Cini Reviews Cinisuddi Fresh Cini News 

ಮನ ಮುಟ್ಟುವ ಪಯಣ “ಸಾಗುತಾ…ದೂರ..ದೂರ” ( ಚಿತ್ರ ವಿಮರ್ಶೆ -ರೇಟಿಂಗ್ : 4/5)

ಚಿತ್ರ : ಸಾಗುತ ದೂರ ದೂರ ನಿರ್ದೇಶಕ : ರವಿತೇಜಾ ನಿರ್ಮಾಪಕ : ಅಮಿತ್ ಪೂಜಾರಿ
ಸಂಗೀತ : ಮಣಿಕಾಂತ್ ಕದ್ರಿ
ಛಾಯಾಗ್ರಹಣ : ಅಭಿಲಾಷ್ ಕತ್ತಿ
ತಾರಾಗಣ : ಮಹೇಶ್ ಸಿದ್ದು , ಅಪೇಕ್ಷಾ ಪವನ್ ಒಡೆಯರ್ , ಆಶಿಕ್ ಆರ್ಯ , ನವೀನ್ ಕುಮಾರ್ , ಗಡ್ಡಪ್ಪ , ಸೂರಜ್ , ಉಷಾ ಭಂಡಾರಿ , ಮೋಹನ್ ಜುನೇಜಾ , ಹೊನ್ನವಳ್ಳಿ ಕೃಷ್ಣ ಹಾಗೂ ಮುಂತಾದವರು…

ಅಮ್ಮ ಅನ್ನೋ ಪದ ಕೇಳಿದಾಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ಯಾಕೆಂದ್ರೆ ತಾಯಿ ಇಲ್ಲದೆ ಜಗತ್ತೇ ಇಲ್ಲ. ಸರ್ವ ಜೀವಕೋಟಿಗೂ ತಾಯಿಯೇ ಮೂಲ. ಅಂತಹ ತಾಯಿ ಮಕ್ಕಳ ಕಥಾನಕವನ್ನು ನವಿರಾಗಿ ಮನಮುಟ್ಟುವ ರೀತಿಯಲ್ಲಿ ಗಮನ ಸೆಳೆಯಲು ಬಂದಿರುವಂತಹ ಚಿತ್ರವೇ ಸಾಗುತ ದೂರ ದೂರ.

ಇವತ್ತಿನ ದಿನದಲ್ಲಿ ಎಷ್ಟೋ ಮಕ್ಕಳಿಗೆ ತಾಯಿ ಪ್ರೀತಿ ಅನೋದು ಸಿಗುವುದೇ ಇಲ್ಲ. ಆದರೆ ಇನ್ನು ಕೆಲವರಿಗೆ ತಾಯಿ ಪ್ರೀತಿ ಸಿಕ್ಕಿದ್ದರೂ ಅದಕ್ಕೆ ಬೆಲೆ ಕೊಡುವಷ್ಟು ಯೋಗ್ಯತೆ ಇರುವುದಿಲ್ಲ. ಇತ್ತೀಚೆಗೆ ಹೆಚ್ಚಾಗಿ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳು ತಲೆ ದೋರುತ್ತಿವೆ. ತಾಯಿ ಮೇಲೆ ಕನಿಕರ ತೋರದೆ ಎಷ್ಟೋ ಮಕ್ಕಳು ಇವತ್ತಿಗೂ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ.

ಅದೇ ರೀತಿ ಏನೋ ಕೆಟ್ಟಗಳಿಗೆಯಲ್ಲಿ ಮಕ್ಕಳ ಅನಾಥ ಮಾಡಿ ದುಷ್ಟ ಬುದ್ದಿಯನ್ನು ತೋರಿಸುತ್ತಾರೆ ಎಂಬ ಅಂಶಗಳನ್ನು ನಿರ್ದೇಶಕ ರವಿತೇಜಾ ಈ ಚಿತ್ರದ ಮೂಲಕ ಕಥೆ ಕಟ್ಟಿಕೊಟ್ಟಿದ್ದಾರೆ. ಇನ್ನು ಒಬ್ಬ ಹುಡುಗ ಸಿಕ್ಕಿದ ಅಂತಾ ಅವರನ್ನು ನಂಬಿ ಸಾಕಿದ ತಾಯಿಯನ್ನೇ ಬಿಟ್ಟು ಬರುತ್ತಾರೆ . ಅದರ ಪರಿಣಾಮ ಏನಾಗುತ್ತದೆ ಎಂಬ ಆಲೋಚನೆ ಕೂಡ ಮಾಡುವುದಿಲ್ಲ.

