Cinisuddi Fresh Cini News 

ಈ ವಾರ ತೆರೆಗೆ ಬರುತ್ತಿದೆ ಸಾಗುತ ದೂರದೂರ’ ಚಿತ್ರ

ದಿವ್ಯ ಪೂಜಾರಿ ಅರ್ಪಿಸುವ, ಖುಷಿ ಕನಸು ಕ್ರಿಯೇಷನ್ಸ್ ಲಾಂಛನದಲ್ಲಿ ಅಮಿತ್ ಪೂಜಾರಿ ಅವರು ನಿರ್ಮಿಸಿರುವಸಾಗುತ ದೂರದೂರ` ಚಿತ್ರ ಈ ವಾರ ತೆರೆಗೆ ಬರಲಿದೆ. ಅನಿಲ್ ಪೂಜಾರಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ರವಿತೇಜ ನಿರ್ದೇಶನದ ಈ ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಸಂಗೀತ ನಿರ್ದೇಶನವಿದೆ. ಸತೀಶ್ ಬಾಬು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್, ಸಂತೋಷ್ ನಾಯಕ್ ಬರೆದಿದ್ದಾರೆ. ಅಭಿಲಾಶ್ ಕಲಾತಿ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷ ಪವನ್ ಒಡೆಯರ್, ಮಹೇಶ್ ಸಿದ್ದು, ಆಶಿಕ್ ಆರ್ಯ, ಕುಮಾರ್ ನವೀನ್, ಗಡ್ದಪ್ಪ, ಸೂರಜ್, ಉಷಾ ಭಂಡಾರಿ, ಮೋಹನ್ ಜುನೇಜ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share This With Your Friends

Related posts