೀರನ ಪಾತ್ರಧಾರಿಯಾಗಿ ಸಂಜಯ್‍ದತ್ ಕೂಡ ನಟಿಸಿದ್ದು ಈ ದೃಶ್ಯಗಳಿಗೂ ಕೂಡ ಅಂತರ್ಜಾಲದಲ್ಲಿ ಸಾಕಷ್ಟು ರೆಸ್ಪಾನ್ಸ್ ಸಿಕ್ಕಿತ್ತು, ಈಗ ಬಿಡುಗಡೆಗೊಂಡಿರುವ ಅಧೀರನ ಹೊಸ ಲುಕ್ ಕೂಡ ರಿವೀಲ್ ಆಗಿದ್ದು ಚಿತ್ರದಲ್ಲಿ ಯಶ್ ಪಾತ್ರದಷ್ಟೇ ಸಂಜಯ್‍ದತ್‍ರ ಪಾತ್ರಕ್ಕೂ ತೂಕವಿದೆ ಎಂಬುದನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಾಬೀತುಪಡಿಸಿದ್ದಾರೆ.

ದಸರಾ ಉಡುಗೊರೆಯಾಗಿ ಅಕ್ಟೋಬರ್‍ನಲ್ಲಿ ಕೆಜಿಎಫ್ 2 ಚಿತ್ರವನ್ನು ಬಿಡುಗದಡೆ ಮಾಡಲು ಚಿತ್ರತಂಡವು ಯೋಚಿಸುತ್ತಿದೆ. ಈ ಚಿತ್ರದಲ್ಲಿ ರಾಂಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ಸ್ಟಾರ್ ಸಂಜಯ್‍ದತ್‍ನೊಂದಿಗೆ ಮೋಹಕ ಬೆಡಗಿ ಶ್ರೀನಿಧಿಶೆಟ್ಟಿ, ರವೀನಾಟಂಡನ್ ಕೂಡ ನಟಿಸಿದ್ದಾರೆ.

ಕೆಜಿಎಫ್ ಚಿತ್ರದಂತೆ ಚಾಪ್ಟರ್ 2 ಚಿತ್ರವು ಕನ್ನಡ, ತೆಲುಗು, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು ಈಗಾಗಲೇ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಚಿತ್ರಕ್ಕೆ ಬಾಕಿ ಇರುವ ಕೆಲ ದೃಶ್ಯಗಳ ಶೂಟಿಂಗ್ ಮುಗಿಸಿಕೊಂಡು ದಸರಾ ವೇಳೆಗೆ ಕೆಜಿಎಫ್- 2 ಚಿತ್ರವು ಚಿತ್ರಮಂದಿರಗಳಲ್ಲಿ ಅಬ್ಬರಿಸುವಂತಾಗಲಿ.

Share This With Your Friends

Related posts