ಅಂದಹಾಗೆ ಇವತ್ತಿನ ಪ್ರಪಂಚದಲ್ಲಿ ನೋಡೋಕೆ ಕೆಟ್ಟವರು ಎಂದು ಬಿಂಬಿಸಿ ಕ್ರಿಮಿನಲ್ ಅಂದುಕೊಳ್ಳುತ್ತಾರೆ . ಒಳ್ಳೆಯವರಿಗೆ ಬೆಲೆ ಜಾಸ್ತಿ ಕೊಡುತ್ತಾರೆ. ಕೆಟ್ಟವರು ಯಾವತ್ತು ಕ್ರಿಮಿನಲ್ ಅಲ್ಲ, ಒಳ್ಳೆಯವರು ಎಂಬುದು ಚಿತ್ರದಲ್ಲಿ ಕೆಲವು ಎಳೆಯನ್ನು ಅಚ್ಚುಕಟ್ಟಾಗಿ ನಿರ್ದೇಶಕರು ತೋರಿಸಿದ್ದಾರೆ.

ಚಿತ್ರದ ಕಥಾ ಹಂದರದ ಪ್ರಕಾರ ಅಮ್ಮನನ್ನು ಕಳೆದುಕೊಂಡ ಆಶು ಹುಡುಕಾಟದಲ್ಲಿ ನಿರತರಾಗಿರುತ್ತಾನೆ. ಈ ವೇಳೆ ಮಧ್ಯೆ ಸಿಕ್ಕ ಮೆಂಟಲ್ ಮಹೇಶ್( ಮಹೇಶ್ ಸಿದ್ದು) ಭೇಟಿಯಾಗುತ್ತಾರೆ. ಈ ಹಿಂದೆ ಮಹೇಶ್ ಸುಮ್ಮನೆ ಎಲ್ಲರು ಜೊತೆ ಜಗಳ, ಹೊಡಿಯುತ್ತಿದ್ದ ಎಂಬ ಕಾರಣಕ್ಕೆ ತಾಯಿ ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಿರುತ್ತಾಳೆ.

ಆಗ ಸೇರಿಸಿ ಹೋದ ತಾಯಿ ಕೊನೆಯವೆರೆಗೂ ಅವನನ್ನು ನೋಡಲು ಬರುವುದೇ ಇಲ್ಲ. ಹಾಗಾಗಿ ಇವನು ತಾಯಿಯನ್ನು ದ್ವೇಷಿಸುತ್ತಿರುತ್ತಾನೆ. ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡು ತಾಯಿ ನೋಡಲು ಹೊರಟಾಗ ಚಿಕ್ಕಹುಡುಗ ಆಶು ಸಿಗುತ್ತಾನೆ. ಇಬ್ಬರು ಸೇರಿ ತಾಯಿನಾಡು ಗುಬ್ಬಿಗೂಡುನತ್ತ ಅಮ್ಮನ ಕಾಣಲು ಹೋಗುತ್ತಾರೆ. ಈ ವೇಳೆ ಯಾವ ರೀತಿ ಕಷ್ಟಗಳನ್ನು ಎದುರಿಸುತ್ತಾರೆ .

ಹಾಗೆ ಆಶುನನ್ನು ತಾಯಿ ಯಾಕೆ ಬಿಟ್ಟುಹೋಗುತ್ತಾಳೆ ಎಂಬುದು ಚಿತ್ರದ ಕ್ಲೈಮಾಕ್ಸ್. ಮಧ್ಯಂತರ ನಂತರ .. ಇಡೀ ಸಿನಿಮಾ ಕುತೂಹಲದ ಅಂಶಗಳನ್ನು ತೆರೆದಿಡುತ್ತದೆ . ಒಬ್ಬ ಹುಡುಗನಿಗಾಗಿ ನಂದಿನಿ (ಅಪೇಕ್ಷಾ ) ಅಮ್ಮನ ಬಿಟ್ಟು ಅವನ ಜೊತೆ ಬರುತ್ತಾಳೆ.

