Cinisuddi Fresh Cini News 

“ಯಾಕೋ ಬೇಜಾರು” ಚಿತ್ರದಲ್ಲಿ ಹಾಟ್ ಸಂಹಿತಾ ವಿನ್ಯಾ

ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸಂಹಿತಾ ವಿನ್ಯಾ, ನಾಯಕಿಯಾಗೂ ಚಿರಪರಿಚಿತ. ಪ್ರಸ್ತುತ ಇವರು ನಾಯಕಿಯಾಗಿ ನಟಿಸಿರುವ “ಯಾಕೋ ಬೇಜಾರು” ಚಿತ್ರದ ಟ್ರೇಲರ್ ಇದೇ ಜುಲೈ ಒಂದರಂದು ಬಿಡುಗಡೆಯಾಗಲಿದೆ.

ಗಾಲಿ ಲಕ್ಕಿ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಸಂಹಿತಾ, ಆರ್ ಜೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಆರಂಭದಿಂದ ಕೊನೆಯತನಕ ಚುರುಕಾದ ಸಂಭಾಷಣೆ ಮೂಲಕ ಸಂಹಿತಾ ವಿನ್ಯಾ ಎಲ್ಲರ ಗಮನ ಸೆಳೆಯುತ್ತಾರೆ.

ಮಾತಿನಮಲ್ಲಿಯಾಗಿ ನೋಡುಗರನ್ನು ರಂಜಿಸಲಿದ್ದಾರೆ. ಲವ್ ಜಾನರ್ ನ ಈ ಚಿತ್ರದ ಟ್ರೇಲರ್ ಜುಲೈ ಒಂದರಂದು ಬಿಡುಗಡೆಯಾಲಿದ್ದು, ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಖ್ಯಾತ ವಸ್ತ್ರ ವಿನ್ಯಾಸಕಾರ ಫಾರೆವರ್ ನವೀನ್ ಕುಮಾರ್ ಸಂಹಿತಾ ವಿನ್ಯಾ ಅವರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. ವಿ.ನಂದಿ ಸಹ ನಿರ್ದೇಶನ ಹಾಗೂ ಸುಬ್ರಹ್ಮಣ್ಯ ಜೆ ವೈದ್ಯ ಅವರ ಛಾಯಾಗ್ರಹಣ “ಯಾಕೋ ಬೇಜಾರು” ಚಿತ್ರಕ್ಕಿದೆ.”ಯಾಕೋ ಬೇಜಾರು” ಚಿತ್ರ ಹಾಗೂ ನನ್ನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುತ್ತಾರೆ ಸಂಹಿತಾ ವಿನ್ಯಾ.

ಇದು ಸಂಹಿತಾ ಅವರು ನಾಯಕಿಯಾಗಿ ನಟಿಸಿರುವ ಹನ್ನೊಂದನೆಯ ಸಿನಿಮಾ. “ವಿಷ್ಣು ಸರ್ಕಲ್”, ” ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು” ಸೇರಿದಂತೆ ಕನ್ನಡದಲ್ಲಿ ಇವರು ಅಭಿನಯಿಸಿರುವ ಆರು ಚಿತ್ರಗಳು ಈಗಾಗಲೇ ತೆರೆ ಕಂಡಿದೆ.

ತಮಿಳು, ತೆಲುಗಿನಲ್ಲೂ ಇವರ ಚಿತ್ರ ಬಿಡುಗಡೆಯಾಗಿದೆ.ಇತ್ತೀಚೆಗೆ ತೆರೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾ “ಯೂ ಆರ್ ಮೈ ಹೀರೋ” ಚಿತ್ರ ಸಂಹಿತಾ ವಿನ್ಯಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿದೆ. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಮಾಡಲಿಂಗ್ ಕ್ಷೇತ್ರದಲ್ಲೂ ಸಂಹಿತಾ ವಿನ್ಯಾ ಅವರ ಹೆಸರು ಪ್ರಸಿದ್ದಿಯಲ್ಲಿದೆ.

ಫಾರೆವರ್ ನವೀನ್ ಕುಮಾರ್ ಅವರ ಅನೇಕ ಫ್ಯಾಷನ್ ಶೋಗಳ ಮೂಲಕ ಸಂಹಿತಾ ವಿನ್ಯಾ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನ ಹೆಸರಾಂತ ನಟಿಯರು ಭಾಗವಹಿಸಿದ್ದ ಮೆಟ್ ಗಾಲದಲ್ಲೂ ಸಂಹಿತಾ ವಿನ್ಯಾ ಭಾಗವಹಿಸಿದ್ದಾರೆ. ಏಕಕಾಲಕ್ಕೆ ಮಾಡಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಹಿತಾ ವಿನ್ಯಾ ಎರಡು ಕ್ಷೇತ್ರಗಳಲ್ಲೂ ಪ್ರಸಿದ್ದಿ ಪಡೆಯುತ್ತಿದ್ದಾರೆ.

Related posts