Cinisuddi Fresh Cini News 

ತಾಯಿಯ ಮಮತೆಯನ್ನು ಬಿಂಬಿಸುವಂತಹ ‘ಸಾಗುತ ದೂರ ದೂರ’

ಹೆಣ್ಣಿನ ಮಮತೆಯನ್ನು ಬಿಂಬಿಸುವಂತಹ ಅನೇಕ ಚಿತ್ರಗಳು ಬಂದಿದ್ದರೂ ಕೂಡ ತಾಯಿ ಮಮತೆಯೇ ದೊಡ್ಡದು ಎಂದು ಸಾಗುತ ದೂರ ದೂರ ಚಿತ್ರತಂಡದವರು ಹೇಳಲು ಹೊರಟಿದ್ದಾರೆ. ಮೊನ್ನೆ ಈ ಚಿತ್ರದಲ್ಲಿರುವ ತಾಯಿಯ ಮಮತೆಯನ್ನು ಬಿಂಬಿಸುವಂತಹ ಗೀತೆಯನ್ನು ನಟಿ ಅನುಪ್ರಭಾಕರ್ ಬಿಡುಗಡೆ ಮಾಡಿದರೆ, ಧ್ವನಿಸುರುಳಿಯನ್ನು ತುಪ್ಪದ ಹುಡುಗಿ ರಾಗಿಣಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ರಾಗಿಣಿ ಮಾತನಾಡಿ, ಈ ಚಿತ್ರದ ಶೀರ್ಷಿಕೆ ತುಂಬಾ ಚೆನ್ನಾಗಿದೆ, ಶೀರ್ಷಿಕೆಗಳಿಂದಲೇ ಹಲವು ಚಿತ್ರಗಳು ಸಕ್ಸಸ್ ಕಂಡಿದ್ದು ಈ ಚಿತ್ರವು ಅದೇ ಸಾಲಿಗೆ ಸೇರಲಿದೆ. ಈ ಚಿತ್ರದ ನಿರ್ಮಾಪಕರು ಹೊಸಬರಿಗೇ ಮಣೆ ಹಾಕಿರುವುದು ಸಂತಸಕರ ವಿಷಯ. ಕತೆ ಮೇಲೆ ಆಸಕ್ತಿ ವಹಿಸಿ ಸಿನಿಮಾ ಮಾಡಿದರೆ ಮಾತ್ರ ಸಿನಿಮಾ ಗೆಲ್ಲುತ್ತದೆ ಎಂದು ಕಿವಿಮಾತು ಹೇಳಿದರು.

ಲಹರಿ ವೇಲು ಮಾತನಾಡಿ, ಇತ್ತೀಚೆಗೆ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಹೊರತು ಗುಣಮಟ್ಟ ಕಳೆದು ಹೋಗಿದೆ. ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಮೂಲಕ ಸಕ್ಸಸ್ ರೇಟ್ ಅನ್ನು ಹೆಚ್ಚಿಸಿ ಎಂದು ಹೇಳಿದರು.

ತೇತ್ರಾಯುಗದಲ್ಲಿ ರಾಮ , ರಾವಣರಿದ್ದಂತೆ ಕಲಿಯುಗದಲ್ಲಿ ಕೃಷ್ಣ, ಕಂಸರಿದ್ದರು. ಅವರ ಗುಣಗಳು ಬೇರೆ ಬೇರೆಯಾಗಿದ್ದರೂ ಕೂಡ ಅವರಿಗೆ ಜನ್ಮ ನೀಡಿದ್ದು ಮಾತ್ರ ತಾಯಿ. ಹುಟ್ಟುತ್ತಲೇ ಯಾರೂ ಕೆಟ್ಟವರು, ಒಳ್ಳೆಯವರಾಗುವುದಿಲ್ಲ ನಾವು ನಡೆಯುವ ಹಾದಿಯಲ್ಲಿರುತ್ತದೆ ಎಂದು ಚಿತ್ರದ ಇಡೀ ಸಾರಾಂಶವನ್ನು ಒಂದೇ ಹೇಳಿದವರು ನಟ ವಶಿಷ್ಠಸಿಂಹ.

ಈ ಚಿತ್ರದಲ್ಲಿರುವ ಯುವಕ ಮತ್ತು ಹುಡುಗನೊಬ್ಬ ಯಾವುದೋ ಒಂದು ಕಾರಣಕ್ಕಾಗಿ ಮನೆ ಬಿಟ್ಟು ಹೋಗುತ್ತಾರೆ. ಇಬ್ಬರು ತಪ್ಪಿಸಿಕೊಂಡು ಒಟ್ಟಿಗೆ ಸೇರುತ್ತಾರೆ. ನಂತರಒಂದೊಂದು ಭಾಗದಲ್ಲಿಒಬ್ಬೊಬ್ಬರನ್ನು ಭೇಟಿ ಮಾಡಿ ಸಹಾಯತೆಗೆದುಕೊಂಡು,ಅವರದೊಂದು ಗುರಿ ಇರುತ್ತದೆ. ಆ ಗುರಿಗೆ ಚಿತ್ರದ ಶೀರ್ಷಿಕೆ ಅನ್ವಯವಾಗುತ್ತದೆ. ಮುಂದೇನು ಎಂಬುದನ್ನು ಸಿನಿಮಾ ನೋಡಬೇಕಂತೆ.

ಅಪೇಕ್ಷಾಪುರೋಹಿತ್‍ಗೆ ಬೆಲವೆಣ್ಣು ಪಾತ್ರ, ತಾಯಿಯಾಗಿ ಉಷಾಭಂಡಾರಿ, ಗೌಡರ ಮಗಳಾಗಿ ದಂತವೈದ್ಯೆ ಜಾನ್ವಿಜ್ಯೋತಿ, ಪೊಲೀಸ್‍ಅಧಿಕಾರಿಯಾಗಿ ಕುಮಾರ್‍ನವೀನ್, ಯುವಕನಾಗಿ ಮಹೇಶ್‍ಸಿದ್ದು ನಟಿಸಿದ್ದಾರೆ. ರವಿತೇಜ ನಿರ್ದೇಶಕರಾಗಿಎರಡನೆ ಪ್ರಯತ್ನ. ಸಂಗೀತಕದ್ರಿಮಣಿಕಾಂತ್, ಛಾಯಾಗ್ರಾಹಕ ಅಭಿ ಅವರದಾಗಿದೆ.

ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ ಮತ್ತು ಮೈಸೂರು ಭಾಗದಲ್ಲಿರುವ ಒಟ್ಟಾರೆ ಇನ್ನೂರು ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಮ್ಮನ ಸಲುವಾಗಿ ಅನಿಲ್‍ಪೂಜÁರಿ ಖುಷಿ ಕನಸು ಕ್ರಿಯೇಶನ್ಸ್ ಮುಖಾಂತರ ನಿರ್ಮಾಣ ಮಾಡಿರುವ ಚಿತ್ರವು ಪ್ರೇಮಿಗಳ ದಿನದಂದು ತೆರೆಕಾಣುತ್ತಿರುವ ಈ ಚಿತ್ರವು ಬಹಳ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಶತದಿನೋತ್ಸವವನ್ನು ಪೂರೈಸುವಂತಾಗಲಿ.

Share This With Your Friends

Related posts