ಆಗ ಅವನು ನಂದಿನಿಗೆ ಮೋಸ ಮಾಡಿ ಬಿಟ್ಟು ಹೋಗುತ್ತಿದ್ದಂತೆ ತಾಯಿಯನ್ನು ನೋಡಲು ಬಂದಾಗ ಅವಳು ಅವಮಾನ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗುತ್ತಾಳೆ . ಅವಳಿಗೂ ಪಶ್ಚತಾಪ ಕಾಡಿ ದುಡ್ಡಿಗಾಗಿ ಅಡ್ಡದಾರಿಯನ್ನು ಹಿಡಿಯುತ್ತಾಳೆ. ಅಲ್ಲಿ ಇವರಿಬ್ಬರು ಪರಿಚಯವಾಗಿ ಅವಳ ಪಯಣ ಸಾಗುತ್ತದೆ. ಚಿಕ್ಕ ಹುಡುಗನಿಗೆ ತಾಯಿ ಸಿಕ್ಕರು ಆತ ಏನು ಮಾಡುತ್ತಾನೆ ಎಂದು ತಿಳಿದುಕೊಳ್ಳಲು ಸಿನಿಮಾ ನೋಡಬೇಕಾಗುತ್ತದೆ.

ಚಿತ್ರದ ನಿರೂಪಣೆ ಶೈಲಿ ಚೆನ್ನಾಗಿದ್ದು, ಎಲ್ಲೂ ಬೋರ್ ಹೊಡೆಸದೆ ಕುತೂಹಲದಿಂದಲೇ ಸಿನಿಮಾ ಸಾಗುತ್ತದೆ. ಚಿತ್ರದ ಮಧ್ಯೆ ಸಂಭಾಷಣೆ ಹೃದಯಕ್ಕೆ ಹತ್ತಿರವಾಗುವಂತಿತ್ತು. ಇನ್ನು ನವೀನ್ ಕುಮಾರ್ ನಟನೆ ಚೆನ್ನಾಗಿ ಮೂಡಿಬಂದಿದೆ. ಮಹೇಶ್ ಸಿದ್ದು ಅಭಿನಯ ಅದ್ಭುತವಾಗಿದ್ದು, ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಅಪೇಕ್ಷಾ ಪವನ್ ಒಡೆಯರ್ ಪಾತ್ರದಿಂದ ಈ ಚಿತ್ರಕ್ಕೆ ಮತ್ತಷ್ಟು ಮೆರೆಗು ತಂದಿದೆ. ಸ್ಕ್ರೀನ್ ಮೇಲೆ ಕ್ಯೂಟ್ ಆಗಿ ಕಾಣಿಸುತ್ತಾರೆ . ಮಣಿಕಾಂತ್ ಕದ್ರಿ ಅವರ ಸಂಗೀತ ಪ್ರೇಕ್ಷಕರಿಗೆ ಮತ್ತೆ ಮತ್ತೆ ಕೇಳುವಂತೆ ಮಾಡಿದೆ. ತಾಯಿಯ ಫೀಲಿಂಗ್ ಸಾಂಗ್ ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ಇದೆ.

ಅಭಿಲಾಶ್ ಕತ್ತಿ ಅವರ ಛಾಯಾಗ್ರಹಣ ದೃಶ್ಯಗಳು ಕಲರ್‍ಫುಲ್ ಆಗಿ ಮೂಡಿಬಂದಿದೆ. ಪ್ರಸ್ತುತ ವೇಗವಾಗಿ ಸಾಗುತ್ತಿರುವ ಚಿತ್ರಗಳ ಸಾಲಿಗೆ ಹೋಲಿಸಿದರೆ ಈ ಚಿತ್ರದ ಓಟ ಸ್ವಲ್ಪ ನಿಧಾನ ಅನಿಸುತ್ತದೆ. ಆದರೂ ಕಥೆಗೆ ಪೂರಕವಾಗಿದೆ. ಈ ಚಿತ್ರವನ್ನು ಕುಟುಂಬ ಸಮೇತರಾಗಿ ಕುಳಿತು ಎಲ್ಲರೂ ಒಮ್ಮೆ ನೋಡಬಹುದಾಗಿದೆ.

Share This With Your Friends

Related posts