Cinisuddi Fresh Cini News 

‘ಸಲಗ’ ಯಶಸ್ಸಿಗೆ ಮಸೀದಿಯಲ್ಲಿ ವಿಶೇಷ ಪೂಜೆ, ಚಿತ್ರ ನೋಡಲು ಸಿಕ್ಕಾಪಟ್ಟೆ ಕ್ರೇಜ್..!

ಅಕ್ಟೋಬರ್ 14 ಸ್ಯಾಂಡಲ್ವುಡ್ ಸಿನಿ ಪ್ರಿಯರ ಪಾಲಿಗೆ ತುಂಬಾನೇ ಸ್ಪೆಷಲ್. ಸ್ಯಾಂಡಲ್ವುಡ್ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಒಂದೇ ದಿನ ತೆರೆ ಕಾಣಲಿದ್ದು, ಈ ರೇಸ್ನಲ್ಲಿ ದುನಿಯಾ ವಿಜಯ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಲಗ ಕೂಡ ಇದೇ ಎನ್ನುವುದೇ ವಿಜಿ ಫ್ಯಾನ್ಸ್ಗಳಿಗೆ ಹಬ್ಬ. ಈಗಾಗಲೇ ಸಖತ್ ಹೈಪ್ ಕ್ರಿಯೆಟ್ ಮಾಡಿರುವ ಸಲಗ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದಂತೂ ಗ್ಯಾರಂಟಿಯಾಗಿದೆ.

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ ಸಲಗ ಎಂದು ಘೋಷಣೆ ಮಾಡಿದ್ದೇ ತಡ, ಅಂದಿನಿಂದ ಇಂದಿನಿಂದವರೆಗೂ ಸಲಗನ ಕ್ರೇಜ್ ಒಂದಿಷ್ಟು ಕಮ್ಮಿಯಾಗಿಲ್ಲ. ಚಿತ್ರ ತೆರೆ ಕಾಣಲು ಡೇಟ್ ಫಿಕ್ಸ್ ಆಗಿದ್ದೇ ತಡ, ವಿಜಯ್ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ.

ಎದೆ, ಕೈ ಮೇಲೆ ಸಲಗ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಇಷ್ಟಕ್ಕೆ ಮುಗೀತು ಅಂದ್ಕೊಂಡ್ರ ಇಲ್ಲ..ಒಂದಿಷ್ಟು ಭಕ್ತಗಣ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಮಸೀದಿಯಲ್ಲಿ ಪೂಜೆ ಕೂಡ ಮಾಡಿಸಿದ್ದಾರೆ, ಕೆಲವರು ಹರಕೆ ಹೊತ್ತಿದ್ದಾರೆ. ಈ ಮಟ್ಟಿಗೆ ವಿಜಿ ಸಲಗ ಚಿತ್ರರಸಿಕರಲ್ಲಿ ಕಿಕ್ಕೇರಿಸಿದೆ.

ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡುಗಳು ಸ್ಯಾಂಡಲ್ವುಡ್ ಅಂಗಳದಲ್ಲಿ ಹಲ್ ಚಲ್ ಎಬ್ಬಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಲಗ ಚಿತ್ರಕ್ಕೆ ಟಗರು ಖ್ಯಾತಿಯ ಮಾಸ್ತಿ ಸಂಭಾಷಣೆ . ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

Related posts